ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಪೊಲೀಸ್ ಪರೀಕ್ಷೆ 2022: ಕಾನ್‌ಸ್ಟೆಬಲ್‌(ಚಾಲಕ) ಹುದ್ದೆಗಳ ಆಯ್ಕೆ

Last Updated 20 ಜುಲೈ 2022, 19:30 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗವು ಕಾನ್‌ಸ್ಟೆಬಲ್‌(ಚಾಲಕ–ಪುರುಷ) ಹುದ್ದೆಗಾಗಿ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ ಮಾಡಲು ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.

‘ದೆಹಲಿ ಪೊಲೀಸ್ ಪರೀಕ್ಷೆ 2022‘ ಶೀರ್ಷಿಕೆಯಡಿ ಈ ಪರೀಕ್ಷೆ ನಡೆಯಲಿದೆ. ಎಷ್ಟು ಹುದ್ದೆಗಳಿಗಾಗಿ ಪರೀಕ್ಷೆ ನಡೆಸಲಾಗುತ್ತಿದೆ ಎಂಬುದನ್ನು ನಿಗದಿಪಡಿಸಿಲ್ಲ. ನಂತರ ಹುದ್ದೆಗಳ ಸಂಖ್ಯೆ ನಿಗದಿಗೊಳಿಸುವುದಾಗಿ ಜುಲೈ 8ರಂದು ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ ತಿಳಿಸಿದೆ.

ವಿದ್ಯಾರ್ಹತೆ:10+2 ಅಥವಾ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಾಸಾಗಿರಬೇಕು. ಭಾರಿ ವಾಹನಗಳ ಚಾಲನೆಯಲ್ಲಿ ಅನುಭವವಿರಬೇಕು. ಭಾರಿ ಮೋಟಾರು ವಾಹನಗಳಿಗೆ ಮಾನ್ಯವಾದ ಚಾಲನಾ ಪರವಾನಗಿ (ಆನ್‌ಲೈನ್‌ ಸ್ವೀಕೃತಿಯ ಅಂತಿಮ ದಿನಾಕದಂತೆ ಪರವಾನಗಿ ಹೊಂದಿರಬೇಕು) ಹೊಂದಿರಬೇಕು. ವಾಹನಗಳ ನಿರ್ವಹಣೆಯ ಜ್ಞಾನವನ್ನೂ ಹೊಂದಿರಬೇಕು.

ವಯೋಮಿತಿ:ಜುಲೈ1, 2022ರ ಅನ್ವಯ ಕನಿಷ್ಠ 21 ವರ್ಷ. ಗರಿಷ್ಠ 30 ವರ್ಷಗಳು. ನಿರ್ದಿಷ್ಟ ವರ್ಗದವರು ವಯೋಮಿತಿ ಸಡಿಲಿಕೆಗೆಗಾಗಿ ಜುಲೈ 8ರಂದು ಆಯೋಗ ತನ್ನ ಜಾಲತಾಣದಲ್ಲಿ ಪ್ರಕಟಿಸಿರುವ ಅಧಿಸೂಚನೆಯ ಪ್ಯಾರಾ–4ಅನ್ನು ಪರಿಶೀಲಿಸಬಹುದು.

ಪ್ರವೇಶ ಶುಲ್ಕ:₹100(ಮಾಜಿ ಸೈನಿಕರಿಗೆ, ಎಸ್ಸಿ, ಎಸ್‌ಟಿ, ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕವಿಲ್ಲ)

ಅರ್ಜಿ ಸಲ್ಲಿಸುವ ವಿಧಾನ:ಸಿಬ್ಬಂದಿ ನೇಮಕಾತಿ ಸಂಸ್ಥೆ (ಎಸ್‌ಎಸ್‌ಸಿ)ಯ ಜಾಲತಾಣ https//ssc.nic.in ಮೂಲಕವೇ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ಅಧಿಸೂಚನೆಯ ಅನುಬಂಧ–III ಮತ್ತು IV ಅನ್ನು ನೋಡಿ.

ಅರ್ಜಿ ಸಲ್ಲಿಸಲು ಕೊನೆ ದಿನ:ಜುಲೈ 29, 2022. ಆನ್‌ಲೈನ್ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುತ್ತದೆ.

ಆಯ್ಕೆ ವಿಧಾನ: ಆನ್‌ಲೈನ್ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಪರೀಕ್ಷೆ ವಿಷಯಗಳು:

· ಪತ್ರಿಕೆ –1 : ಇದು ಕಂಪ್ಯೂಟರ್ ವಿಷಯ ಆಧಾರಿತವಾದ ಪರೀಕ್ಷೆ. ವಸ್ತುನಿಷ್ಠ (objective)ಮಾದರಿಯಲ್ಲಿ ಬಹು ಆಯ್ಕೆಯ ಪ್ರಶ್ನೆಗಳಿರುತ್ತವೆ.

· ದೈಹಿಕ ಸಹಿಷ್ಣುತೆ ಮತ್ತ ಮಾಪನ ಪರೀಕ್ಷೆ (PE&MT)

· ಟ್ರೇಡ್ ಪರೀಕ್ಷೆ

· ವೈದ್ಯಕೀಯ ಪರೀಕ್ಷೆ

ಈ ಹುದ್ದೆಯ ಹೆಚ್ಚಿನ ವಿವರಕ್ಕಾಗಿ www.ssckkr.kar.nic.in ಮತುῗ https://ssc.nic.in. ಜಾಲತಾಣಗಳಿಗೆ ಭೇಟಿ ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT