ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಪಿಎಫ್– ಎಸ್ಐ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ

ದೆಹಲಿ ಪೊಲೀಸ್ ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆ
Last Updated 24 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಕೇಂದ್ರದ ಸಿಬ್ಬಂದಿ ನೇಮಕಾತಿ ಆಯೋಗ (ಕರ್ನಾಟಕ , ಕೇರಳ ಪ್ರದೇಶ)– ಎಸ್‌ಎಸ್‌ಸಿ, ದೆಹಲಿ ಪೊಲೀಸ್ ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಸಬ್‌ಇನ್‌ಸ್ಪೆಕ್ಟರ್ (ಸಿಎಪಿಎಫ್‌–ಎಸ್‌ಐ) ಹುದ್ದೆಗಳ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿದೆ.

ಆನ್‌ಲೈನ್‌ನಲ್ಲಿ ನಡೆಯಲಿರುವ ಈ ಸ್ಪರ್ಧಾತ್ಮಕ ಪರೀಕ್ಷೆ, ಇದೇ ವರ್ಷದ ನವೆಂಬರ್ ತಿಂಗಳಲ್ಲಿ ನಿಗದಿಯಾಗಿದೆ ಎಂದು ಆಯೋಗದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಪರೀಕ್ಷೆ ನಡೆಯಲಿರುವ ನಿಖರ ದಿನಾಂಕವನ್ನು ಆಯೋಗದ ವೆಬ್‌ಸೈಟ್‌ ಮೂಲಕ ತಿಳಿಸುವು ದಾಗಿ ಹೇಳಿದೆ.‌

ಹುದ್ದೆಗಳ ಸಂಖ್ಯೆ : 4300 (ಪುರುಷ ಅಭ್ಯರ್ಥಿಗಳು – 4019, ಮಹಿಳಾ ಅಭ್ಯರ್ಥಿಗಳು – 281)

ವಿದ್ಯಾರ್ಹತೆ : ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ವಯೋಮಿತಿ : ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ 20 ಮತ್ತು ಗರಿಷ್ಠ 25 ವರ್ಷಗಳು. ಪರಿಶಿಷ್ಟ ಜಾತಿ(ಎಸ್‌.ಸಿ), ಪರಿಶಿಷ್ಟ ವರ್ಗ(ಎಸ್‌.ಟಿ) ವರ್ಗಕ್ಕೆ 5 ವರ್ಷಗಳು, ಇತರೆ ಹಿಂದುಳಿದ ವರ್ಗ(ಒಬಿಸಿ)ದ ಅಭ್ಯರ್ಥಿಗಳಿಗೆ 3 ವರ್ಷಗಳು ಮತ್ತು ಮಾಜಿ ಸೈನಿಕರಿಗೆ (ಇಎಸ್‌ಎಂ) 3 ವರ್ಷಗಳ ವಯೋಮಿತಿ ಸಡಿಲಿಕೆ ಇದೆ. ಈ ಕುರಿತ ಹೆಚ್ಚಿನ ವಿವರಕ್ಕೆ ಅಧಿಸೂಚನೆಯ ಪ್ಯಾರಾ 5. 2 ಅನ್ನು ನೋಡಬಹುದು.

ನೇಮಕಾತಿ ವಿಧಾನ :

ಎರಡು ಹಂತಗಳಲ್ಲಿ ಪರೀಕ್ಷೆ ನಡೆಯುತ್ತದೆ. ಮೊದಲ ಹಂತದಲ್ಲಿ ಅಭ್ಯರ್ಥಿಗಳ ದೈಹಿಕ ಗುಣಮಟ್ಟದ ಪರೀಕ್ಷೆ/ ದೈಹಿಕ ಸಹಿಷ್ಣುತೆ ಪರೀಕ್ಷೆ((Physical Standard Test (PST)/Physical Endurance Test (PET) ನಡೆಸಲಾಗುತ್ತದೆ. ನಂತರ ವೈದ್ಯಕೀಯ ಪರೀಕ್ಷೆಗಳೂ ಇರುತ್ತವೆ. ಇದರ ಜೊತೆಗೆ, ಆನ್‌ಲೈನ್ ಮೂಲಕ ಪರೀಕ್ಷೆ ಪರೀಕ್ಷೆಗಳು ನಡೆಯಲಿವೆ. ಈ ಪರೀಕ್ಷೆಯಲ್ಲಿ ಎರಡು ಪತ್ರಿಕೆಗಳಿರುತ್ತವೆ.

ಎರಡೂ ಪತ್ರಿಕೆಗಳಲ್ಲಿನ ಪ್ರಶ್ನೆಗಳು ಬಹುಆಯ್ಕೆ (ಆಬ್ಜೆಕ್ಟಿವ್) ಮಾದರಿಯಲ್ಲಿರುತ್ತವೆ. ಪೇಪರ್-I ರ ಭಾಗ I,II ಮತ್ತು III ರಲ್ಲಿ ಪ್ರಶ್ನೆಗಳು ಇಂಗ್ಲಿಷ್ ಹಾಗೂ ಹಿಂದಿಯಲ್ಲಿರುತ್ತವೆ. ಎರಡೂ ಪತ್ರಿಕೆಗಳಲ್ಲೂ ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಳೆಯಲಾಗುತ್ತದೆ(ನೆಗೆಟಿವ್ ಕರೆಕ್ಷನ್‌).

ಗಮನಿಸಿ: ಎನ್‌ಸಿಸಿ ಪ್ರಮಾಣ ಪತ್ರ ಹೊಂದಿರುವ ಅಭ್ಯರ್ಥಿಗಳಿಗೆ ಹೆಚ್ಚುವರಿ ಅಂಕಗಳನ್ನು ನೀಡಲಾಗುತ್ತದೆ. ಅದರಲ್ಲಿ ಎನ್‌ಸಿಸಿ ‘ಸಿ’ ಪ್ರಮಾಣ ಪತ್ರ ಹೊಂದಿರುವವರಿಗೆ 10 ಅಂಕಗಳು, ‘ಬಿ’ ಪ್ರಮಾಣ ಪತ್ರ ಹೊಂದಿದವರಿಗೆ 6 ಮತ್ತು ‘ಎ’ ಪ್ರಮಾಣ ಪತ್ರ ಹೊಂದಿರುವ ಅಭ್ಯರ್ಥಿಗಳಿಗೆ 4 ಅಂಕಗಳನ್ನು ಹೆಚ್ಚುವರಿಯಾಗಿ ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆ ದಿನ : ಆಗಸ್ಟ್‌ 30, 2022.

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. https://ssc.nic.in(ಎಸ್‌ಎಸ್‌ಸಿ ನೇಮಕಾತಿ ಪ್ರಕಟಣೆ ದಿನಾಂಕ ಆ.10, 2022) ಈ ಜಾಲತಾಣದ ಮೂಲಕ ಅರ್ಜಿ ಸಲ್ಲಿಸಬೇಕು. ಆನ್‌ಲೈನ್‌ನಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ ಕುರಿತು www.ssckkr.kar.nic.in ಮತ್ತು https://ssc.nic.in ಜಾಲತಾಣಗಳಿಗೆ ಭೇಟಿ ನೀಡಿ.

ಅಧಿಸೂಚನೆಗಾಗಿ: https://ssc.nic.in/SSCFileServer/PortalManagement/UploadedFiles/notice_SICPO_10082022.pdf ಜಾಲತಾಣ ನೋಡಿ.⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT