ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಸಂಜೀವಿನಿ-ಡೇ-ಎನ್.ಆರ್.ಎಲ್.ಎಂ ಯೋಜನೆಯಿಂದ ಮಹಿಳಾ ಸ್ವ ಸಹಾಯ ಗುಂಪುಗಳಿಗೆ ವಿವಿಧ ತರಬೇತಿ ನೀಡಿ, ಸ್ವ-ಉದ್ಯಮಗಳಲ್ಲಿ ತೊಡಗಿಸಿಕೊಳ್ಳಲು ಉತ್ತೇಜನ ನೀಡಲಾಗುತ್ತಿದೆ. ಆ ಫಲವಾಗಿ ಗ್ರಾಮೀಣ ಮಹಿಳಾ ಸ್ವ-ಸಹಾಯ ಗುಂಪಿನ ಸದಸ್ಯರುಗಳಿಂದ ಸಂಸ್ಕರಿಸಲಾದ ಉತ್ಪನ್ನಗಳನ್ನು ಬಳಸಿಕೊಂಡು ‘ಅಕ್ಕ ಮಾಡಿದ ಅಕ್ಕರೆಯ ತಿನಿಸುಗಳು’ ಎಂಬ ಬ್ರಾಂಡ್ನಡಿ ಉಡುಗೊರೆಯ ಬಾಕ್ಸ್, ಬುಟ್ಟಿಗಳನ್ನು ಪರಿಚಯಿಸಲಾಗಿದೆ. ಇವುಗಳನ್ನು ಖರೀದಿಸುವ ಮೂಲಕ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸಹಕಾರ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವೈ.ನವೀನ್ ಭಟ್ ಕೋರಿದ್ದಾರೆ.

ಮಸಾಲೆ ಗೋಡಂಬಿ, ಚಿಂತಾಮಣಿಯ ಮಸಾಲೆ ಕಡಲೆಬೀಜ, ನುಗೆ ಸೊಪ್ಪಿನ ಮಿಕ್ಸರ್, ಪೆರೇಸಂದ್ರ ಚಕ್ಕುಲಿ, ಬೆಲ್ಲದ ಕೊಬ್ಬರಿ ಮಿಠಾಯಿ, ರಾಗಿ/ನವಣೆ ಮುರುಕು, ಗುಲ್ಕನ್, ಬೇಲದಹಣ್ಣಿನ ತಿರುಳು, ಮಸಾಲೆ ಮಖಾನಾ, ಚಿಕ್ಕಿ, ರಾಗಿ ಲಡು ಸಹಿತ ಇನ್ನಿತರ ಸಿಹಿ ಹಾಗೂ ಖಾರದ ತಿನಿಸುಗಳನ್ನು ಒಳಗೊಂಡಂತೆ ಆಕರ್ಷಕವಾಗಿ ಸಿದ್ಧಪಡಿಸಲಾಗಿದೆ ಎಂದಿದ್ದಾರೆ.

ಸರ್ಕಾರದ ವಿವಿಧ ಕಾರ್ಯಕ್ರಮಗಳು, ಗಣ್ಯರ ಹುಟ್ಟುಹಬ್ಬದ ಶುಭಾಶಯ ಕೋರಲು, ಅತಿಥಿ ಸತ್ಕಾರಕ್ಕೆ, ಸನ್ಮಾನದಂತಹ ವಿಶೇಷ ಸಂದರ್ಭಗಳಿಗಾಗಿ ಸಕಾಲದಲ್ಲಿ ಕಚೇರಿಗಳಿಗೆ ಮನಬಾಗಿಲಿಗೆ ತಲುಪಿಸಲು ಸ್ವ-ಸಹಾಯ ಗುಂಪಿನ ಸದಸ್ಯರು ಆಸಕ್ತಿ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

ಗ್ರಾಮೀಣ ಮಹಿಳೆಯರು ಅಕ್ಕರೆಯಿಂದ ಸಿದ್ಧಪಡಿಸಿದ ಪ್ರಸಿದ್ಧವಾದ ತಿನಿಸುಗಳಿಗೆ ತಮ್ಮಿಂದ ಮತ್ತಷ್ಟು ಪುಚಾರ ಹಾಗೂ ಮಾರುಕಟ್ಟೆ ಒದಗಿಸುವುದರ ಮೂಲಕ ಮಹಿಳೆಯರಿಗೆ ಆರ್ಥಿಕ ಚೈತನ್ಯ ನೀಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ತಮ್ಮ ಕಚೇರಿಯಿಂದ ಆಯೋಜಿಸುವ ವಿವಿಧ ಕಾರ್ಯಕ್ರಮಗಳು, ಗಣ್ಯರ ಹುಟ್ಟುಹಬ್ಬದ ಶುಭಾಶಯ ಕೋರುವಿಕೆ, ಅತಿಥಿ ಸತ್ಕಾರ, ಸನ್ಮಾನ ಮುಂತಾದ ಸಂದರ್ಭಗಳಲ್ಲಿ ‘ಅಕ್ಕ ಮಾಡಿದ ಅಕ್ಕರೆಯ ತಿನಿಸುಗಳ’ ಉಡುಗೊರ ಬಾಕ್ಸ್ಗಳನ್ನು ಖರೀದಿಸಿ ಬಳಕೆ ಮಾಡುವ ಮೂಲಕ ಜಿಲ್ಲೆಯ ಮಹಿಳೆಯರ ಉತ್ಪಾದನಾ ಚಟುವಟಿಕೆಗಳನ್ನು ಉತ್ತೇಜಿಸಿಸಬೇಕು ಎಂದು ಕೋರಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-16-363080200

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.