ಉಜಿರೆ: ‘ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಕಾರ್ಮಿಕರು, ಉದ್ಯೋಗಿಗಳಷ್ಟೇ ಅಲ್ಲ, ಸಾವಿರಾರು ಕುಟುಂಬಗಳ ಬದುಕಿನಲ್ಲಿ ಬೆಳಕು ಮೂಡಿಸುವ ಪರಿವರ್ತನೆಯ ಶಕ್ತಿಗಳು’ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಶ್ರೀಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಬೆಳ್ತಂಗಡಿಯಲ್ಲಿ ನಿರ್ಮಿಸಿರುವ ‘ಸಿರಿ ಮಾತೃಶ್ರೀ ಕೈಗಾರಿಕಾ ಪಾರ್ಕ್’ ಲೋಕಾರ್ಪಣೆ ಸಲುವಾಗಿ ಧರ್ಮಸ್ಥಳದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಲುವಾಗಿ ನಾನು ಮತ್ತು ನನ್ನ ಶ್ರೀಮತಿ ( ಹೇಮಾವತಿ ವಿ.ಹೆಗ್ಗಡೆ) ಅನೇಕ ಗ್ರಾಮಗಳನ್ನು ಸಂದರ್ಶಿಸಿದ್ದೆವು. ಗ್ರಾಮೀಣ ಮಹಿಳೆಯರು ಜೀವನೋಪಾಯಕ್ಕಾಗಿ ಬೀಡಿ ಕಟ್ಟುತ್ತಿದ್ದರು. ಕೆಲವು ಕುಟುಂಬಗಳಿಗೆ ಸ್ವಲ್ಪ ಜಮೀನು ಇದ್ದರೂ, ಅದರಲ್ಲಿ ಕೃಷಿ ಮಾಡುವ ಪರಿಸ್ಥಿತಿ ಇರಲಿಲ್ಲ. ದಿನಗೂಲಿ ಕೆಲಸ ಸಿಗದಿದ್ದರೆ ಕುಟುಂಬದ ಸದಸ್ಯರ ಹೊಟ್ಟೆ ಹೊರೆಯುವುದು ಅವರ ಪಾಲಿಗೆ ಕಷ್ಟವಾಗಿತ್ತು. ಕೆಲ ಕುಟುಂಬಗಳ ಪುರುಷರು ಮದ್ಯಪಾನದ ದುಶ್ಚಟಕ್ಕೆ ಒಳಗಾಗಿದ್ದರು. ಕುಟುಂಬದ ಹೆಚ್ಚಿನ ಜವಾಬ್ದಾರಿ ಮಹಿಳೆಯರ ಮೇಲೆಯೇ ಇತ್ತು. ಆರೋಗ್ಯ, ಕನಸು, ಗೌರವ ಎಲ್ಲವನ್ನೂ ತ್ಯಜಿಸಿ ಮಕ್ಕಳ ಬದುಕಿಗಾಗಿ ಅವರು ಹೋರಾಡುತ್ತಿದ್ದ ದೃಶ್ಯ ಮನ ಕಲಕುವಂತಿತ್ತು’ ಎಂದು ಹೆಗ್ಗಡೆ ಮೆಲುಕು ಹಾಕಿದರು.

‘ಮಹಿಳೆಯರ ದೀರ್ಘಾವಧಿ ಆದಾಯಕ್ಕಾಗಿ ಅಡಿಕೆ, ರಬ್ಬರ್ ಮತ್ತು ತೆಂಗಿನ ಗಿಡ ವಿತರಿಸಿದೆವು. ತ್ವರಿತ ಆದಾಯಕ್ಕಾಗಿ ಮಲ್ಲಿಗೆ ಬೆಳೆ, ಹೈನುಗಾರಿಕೆ ಮತ್ತು ಕೃಷಿಯನ್ನು ಉತ್ತೇಜಿಸಿದೆವು. ಮಹಿಳೆಯರ ಆರ್ಥಿಕ ಸ್ಥಿತಿ ಸುಧಾರಿಸಿ, ಆತ್ಮವಿಶ್ವಾಸ ಹೆಚ್ಚಾಯಿತು. ಮಹಿಳೆಯರಿಗಾಗಿ ಹೊಲಿಗೆ ಘಟಕಗಳು, ಜ್ಯೂಸ್, ಬ್ಲೀಚಿಂಗ್ ಪೌಡರ್, ಅಗರಬತ್ತಿ, ತಿಂಡಿ, ಉಪ್ಪಿನಕಾಯಿ ಮತ್ತು ಖಾರ ಪದಾರ್ಥ ತಯಾರಿ ಕೇಂದ್ರಗಳನ್ನು ವಿವಿಧ ಗ್ರಾಮಗಳಲ್ಲಿ ಆರಂಭಿಸಿದೆವು. ಕಚ್ಚಾ ವಸ್ತು ಪೂರೈಸಿ, ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಿದೆವು. ಗ್ರಾಮೀಣ ಮಹಿಳೆಯರು ಒಂದೆಡೆ ಸೇರಿ ಗೌರವದಿಂದ ಕೆಲಸ ಮಾಡುವ ವೇದಿಕೆ ಕಲ್ಪಿಸಲು 2004ರಲ್ಲಿ ಲಾಭರಹಿತ ಸಂಸ್ಥೆ ‘ಸಿರಿ’ಯನ್ನು ಸ್ಥಾಪಿಸಿದೆವು. ಅದೀಗ ಮಹಿಳಾ ಆರ್ಥಿಕ ಸಬಲೀಕರಣದ ಚಳವಳಿಯಾಗಿ ಬೆಳೆದಿದೆ’ ಎಂದರು.

