ಗಂಗಾವತಿ: ಆಶಾ ಕಾರ್ಯಕರ್ತೆಯರ ಪ್ರೋತ್ಸಾಹಧನ, ಕನಿಷ್ಠ ಮಾಸಿಕ ವೇತನ, ಸೇವಾ ನಿವೃತ್ತಿ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶುಕ್ರವಾರ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

ಸಂಘದ ಜಿಲ್ಲಾ ಅಧ್ಯಕ್ಷ ಶರಣುಗಡ್ಡಿ ಮಾತನಾಡಿ, ‘ಆಶಾ ಕಾರ್ಯಕರ್ತೆಯರು ಕಳೆದ ಹಲವು ವರ್ಷಗಳಿಂದ ಆರೋಗ್ಯ ಸೇವೆಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದು, ಕಳೆದ ಮೂರ್ನಾಲ್ಕು ತಿಂಗಳಿನಿಂದ ಕೇಂದ್ರದ ಪ್ರೋತ್ಸಾಹಧನ, 2 ತಿಂಗಳಿಂದ ರಾಜ್ಯ ಸರ್ಕಾರದ ಗೌರವಧನ ಪಾವತಿಯಾಗಿಲ್ಲ’ ಎಂದರು.

‘ಇಎಂಎಸ್, ಆಶಾ, ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಇವರ ಪತ್ರ ಆದೇಶದಂತೆ 9 ವಿವಿಧ ಸೇವೆಗಳನ್ನು ಆಶಾ ನಿಧಿ ತಂತ್ರಾಂಶದಲ್ಲಿ ನಿಷ್ಕ್ರಿಯಗೊಳಿಸಿದ ಬಗ್ಗೆ ತಿಳಿಸಿದ್ದು, ಇದರಿಂದ ಆಶಾ ಕಾರ್ಯಕರ್ತರಿಗೆ ₹500 ರಿಂದ ₹ 1 ಸಾವಿರ ಹಣ ಕಡಿತವಾಗಲಿದೆ. ಇದರಿಂದ ಆಶಾ ಕಾರ್ಯಕರ್ತರ ಆರ್ಥಿಕ ಪರಿಸ್ಥಿತಿ ಕಠಿಣವಾಗಲಿದೆ’ ಎಂದರು.

ಸರ್ಕಾರ ಕೂಡಲೇ ಆಶಾ ಕಾರ್ಯಕರ್ತರ ಬಾಕಿ ವೇತನ, ಕಂಪೋನೆಂಟ್ ಹಣ ಬಿಡುಗಡೆ, ಮೌಲ್ಯಮಾಪನ ಹೆಸರಿನಲ್ಲಿ ಆಗುತ್ತಿರುವ ಶೋಷಣೆ, ನಿವೃತ್ತಿ ಆಶಾಗಳಿಗೆ ಇಡಿಗಂಟು, ಮಾಸಿಕ ಗೌರವಧನ ₹10 ಸಾವಿರಕ್ಕೆ ಏರಿಕೆ ಮಾಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಕಾರ್ಯದರ್ಶಿ ಕೌಶಲ್ಯ, ಗಂಗಾವತಿ ತಾಲ್ಲೂಕು ಅಧ್ಯಕ್ಷೆ ಜ್ಯೋತಿಲಕ್ಷ್ಮಿ, ನಗರ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ, ರೇಖಾ, ಶರಣಮ್ಮ, ದ್ರಾಕ್ಷಾಯಿಣಿ, ದೇವಮ್ಮ, ಲಕ್ಷ್ಮಿ, ಸಾವಿತ್ರಿ, ಸಂಗೀತಾ, ಲಲಿತಾ, ಹಂಪಮ್ಮ, ಗೀತಾ, ಹನುಮಕ್ಕ, ಗೌರಮ್ಮ, ಗಿರಿಜಮ್ಮ, ರೇಣುಕಾ, ಸಮೀರ್ ಭಾನು, ಈರಮ್ಮ, ಶಾರದಾ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-35-33915053

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.