ಬೀದರ್: ರೋಟರಿ ಕ್ಲಬ್ ಬೀದರ್ ಸಿಲ್ವರ್ ಸ್ಟಾರ್ ವತಿಯಿಂದ ನಗರದ ಬಿವಿಬಿ ಕಾಲೇಜಿನ ಆವರಣದಲ್ಲಿ ಏರ್ಪಡಿಸಿದ್ದ ಕಲ್ಯಾಣ ಕರ್ನಾಟಕ ಉದ್ಯೋಗ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಮೇಳದಲ್ಲಿ ಐವತ್ತು ಕಂಪನಿಗಳು ಭಾಗಿಯಾಗಿದ್ದವು. ವಿವಿಧ ಕಡೆಯ 1,200ಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ಭಾಗಿಯಾಗಿದ್ದರು. ಕೆಲವರನ್ನು ಮತ್ತೊಂದು ಸುತ್ತಿನ ಸಂದರ್ಶನಕ್ಕೆ ಆಯ್ಕೆ ಮಾಡಲಾಯಿತು.

ವರ್ಚುವಲ್ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಸಂಸದ ತೇಜಸ್ವಿ ಸೂರ್ಯ, ಕಲ್ಯಾಣ ಕರ್ನಾಟಕದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಆದರೆ, ನಾಯಕತ್ವದ ಕೊರತೆ ಇದೆ. ಇದಕ್ಕೆ ಮುಖ್ಯ ಕಾರಣ ನಾವು. ನಾಯಕತ್ವವನ್ನು ಕೆಲವು ಕುಟುಂಬಕ್ಕೆ ಅಡ ಇಟ್ಟಿರುವುದು ಎಂದರು.

ರಾಜ್ಯದಲ್ಲಿ ವಾರ್ಷಿಕವಾಗಿ ಸಾಮಾನ್ಯ ಕನ್ನಡಿಗ ₹3 ಲಕ್ಷ ದುಡಿದರೆ, ಕಲ್ಯಾಣ ಕರ್ನಾಟಕ ಭಾಗದ ಸಾಮಾನ್ಯ ಜನ ₹1 ಲಕ್ಷ ದುಡಿಯುತ್ತಾನೆ. ಇದಕ್ಕೆ ಮುಖ್ಯ ಕಾರಣ ಇಲ್ಲಿನ ಶಿಕ್ಷಣ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಸುಮಾರು 25 ಸಾವಿರ ಶಿಕ್ಷಕರ ಕೊರತೆ ಇದೆ. ಇಂಥ ಸಮಸ್ಯೆಗಳನ್ನು ಸರಿಪಡಿಸಿದಾಗ ಈ ವ್ಯತ್ಯಾಸವನ್ನು ಸರಿದೂಗಿಸಬಹುದು ಎಂದು ಹೇಳಿದರು.

ರೋಟರಿ ಕ್ಲಬ್ ಬೀದರ್ ಸಿಲ್ವರ್ ಸ್ಟಾರ್ ಅಧ್ಯಕ್ಷ ಆದಿಶ್ ವಾಲಿ ಮಾತನಾಡಿ, ಬೀದರ್ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಇಂಥದ್ದೊಂದು ಮೇಳ ಹಮ್ಮಿಕೊಳ್ಳಲಾಗಿದೆ. ಈ ಭಾಗದವರಿಗೆ ವೇದಿಕೆ ಒದಗಿಸಿಕೊಡುವುದು ಇದರ ಮುಖ್ಯ ಉದ್ದೇಶ ಎಂದರು.

ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಶರಣು ಪಪ್ಪಾ, ರೋಟರಿಯನ್ ಬಸವರಾಜ ಧನ್ನೂರ, ಮೊಟೊಕ್ರಾಸ್ ಸಂಸ್ಥಾಪಕ ಕರಣ್ ಜಾವಲಿ, ಉದ್ಯಮಿ ಕ್ಷಿತೀಜಾ ಏರೋಳಕರ್, ಶರಣಬಸಪ್ಪ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅನಿಲಕುಮಾರ ಬಿಡವೆ, ರೋಟರಿ ಕಲ್ಯಾಣ ಝೋನ್ ಗವರ್ನರ್ ಹಾವಶೆಟ್ಟಿ ಪಾಟೀಲ, ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಗೌರವ ಕಾರ್ಯದರ್ಶಿ ವೀರೇಂದ್ರ ಶಾಸ್ತ್ರಿ, ವಾಲಿ ಗ್ರುಪ್ ನಿರ್ದೇಶಕಿ ಅಂಜನಾ ವಾಲಿ, ರೋಟರಿ ಸಿಲ್ವರ್ ಸ್ಟಾರ್ ಕಾರ್ಯದರ್ಶಿ ಕಿರಣ್ ಸ್ಯಾಮುಯೆಲ್, ಉಪಾಧ್ಯಕ್ಷ ಆನಂದ ಕೋಟಾರ್ಕಿ, ಯೋಜನಾ ನಿರ್ದೇಶಕಿ ಸಹನಾ ಪಾಟೀಲ, ಖಜಾಂಚಿ ನಿಹಾಲ್ ಸಿಂಗ್, ಜಂಟಿ ಕಾರ್ಯದರ್ಶಿ ಭಾವೇಶ ಪಟೇಲ್, ಪ್ರಸನ್ನ ಸಿಂಧೋಲ, ಶಿವರುದ್ರ ಗಂಗಶೆಟ್ಟಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-33-1845442696

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.