ಬಾಳೆಹೊನ್ನೂರು: ಇಲ್ಲಿನ ಕಡ್ಲೆಮಕ್ಕಿಯಲ್ಲಿರುವ ಶ್ರೀಜಗದ್ಗುರು ರೇಣುಕಾಚಾರ್ಯ ಐಟಿಐನಲ್ಲಿ ಬೆಂಗಳೂರಿನ ಖಿವರಾಜ್ ಮೋಟರ್ಸ್ ಕಂಪನಿ ನಡೆಸಿದ ಸಂದರ್ಶನದಲ್ಲಿ ಕಾಲೇಜಿನ 20 ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶ ಲಭಿಸಿದ್ದು, ನೇಮಕಾತಿ ಆದೇಶ ಪತ್ರ ನೀಡಲಾಗಿದೆ.

ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿ ಬಿ.ದತ್ತರಾಜ್ ಮಾತನಾಡಿ, ‘ಐಟಿಐ ಉತ್ತೀರ್ಣರಾದವರಿಗೆ ವಿಪುಲ ಉದ್ಯೋಗವಕಾಶಗಳಿವೆ. ನಮ್ಮ ಕಂಪನಿಗೆ 20 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದ್ದು, ಆಯ್ಕೆಯಾದ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆ ಮುಗಿದ ನಂತರ ಉದ್ಯೋಗಕ್ಕೆ ಹಾಜರಾಗಬೇಕು. ಉದ್ಯೋಗ ಗ್ಯಾರಂಟಿ ಜೊತೆಗೆ ಇನ್ನಿತರ ಸೌಲಭ್ಯ ನೀಡಲಾಗುವುದು’ ಎಂದು ತಿಳಿಸಿದರು.

ಪ್ರಾಂಶುಪಾಲ ಎಚ್.ಆರ್.ಆನಂದ್, ಕಂಪನಿಯ ಎಂ.ಎನ್.ಆರ್ಥಿಕ್, ಶಿಕ್ಷಕರಾದ ಚಂದ್ರಶೇಖರ್, ಶ್ರೀನಿವಾಸ್, ಆಶೋಕ್, ಪ್ರಕಾಶ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-126-2078190436

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.