ಹಾಸನ: ‘ಯಾವುದೇ ಸಂಸ್ಥೆಗೆ ಕ್ಯಾಂಪಸ್ ಸಂದರ್ಶನ ಕೊಡುವ ಮೊದಲು ವಿದ್ಯಾರ್ಥಿಗಳು ಆ ಸಂಸ್ಥೆಯ ಬಗ್ಗೆ ಸಂಪೂರ್ಣ ಮಾಹಿತಿ ಹೊಂದುವುದು ಅಗತ್ಯ. ಇದರಿಂದ ಉದ್ಯೋಗಾಂಕ್ಷಿಗಳು ದಿಕ್ಕು ತಪ್ಪುವ ಸಾಧ್ಯತೆ ಕಡಿಮೆ’ ಎಂದು ಎಸ್.ಎಂ.ಎಫ್.ಜಿ. ಹಾಸನ ಶಾಖೆಯ ಮುಖ್ಯ ವ್ಯವಸ್ಥಾಪಕ ಚೇತನ್ ಕುಮಾರ್ ಹೇಳಿದರು.

ನಗರದ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜಿನಲ್ಲಿ ನಡೆದ ಬೃಹತ್ ಜಾಬ್ ಮೇಳದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕ್ಯಾಂಪಸ್ನಲ್ಲಿ ಭಾಗವಹಿಸುತ್ತಿರುವ ಸಂಸ್ಥೆಯ ಬಗ್ಗೆ ತಿಳಿವಳಿಕೆ ಇದ್ದಷ್ಟು ಸಂದರ್ಶನವನ್ನು ಎದುರಿಸಲು ಧೈರ್ಯ ಮತ್ತು ವಿಶ್ವಾಸ ಹೆಚ್ಚುತ್ತದೆ. ಅದರಿಂದ ಸುಲಭ ಯಶಸ್ಸನ್ನೂ ಸಾಧಿಸಬಹುದು ಎಂದರು.

ಇದೇ ವೇಳೆ ಅವರು ಬ್ಯಾಂಕಿಂಗ್ ಸೆಕ್ಟರ್ ಮತ್ತು ನಾನ್ ಬ್ಯಾಂಕಿಂಗ್ ವಿಭಾಗಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ಬೃಹತ್ ಜಾಬ್ ಮೇಳದಲ್ಲಿ ಸಂಸ್ಥೆಗಳಾದ ಗೋಕುಲ್ದಾಸ್ ಎಕ್ಸ್ಪೋರ್ಟ್, ಎಸ್.ಎಂ.ಎಫ್.ಜಿ., ಎಸ್.ಎಸ್.ಪಿ.ಎಂ. ಮತ್ತು ಜೋಯಾಲುಕ್ಕಾಸ್ ಸೇರಿದಂತೆ ವಿವಿಧ ಸಂಸ್ಥೆಗಳು ಭಾಗವಹಿಸಿ ಲಿಖಿತ ಮತ್ತು ಮೌಖಿಕ ಪರೀಕ್ಷೆಯ ಮೂಲಕ ವಿದ್ಯಾರ್ಥಿಗಳನ್ನು ಸಂದರ್ಶಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ರಾಜು ಡಿ.ಎಸ್.ಮಾತನಾಡಿ, ಖಾಸಗಿ ಮತ್ತು ಸರ್ಕಾರಿ ವಲಯದ ಮಧ್ಯೆ ಬಹಳಷ್ಟ ವ್ಯತ್ಯಾಸವಿದ್ದು, ಖಾಸಗಿ ವಲಯದಲ್ಲಿ ನಮ್ಮ ಅಸ್ತಿತ್ವ ಕಂಡುಕೊಳ್ಳಲು ಹೆಚ್ಚು ಶ್ರಮ ವಹಿಸಬೇಕಾಗುತ್ತದೆ. ಪ್ರತೀ ಕ್ಷಣ ನಮ್ಮನ್ನು ನಾವು ಅಪ್ಡೇಟ್ ಮಾಡಿಕೊಳ್ಳುವ ಮೂಲಕ ಪರಿಶ್ರಮ ಪಟ್ಟರೆ ಮಾತ್ರ ಉನ್ನತ ಮಟ್ಟ ತಲುಪಲು ಸಾಧ್ಯವಾಗುತ್ತದೆ ಎಂದರು.

ಪದವಿ ವಿಭಾಗದ ಪ್ಲೇಸ್ಮೆಂಟ್ ಸೆಲ್ನ ಸಂಯೋಜಕಿ ಡಾ.ಸವಿತಾ ಮಾತನಾಡಿ, ಉದ್ಯೋಗಾಂಕ್ಷಿಗಳು ವಿದ್ಯಾರ್ಥಿ ದೆಸೆಯಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವುದರಿಂದ ಯಶಸ್ಸು ಸಾಧ್ಯವಾಗುತ್ತದೆ. ವೃತ್ತಿ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳು ಪದವಿಯ ಜೊತೆಗೆ ಇಂಗ್ಲಿಷ್ ಸಂವಹನ ಮತ್ತು ಕೌಶಲದ ಕಡೆಗೂ ಒತ್ತು ನೀಡಬೇಕಿದ್ದು, ಅಂಕಗಳ ಜೊತೆಗೆ ಜ್ಞಾನದ ಸಮನ್ವಯ ಅತೀ ಮುಖ್ಯ ಎಂದು ಸಲಹೆ ನೀಡಿದರು.

ಕಾಲೇಜಿನ ಶೈಕ್ಷಣಿಕ ಡೀನ್ ಡಾ.ಹರೀಶ್ ಎಂ.ಕೆ., ಪರೀಕ್ಷಾ ನಿಯಂತ್ರಕ ಡಾ.ಮುರಳೀಧರ್ ಕೆ.ಡಿ., ಸ್ನಾತಕೋತ್ತರ ವಿಭಾಗದ ಪ್ಲೇಸ್ಮೆಂಟ್ ಸೆಲ್ ಸಂಯೋಜಕಿ ಡಾ.ಶಾಂತಾ ಪಿ.ಆರ್. ಮತ್ತು ವಿವಿಧ ಕಂಪನಿಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-36-1063097516

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.