ಚಿಕ್ಕೋಡಿ: ‘ಸ್ಪರ್ಧಾತ್ಮಕ ಯುಗದಲ್ಲಿ ಯುವಕರು ಸಾಂಪ್ರದಾಯಿಕ ಶಿಕ್ಷಣದೊಂದಿಗೆ ಆಧುನಿಕ ತಂತ್ರಜ್ಞಾನದ ಜ್ಞಾನ ಪಡೆದುಕೊಳ್ಳಬೇಕು. ತಂತ್ರಜ್ಞಾನದ ಹೆಚ್ಚು ಬಳಕೆಯಿಂದ ಉದ್ಯೋಗವಕಾಶಗಳು ಹೆಚ್ಚು ದೊರೆಯುತ್ತವೆ’ ಎಂದು ಉದ್ಯಮಿ ಮೀನಾಕ್ಷಿ ಪಾಟೀಲ ಹೇಳಿದರು.

ನಿಪ್ಪಾಣಿ ತಾಲ್ಲೂಕಿನ ಬೋರಗಾಂವದಲ್ಲಿ ಅರಿಹಂತ ಉದ್ಯೋಗ ಸಮೂಹದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಕಳೆದ ಏಳು ವರ್ಷಗಳಿಂದ ಅರಿಹಂತ ಉದ್ಯೋಗ ಸಮೂಹದ ಕಾರ್ಯಾಧ್ಯಕ್ಷ ಅಭಿನಂದನ ಪಾಟೀಲ ಹಾಗೂ ಯುವ ಮುಖಂಡ ಉತ್ತಮ ಪಾಟೀಲ ಅವರು ಉದ್ಯೋಗ ಮೇಳ ಆಯೋಜಿಸಿ ಸಹಸ್ರಾರು ಜನರಿಗೆ ಉದ್ಯೋಗವಕಾಶ ಕಲ್ಪಿಸಿಕೊಟ್ಟಿದ್ದಾರೆ. ಇಂತಹ ಅವಕಾಶವನ್ನು ಯುವಕ-ಯುವತಿಯರು ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು. ಅರಿಹಂತ ಉದ್ಯೋಗ ಸಮೂಹದ ನಿರ್ದೇಶಕಿ ವಿನಯಶ್ರೀ ಪಾಟೀಲ ಮಾತನಾಡಿ, ‘ಗ್ರಾಮೀಣ ಯುವಕ- ಯುವತಿಯರಿಗೆ ಉದ್ಯೋಗ ಅವಕಾಶಗಳನ್ನು ಒದಗಿಸಿಕೊಡುವ ಪ್ರಯತ್ನ ಇದಾಗಿದೆ. ವರ್ಷದಿಂದ ವರ್ಷಕ್ಕೆ ಮೇಳದಲ್ಲಿ ಭಾಗವಹಿಸುವ ಯುವಕರ ಸಂಖ್ಯೆ ಹೆಚ್ಚುತ್ತಿದ್ದು, ಇದುವೇ ಮೇಳ ಆಯೋಜನೆ ಮಾಡಲು ಪ್ರೇರಣೆಯಾಗಿದೆ’ ಎಂದು ಹೇಳಿದರು.ವಿವಿಧ ಕಂಪನಿಗಳ ಪ್ರತಿನಿಧಿಗಗಳು ಹಾಜರಿದ್ದು, 2 ಸಾವಿರಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳಿಗೆ ಮಾರ್ಗದರ್ಶನ ಮಾಡಿದರು. ಐಟಿಐ ಶಾಲಾ ಉಪಾಧ್ಯಕ್ಷ ಅಭಯ ಕರೋಲೆ, ಯುವರಾಜ ಪಾಟೀಲ, ಅರಿಹಂತ ಸಂಸ್ಥೆಯ ಸಿಇಒ ಅಶೋಕ ಬಂಕಾಪೂರೆ, ಮಹಾದೇ ಉಲಪೆ, ಅಣ್ಣಾಸಾಹೇಬ ಬೋಜಕರ, ಕೃಷಿ ಸಂಘದ ಸಿಇಒ ಆರ್ ಟಿ ಚೌಗಲಾ, ಶಿಕ್ಷಣ ಸಂಸ್ಥೆಯ ಸಿಇಒ ಬಾಳಾಸಾಹೇಬ ಹವಲೆ, ಪ್ರಾಚಾರ್ಯ ವಿ.ಬಿ. ಶಿರಹಟ್ಟಿ, ವಿಕ್ರಮ ಘಾಟಗೆ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-21-1459001862

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.