ಧರ್ಮಪುರ: ಅಂಚೆ ಇಲಾಖೆಯಲ್ಲಿ ನಾಗರಿಕರಿಗೆ ಹಲವು ಉಪಯುಕ್ತ ಯೋಜನೆಗಳಿದ್ದು ಅವುಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಿ ಎಂದು ಚಿತ್ರದುರ್ಗ ಜಿಲ್ಲಾ ಅಂಚೆ ಅಧೀಕ್ಷಕಿ ಉಷಾ ತಿಳಿಸಿದರು.

ಇಲ್ಲಿನ ಪಂಚಲಿಂಗೇಶ್ವರ ಸಮೂಹ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಧರ್ಮಪುರ ಅಂಚೆ ಇಲಾಖೆ ಶುಕ್ರವಾರ ಹಮ್ಮಿಕೊಂಡಿದ್ದ ಅಂಚೆ ಜನಸಂಪರ್ಕ ಸಭೆ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಂಚೆ ಇಲಾಖೆಯಲ್ಲಿ ಅಂಚೆ ಜೀವ ವಿಮೆ ಮತ್ತು ಗ್ರಾಮೀಣ ಅಂಚೆ ಜೀವ ವಿಮೆ ಸೌಲಭ್ಯವಿದ್ದು, ಬೇರೆ ವಿಮೆಗಳಿಗಿಂತ ಕಡಿಮೆ ಪ್ರೀಮಿಯಂನಲ್ಲಿ ಅಧಿಕ ಬೋನಸ್ ಸಿಗುತ್ತದೆ. ಇದು ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿದ್ದು, ಗ್ರಾಹಕರಿಗೆ ಯಾವುದೇ ಆತಂಕ ಬೇಡ. ಸುಕನ್ಯಾ ಸಮೃದ್ಧಿ ಯೋಜನೆಯಡಿ ಹತ್ತು ವರ್ಷದ ಒಳಗಿನ ಹೆಣ್ಣುಮಕ್ಕಳಿಗೆ ಉತ್ತಮ ಲಾಭ ದೊರೆಯಲಿದೆ. ಹಿರಿಯ ನಾಗರಿಕ ಖಾತೆ ಯೋಜನೆಯಡಿ ಶೇ 8.2 ಬಡ್ಡಿ ಸಿಗಲಿದೆ ಎಂದು ವಿವರಿಸಿದರು.

ಧರ್ಮಪುರ ಅಂಚೆ ಪಾಲಕ ಆರ್.ರವಿಕುಮಾರ್, ಪಂಚಲಿಂಗೇಶ್ವರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ವಿ.ವೀರಣ್ಣ, ನಿವೃತ್ತ ಅಂಚೆ ಪಾಲಕ ಬಿ.ಟಿ.ರಂಗನಾಥ್ ಮಾತನಾಡಿದರು. ಅಂಚೆ ಮೇಲ್ವಿಚಾರಕ ತಿಮ್ಮರಾಯಪ್ಪ, ಪ್ರೇಮ್ ಕುಮಾರ್, ತಿಮ್ಮಣ್ಣ, ಏಕಾಂತಪ್ಪ, ಮಂಜುನಾಥ್, ಪ್ರತಿಭಾ, ರೂಪಿಕಾ, ದಿವ್ಯ, ಸಹನಾ, ಚಿನ್ಮಯಿ, ರಂಗಲಕ್ಷ್ಮಿ, ಅಜಯ್ ಕುಮಾರ್, ಕೋಟಿ ಕುಮಾರ್, ಚಂದ್ರು, ಮಹಾಂತೇಶ್, ಶಶಿಧರ, ನಾಗಭೂಷಣ್, ವಾಸಿಂ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-44-606564506

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.