ಬೀದರ್: ಗ್ರಾಮೀಣಾಭಿವೃದ್ಧಿ ಸಚಿವಾಲಯ ಭಾರತ ಸರ್ಕಾರ, ಡಿಸಿಸಿ ಬ್ಯಾಂಕ್ ಆರ್ಎಸ್ಇಟಿ (ಶಾರದಾ ರುಡ್ಸೆಟಿ), ಬೀದರ್ ಮತ್ತು ಜಿಲ್ಲಾ ಪಂಚಾಯಿತಿ-ಎನ್ಆರ್ಎಲ್ಎಂ- ಬೀದರ್ ಸಹಯೋಗದಲ್ಲಿ ಜಿಲ್ಲೆಯ ಗ್ರಾಮೀಣ ಬಡ ನಿರುದ್ಯೋಗಿ ಯುವಕ/ಯುವತಿಯರಿಗೆ ಉಚಿತ ಕೌಶಲ್ಯ ಅಭಿವೃದ್ಧಿ-ಉದ್ಯಮಶೀಲತಾ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಯುವತಿಯರು, ಮಹಿಳೆಯರಿಗೆ ಫ್ಯಾಷನ್ ವಿನ್ಯಾಸ ಮತ್ತು ಟೈಲರಿಂಗ್ ತರಬೇತಿ, ಬ್ಯೂಟಿ ಪಾರ್ಲರ್ ನಿರ್ವಹಣೆ, ಕಸೂತಿ, ಅರಿ-ವರ್ಕ್ಗಳು, ಬ್ಲೌಸ್ಗಳು, ಡ್ರೆಸ್ಗಳು, ಬಟ್ಟೆ ವಿನ್ಯಾಸ, ಪಶು ಸಂಗೋಪನೆ ಆರ್ಪಿಎಲ್ ಕೋರ್ಸ್ಗಳು-ಡೈರಿ, ಕುರಿ, ಮೇಕೆ ಮತ್ತು ಕೋಳಿ ನಿರ್ವಹಣೆ, ಯುವಕರಿಗೆ ಸೆಲ್ ಫೋನ್ ರಿಪೇರಿ ಮತ್ತು ಮಾರಾಟ– ಸೇವೆ, ದ್ವಿಚಕ್ರ ವಾಹನ ದುರಸ್ತಿ, ಮಾರಾಟ ಮತ್ತು ಸೇವೆ, ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ನಿರ್ವಹಣೆ ಮತ್ತು ಮಾರಾಟ, ಕಂಪ್ಯೂಟರ್ ಹಾರ್ಡ್ವೇರ್ ರಿಪೇರಿ, ತರಬೇತಿ ನೀಡಲಾಗುತ್ತದೆ. ಗ್ರಾಮೀಣ ಬಡವರು, ಬಿಪಿಎಲ್, 18ರಿಂದ 45 ವರ್ಷ ವಯಸ್ಸಿನೊಳಗಿನ, 8ನೇ ತರಗತಿ ಮತ್ತು ಅದಕ್ಕಿಂತ ಹೆಚ್ಚಿನ ವ್ಯಾಸಂಗ ಎಸ್ಎಸ್ಎಲ್ಸಿ, ಪಿಯುಸಿ, ಪದವಿ, ಐಟಿಐ, ಡಿಪ್ಲೊಮಾ, ಉದ್ಯೋಗ ಆಧಾರಿತ ಕೋರ್ಸ್ಗಳು ಇತ್ಯಾದಿ ಅರ್ಹತೆ ಹೊಂದಿರಬೇಕು. ಹೆಚ್ಚಿನ ವಿವರಗಳಿಗೆ 9632212268 ಸಂಪರ್ಕಿಸಬಹುದು. ಏ. 31 ನೋಂದಣಿಗೆ ಕೊನೆ ದಿನ ಎಂದು ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-33-1706561820

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.