ದೇವನಹಳ್ಳಿ: ಯುವಕರು ಇಂದಿನ ಕಾಲದಲ್ಲಿ ಉದ್ಯೋಗ ಹುಡುಕುವವರಿಗಿಂತ ಉದ್ಯೋಗ ಸೃಷ್ಟಿಸುವವರಾಗಬೇಕು. ಕಾಲೇಜು ಹಂತದಲ್ಲಿಯೇ ನವೋದ್ಯಮ ಚಿಂತನೆ ಬೆಳೆಸಿಕೊಳ್ಳುವುದು ಭವಿಷ್ಯದಲ್ಲಿ ದೊಡ್ಡ ಸಾಧನೆಗೆ ದಾರಿ ಮಾಡಿಕೊಡುತ್ತದೆ ಎಂದು ಕೃಷ್ಣದೇವರಾಯ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸಮಿತಿ ಅಧ್ಯಕ್ಷ ಕೆ.ವಿ. ಶೇಖರ್ ರಾಜು ಹೇಳಿದರು.

ಸರ್ ಎಂ. ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸೋಮವಾರ ನಡೆದ ನವೋದ್ಯಮ ಮೇಳದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಯುವಕರು ಹೊಸ ಆಲೋಚನೆಗಳನ್ನು ಹೆದರದ ಅನುಷ್ಠಾನಗೊಳಿಸಬೇಕು. ಉದ್ಯಮಶೀಲತೆ ಎಂದರೆ ಕೇವಲ ವ್ಯವಹಾರ ಆರಂಭಿಸುವುದಲ್ಲ, ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಮನೋಭಾವ. ಪ್ರತಿಯೊಂದು ಪ್ರಯತ್ನದಲ್ಲಿಯೂ ವಿಫಲತೆ ಮತ್ತು ಯಶಸ್ಸಿನ ಹೆಜ್ಜೆ ಇರುತ್ತದೆ. ತಂತ್ರಜ್ಞಾನ ಸದುಪಯೋಗಪಡಿಸಿಕೊಂಡು ಸಮಾಜದ ಹೇಳಿಗೆಗೆ ನವೀನ ಪ್ರಯತ್ನ ಕೈಗೊಳ್ಳಬೇಕು ಎಂದರು.

ಐಸೋಮೆಟ್ರಿಕ್ ಎಐ ಮತ್ತು ಆಪ್ಸ್ಕ್ರಿಪ್ಟ್ ಸಂಸ್ಥೆಯ ಸಿಇಒ ರಾಹುಲ್ ಶರ್ಮಾ, ಇಂತಹ ಮೇಳಗಳು ವಿದ್ಯಾರ್ಥಿಗಳಲ್ಲಿ ಉದ್ಯಮಶೀಲ ಮನೋಭಾವ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಭಾರತದಲ್ಲಿ ನವ ಉದ್ಯಮಗಳಿಗೆ ವಿಫುಲ ಅವಕಾಶಗಳಿದ್ದು, ಒಂದು ಆಲೋಚನೆಯಿಂದ ಆರಂಭವಾಗುವ ನವ ಉದ್ಯಮವೂ ಭವಿಷ್ಯದಲ್ಲಿ ಬಹುಕೋಟಿ ಕಂಪನಿಯಾಗಿ ಬೆಳೆಯಬಹುದು ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಎನ್. ತಿಪ್ಪೇಸ್ವಾಮಿ, ಉಪ ಪ್ರಾಂಶುಪಾಲರಾದ ಡಾ. ಭಾರತೀ ಗಣೇಶ್ ಮಾತನಾಡಿದರು.

ಮೇಳದಲ್ಲಿ ವಿದ್ಯಾರ್ಥಿಗಳು ಹಾಗೂ ಯುವ ಉದ್ಯಮಿಗಳು ಪ್ರದರ್ಶಿಸಿದ ನವೀನ ಆಲೋಚನೆ ಮತ್ತು ತಂತ್ರಜ್ಞಾನಾಧಾರಿತ ಪರಿಹಾರ ಗಮನ ಸೆಳೆದವು.

ರಾಜ್ಯದ ವಿವಿಧ ಭಾಗಗಳಿಂದ 30ಕ್ಕೂ ಹೆಚ್ಚು ನವೋದ್ಯಮ ತಂಡಗಳು ಭಾಗವಹಿಸಿದ್ದವು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ತಂಡಗಳಿಗೆ ₹80,000 ನಗದು ಬಹುಮಾನ ವಿತರಿಸಲಾಯಿತು. ಇದೇ ವೇಳೆ ಡಾ. ಸವಿತಾ ಚೌಧರಿ ಹಾಗೂ ಸಿ.ಶೀತಲ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-15-1157619181

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.