ಗದಗ: ‘ವಿದ್ಯಾರ್ಥಿಗಳು ಉದ್ಯಮ ಮತ್ತು ಉದ್ಯೋಗಾಧಾರಿತ ಕೌಶಲಗಳನ್ನು ಅಭಿವೃದ್ದಿಪಡಿಸಿಕೊಳ್ಳಬೇಕು. ಆದರ್ಶ ಶಿಕ್ಷಣ ಸಮಿತಿಯ ಅಂಗ ಸಂಸ್ಥೆಗಳು ಈ ಕೌಶಲಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುವಲ್ಲಿ ಆದ್ಯತೆ ನೀಡುತ್ತಿವೆ’ ಎಂದು ಆದರ್ಶ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಎ.ಡಿ.ಗೋಡಖಿಂಡಿ ಹೇಳಿದರು.

ನಗರದ ಆದರ್ಶ ಶಿಕ್ಷಣ ಸಮಿತಿಯ ಲಕ್ಷ್ಮಣರಾವ್ ಅನಂತರಾವ್ ಪೊತ್ನೀಸ್ ಮೆಮೋರಿಯಲ್ ಬಿಬಿಎ ಮತ್ತು ಬಿ.ಸಿ.ಎ. ಕಾಲೇಜು ಹಾಗೂ ಹುಬ್ಬಳ್ಳಿಯ ಚೇತನ್ ಬುಸಿನೆಸ್ ಸ್ಕೂಲ್ ಸಹಯೋಗದಲ್ಲಿ ಈಚೆಗೆ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದರು.

ಹುಬ್ಬಳ್ಳಿಯ ಚೇತನ್ ಬ್ಯುಸಿನೆಸ್ ಸ್ಕೂಲ್ ನಿರ್ದೇಶಕ ಎಂ.ಎನ್.ಮಾಣಿಕ್, ಪ್ಲೇಸ್ಮೆಂಟ್ ನಿರ್ದೇಶಕ ಅರುಣ್ ರಜಪೂತ್ ವೇದಿಕೆಯಲ್ಲಿದ್ದರು.

ಉದ್ಯೋಗ ಮೇಳದಲ್ಲಿ 10ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದವು. ಬಿಬಿಎ, ಬಿಸಿಎ, ಬಿಕಾಂ, ವಿದ್ಯಾರ್ಹತೆ ಹೊಂದಿದ ಹಾಗೂ ಪ್ರಸಕ್ತ ಕೊನೆಯ ವರ್ಷ ಓದುತ್ತಿರುವ ವಿದ್ಯಾರ್ಥಿಗಳು ಸಹ ಈ ಉದ್ಯೋಗ ಮೇಳದಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಂಡರು.

ಎಎಸ್ಎಸ್ ಕಾಲೇಜಿನ ಬಿಬಿಎ ಕೊನೆಯ ವರ್ಷ ಓದುತ್ತಿರುವ ವಿದ್ಯಾರ್ಥಿಗಳು ವಿವಿಧ ಕಂಪನಿಗಳಿಗೆ ನೇಮಕಗೊಂಡರು.

ಚೇತನ್ ಬುಸಿನೆಸ್ ಸ್ಕೂಲ್ನ ಪ್ರೊ. ಚೈತ್ರಾ ಬದಾಮಿ, ಮಲ್ಲಿಕಾರ್ಜುನ ಅರ್ಕಸಾಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಬಿಬಿಎ ಮತ್ತು ಬಿಸಿಎ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಂಗರಾಜ ರೇಶ್ಮಿ, ಉಪನ್ಯಾಸಕರಾದ ಅಶ್ವಿನಿ ಹೊಸಮನಿ, ರೇಣುಕಾ ಅಗಸನಕೊಪ್ಪ, ಪಾರ್ವತಿ ಹಳ್ಳೆಪ್ಪನವರ, ಏಂಜೆಲ್ ಗೋಕಾವಿ, ನೇತ್ರಾವತಿ ಹೂಗಾರ, ಕಾವೇರಿ ಮಾಳಗಿಮನಿ, ಪ್ರಕೃತಿ ಸಿ.ಎಂ, ಆದಿತ್ಯ ಜೋಶಿ, ಸಮಿತಿಯ ಅಧೀಕ್ಷಕ ಪ್ರಾಣೇಶ ಬೆಳ್ಳಟ್ಟಿ, ಕಚೇರಿ ಸಿಬ್ಬಂದಿ ಬನಶಂಕರಿ ಕುಲಕರ್ಣಿ, ಭವಾನಿ ವಾರಕರ, ಗಿರೀಶ ರಾಯಬಾಗಿ, ಶಾಂತಕುಮಾರ, ಸತೀಶ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-23-2036282154

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.