ಚಿತ್ರದುರ್ಗ: ಸಮಾಜ ಕಲ್ಯಾಣ ಇಲಾಖೆಯ ಇಂದಿರಾ ಗಾಂಧಿ ಶೈಕ್ಷಣಿಕ ಅಭಿವೃದ್ಧಿ ಸಂಸ್ಥೆ (ಐಜಿ–ಸಿಸಿಡಿ) ವತಿಯಿಂದ ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮದಲ್ಲಿ ನಡೆದ ಪೊಲೀಸ್ ಪೂರ್ವ ಪರೀಕ್ಷಾ ತರಬೇತಿ ಶಿಬಿರ ಅಪೂರ್ವ ಯಶಸ್ಸು ಕಂಡಿತು. ರಾಜ್ಯದ 28 ಜಿಲ್ಲೆಗಳಿಂದ ಬಂದಿದ್ದ 300 ಪೊಲೀಸ್ ಉದ್ಯೋಗಾಕಾಂಕ್ಷಿಗಳು ಹುದ್ದೆ ಪಡೆಯುವ ವಿಶ್ವಾಸ ಪಡೆದರು.

ಬೆಂಗಳೂರು ವಿಭಾಗ ಮಟ್ಟದ ವತಿಯಿಂದ ಪರಿಶಿಷ್ಟ ಜಾತಿಯ ಯುವ ಜನರಿಗಾಗಿ ಈವರೆಗೆ ಬೆಂಗಳೂರಿನಲ್ಲೇ ತರಬೇತಿ ನಡೆಯುತ್ತಿತ್ತು. ಮೊದಲ ಬಾರಿಗೆ ಬೆಂಗಳೂರಿನಿಂದ ಹೊರಗೆ ಮಲ್ಲಾಡಿಹಳ್ಳಿ ಸೇವಾಶ್ರಮದಲ್ಲಿ 60 ದಿನ ಉಚಿತ, ವಸತಿಯುತ ತರಬೇತಿ ನಡೆಯಿತು. ಕಬ್ಬೂರು ಶಿಕ್ಷಣ ಟ್ರಸ್ಟ್ ನೇತೃತ್ವದಲ್ಲಿ ನಡೆದ ಶಿಬಿರದಲ್ಲಿ ಪೊಲೀಸ್ ಕಾನ್ಸ್ಟೆಬಲ್ ಹುದ್ದೆಗೆ ಆಯ್ಕೆಯಾಗಲು ಅವಶ್ಯವಿರುವ ದೈಹಿಕ ಕಾರ್ಯಕ್ಷಮತೆ ಹಾಗೂ ಪರೀಕ್ಷಾ ವಿಧಾನಗಳ ಸಮಗ್ರ ಮಾಹಿತಿ ನೀಡಲಾಯಿತು.

ದ್ವಿತೀಯ ಪಿಯು ಉತ್ತೀರ್ಣರಾದ 1,500ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ತರಬೇತಿ ಬಯಸಿ ಅರ್ಜಿ ಸಲ್ಲಿಸಿದ್ದರು. ಪಾರದರ್ಶಕ ವಾಗಿ ದೈಹಿಕ ಶಿಕ್ಷಣ ಪರೀಕ್ಷೆ, ಪ್ರವೇಶ ಪರೀಕ್ಷೆಯ ಮೂಲಕ 200 ಪುರುಷರು, 100 ಮಹಿಳಾ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಯಿತು. ಜ.22ರಂದು ಆರಂಭವಾದ ತರಬೇತಿ ಮಾರ್ಚ್ 22ಕ್ಕೆ ಕೊನೆಗೊಂಡಿತು.

ಪೊಲೀಸ್ ನೇಮಕಾತಿ ಪರೀಕ್ಷೆಗಳ ಪಠ್ಯಕ್ರಮಕ್ಕೆ ಅನುಗುಣವಾಗಿ ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಸಂಪನ್ಮೂಲ ವ್ಯಕ್ತಿಗಳು ಶಿಬಿರಾರ್ಥಿಗಳಿಗೆ ತರಗತಿ ನಡೆಸಿದರು. ನಿವೃತ್ತ ಪೊಲೀಸ್ ಅಧಿಕಾರಿಗಳು, ಮಾಜಿ ಸೈನಿಕರು, ವಿವಿಧ ಇಲಾಖೆಗಳ ಹಾಲಿ ಅಧಿಕಾರಿಗಳು ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಮುಂಜಾನೆ 5 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ವೇಳಾಪಟ್ಟಿಯಂತೆ ತರಬೇತಿ ನಡೆಯಿತು.

ಜಿಲ್ಲಾಡಳಿತದಿಂದ ಉಸ್ತುವಾರಿ: ತರಬೇತಿ ಶಿಬಿರದ ಮೇಲೆ ವಿಶೇಷ ನಿಗಾ ವಹಿಸಿದ ಜಿಲ್ಲಾಡಳಿತ ಪ್ರತಿದಿನ ತಲಾ ಒಬ್ಬೊಬ್ಬ ಅಧಿಕಾರಿಯನ್ನು ನೇಮಿಸಿ ಚಟುವಟಿಕೆಯ ಮೇಲುಸ್ತುವಾರಿ ನೋಡಿಕೊಂಡಿತು. ಅಭ್ಯರ್ಥಿಗಳ ಊಟ, ವಸತಿ, ದೈಹಿಕ ಚಟುವಟಿಕೆ, ತರಗತಿಗಳು ಸಮರ್ಪಕವಾಗಿ ನಡೆಯುವಂತೆ ಎಲ್ಲ ರೀತಿಯ ನೆರವು ನೀಡಲಾಯಿತು.

‘ಜಿಲ್ಲಾಧಿಕಾರಿಗಳ ವಿಶೇಷ ಆಸಕ್ತಿಯಿಂದ ಈ ಶಿಬಿರ ಯಶ ಕಂಡಿತು. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡಲು ಹಲವು ಯೋಜನೆ ರೂಪಿಸಲಾಗಿದೆ. ವಿದ್ಯಾರ್ಥಿಗಳು ನಮ್ಮ ಅಧಿಕೃತ ವೆಬ್ಸೈಟ್ಗೆ ತೆರಳಿ ಮಾಹಿತಿ ಪಡೆದು ಸದುಪಯೋಗ ಮಾಡಿಕೊಳ್ಳಬೇಕು’ ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಬಿ.ಮಲ್ಲಿಕಾರ್ಜುನ ತಿಳಿಸಿದರು.

‘ತರಬೇತಿ ಶಿಬಿರದಿಂದ ಅಭ್ಯರ್ಥಿಗಳಿಗೆ ಅನುಕೂಲವಾಗಿದೆ. ಜಿಲ್ಲಾಧಿಕಾರಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಸಹಕಾರ ಮರೆಯಲು ಸಾಧ್ಯವಿಲ್ಲ’ ಎಂದು ಐಜಿ–ಸಿಸಿಡಿ ಮುಖ್ಯ ಆಡಳಿತಾಧಿಕಾರಿ ಎಚ್.ವಿ.ಮಂಜುನಾಥ್ ತಿಳಿಸಿದರು.

‘ಯುವಜನರು ಉದ್ಯೋಗ ಪಡೆಯಲು ಕೌಶಲ ತರಬೇತಿ ಅತ್ಯಂತ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಪಠ್ಯಕ್ರಮ ರೂಪಿಸಿ ಪೊಲೀಸ್ ಪೂರ್ವ ತರಬೇತಿ ನೀಡಲಾಗಿದೆ’ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-44-407925453

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.