‘ಸಿರಿಯು ‘ಮಾತೃಶ್ರೀ ಕೈಗಾರಿಕಾ ಪಾರ್ಕ್’ ಮೂಲಕ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದೆ. ‘ಮಾತೃಶ್ರೀ’ ಎಂದರೆ ತಾಯಿತನ. ಮಹಿಳೆ ಕೇವಲ ಮನೆಯ ಸದಸ್ಯೆಯಲ್ಲ; ಸಮಾಜವನ್ನು ಉಳಿಸುವ ಶಕ್ತಿ. ಇಲ್ಲಿನ ಮಹಿಳೆಯೂ ಕೇವಲ ಕಾರ್ಮಿಕಳಲ್ಲ; ಸೃಷ್ಟಿಕರ್ತೆ, ಪೋಷಕಿ ಮತ್ತು ದೇಶದ ಶಕ್ತಿ. ನಮ್ಮ ಸಮೂಹ ಪ್ರಯತ್ನ, ಪರಿಶ್ರಮ ಮತ್ತು ಕನಸುಗಳ ಪ್ರತೀಕ’ ಎಂದು ತಿಳಿಸಿದರು.

‘ನಿಮ್ಮ ಗೌರವಯುತ ಜೀವನ, ಸುಖ ಮತ್ತು ನಿಮ್ಮ ಮಕ್ಕಳ ಭವಿಷ್ಯ ಸಂಸ್ಥೆಯ ಲಾಭಕ್ಕಿಂತಲೂ ಮುಖ್ಯ. ಸಿರಿಯನ್ನು ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ಯುವ ಸಾಮರ್ಥ್ಯ ನಿಮ್ಮಲ್ಲಿದೆ. ಈ ಸಂಸ್ಥೆ ಮುಂದಿನ ಪೀಳಿಗೆಯ ಗ್ರಾಮೀಣ ಮಹಿಳೆಯರ ಬದುಕಿಗೆ ಬೆಳಕಾಗಿ, ದೇಶದ ಗ್ರಾಮೀಣ ಪರಿವರ್ತನೆಯ ಮಾದರಿಯಾಗಲಿ’ ಎಂದು ಹಾರೈಸಿದರು.

ಸಿರಿ ಮಾತೃಶ್ರೀ ಕೈಗಾರಿಕಾ ಪಾರ್ಕ್ನ ಫಲಕವನ್ನು ಅನಾವರಣಗೊಳಿಸಿದ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್, ‘ಮಹಿಳಾ ಉದ್ಯಮಿಗಳನ್ನು ರೂಪಿಸುತ್ತಿರುವ ‘ಸಿರಿ’ ಸಮೃದ್ಧಿಯ ಸಂಕೇತ. ಇದು ಲಾಭಕ್ಕಾಗಿ ಹುಟ್ಟುಹಾಕಿದ ಸಂಸ್ಥೆಯಲ್ಲ. ಮಹಿಳಾ ಸ್ವಾವಲಂಬನೆ ಮತ್ತು ಆತ್ಮಗೌರವದ ಪ್ರತೀಕವಿದು. ಪರಸ್ಪರ ಗೌರವದಿಂದ ಕಾಣುವ, ಅವಕಾಶಗಳನ್ನು ಸೃಷ್ಟಿಸುವ ಎಲ್ಲರನ್ನು ಒಳಗೊಳ್ಳುವ ಅಭಿವೃದ್ಧಿಯ ಮಾದರಿ ಇದು. ಪ್ರಧಾನಿ ನರೇಂದ್ರ ಮೋದಿಯವರ ಆಶಯವೂ ಇದೇ ಆಗಿದೆ’ ಎಂದರು.

‘ನಾವು ಬೇರೆ ದೇಶಗಳ ಮೇಲಿನ ಅವಲಂಬನೆ ಕಡಿಮೆಗೊಳಿಸಬೇಕಿದೆ. ಆತ್ಮನಿರ್ಭರತೆ ಹಾಗೂ ಸ್ಥಳಿಯ ಉತ್ಪನ್ನಗಳನ್ನೇ ಬಳಸುವ ಕೂಗಿಗೆ ನಾವೂ ದನಿಯಾಗಬೇಕಿದೆ’ ಎಂದರು.

ರಾಜ್ಯಪಾಲ ಥಾವರ ಚಂದ್ ಗೆಹಲೋತ್, ಸಂಸದ ಕ್ಯಾ.ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಸಿರಿ ಸಂಸ್ಥಾಪಕಿ ಹೇಮಾವತಿ ವಿ. ಹೆಗ್ಗಡೆ, ಎಸ್ಡಿಎಂ ಸೊಸೈಟಿ ಉಪಾಧ್ಯಕ್ಷ ಸುರೇಂದ್ರ ಕುಮಾರ್ ಭಾಗವಹಿಸಿದ್ದರು. ‘ಸಿರಿ’ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಜನಾರ್ದನ ಸ್ವಾಗತಿಸಿದರು. ಶ್ರೀಧರ ಭಟ್ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-29-489860480

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.