ಬೈಂದೂರು: ಇಲ್ಲಿನ ವಿಧಾನಸಭಾ ಕ್ಷೇತ್ರದ ಪರಿಶಿಷ್ಟ ಸಮುದಾಯದ ಯುವಕ– ಯುವತಿಯರು, ವಿದ್ಯಾರ್ಥಿ– ವಿದ್ಯಾರ್ಥಿನಿಯರು, ಮಹಿಳೆಯರು ಉದ್ಯಮಿಗಳಾಗಿ ರೂಪುಗೊಳ್ಳಬೇಕೆಂಬ ಉದ್ದೇಶದಿಂದ ಶಾಸಕ ಗುರುರಾಜ ಗಂಟಿಹೊಳೆ ಅವರು ‘ಭೀಮೋತ್ಸವ’ ಕಾರ್ಯಕ್ರಮ ಮೇ 30ರಂದು ಹೆಮ್ಮಾಡಿಯ ಜಯಶ್ರೀ ಸಭಾಭವನದಲ್ಲಿ ಆಯೋಜಿಸಿದ್ದಾರೆ.

ಉದ್ಯೋಗಕ್ಕಾಗಿ ಅಲೆದಾಡುತ್ತಿರುವ ಯುವಕರಿಗೆ ಸ್ವಯಂ ಉದ್ಯೋಗದ ದಾರಿ ಪರಿಚಯಿಸುವುದು. ಸಣ್ಣ ಮಟ್ಟಿನ ಉದ್ಯಮ ಆರಂಭಿಸಲು ಅಗತ್ಯ ಮಾಹಿತಿ ನೀಡುವುದು. ಸರ್ಕಾರದ ವಿವಿಧ ಯೋಜನೆಗಳು, ಸಹಾಯಧನ, ಸಾಲ– ಸೌಲಭ್ಯಗಳ ಕುರಿತು ಮಾರ್ಗದರ್ಶನ ನೀಡುವುದು. ಬ್ಯಾಂಕ್ ಸಾಲ ಪಡೆಯುವ ವಿಧಾನ, ಅಗತ್ಯ ದಾಖಲೆಗಳು, ಪ್ರಕ್ರಿಯೆಗಳ ಅರಿವು ಮೂಡಿಸುವುದು. ಗ್ರಾಮೀಣ ಭಾಗದ ಯುವಕರಲ್ಲಿ ಉದ್ಯಮಶೀಲತೆ ಬಗ್ಗೆ ಆತ್ಮವಿಶ್ವಾಸ ಬೆಳೆಸುವುದು. ‘ಉದ್ಯೋಗ ಕೇಳುವವರಲ್ಲ, ಉದ್ಯೋಗ ನೀಡುವವರಾಗೋಣ’ ಎಂಬ ಮನೋಭಾವ ಬೆಳೆಸುವುದು. ಯಶಸ್ವಿ ಉದ್ಯಮಿಗಳೊಂದಿಗೆ ಸಂವಾದ. ವಿದ್ಯಾರ್ಥಿಗಳಿಗೆ ಭವಿಷ್ಯದ ವೃತ್ತಿ ಆಯ್ಕೆ ಕುರಿತು ಅವಕಾಶಗಳ ಪರಿಚಯ ಮಾಡಿಸುವುದು. ಮಹಿಳೆಯರು, ಯುವತಿಯರಿಗೆ ಸ್ವಾವಲಂಬಿ ಬದುಕಿನ ಅವಕಾಶಗಳ ಬಗ್ಗೆ ಮಾಹಿತಿ ನೀಡುವುದು. ಸ್ಟಾರ್ಟ್ಅಪ್, ಸಣ್ಣ ಕೈಗಾರಿಕೆ, ಸೇವಾ ಆಧಾರಿತ ಉದ್ಯಮಗಳ ಕುರಿತು ಮಾರ್ಗದರ್ಶನ ನೀಡುವುದು.

ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಆದಾಯ ಗಳಿಸುವ ಮಾರ್ಗಗಳನ್ನು ಪರಿಚಯಿಸುವುದು. ಯುವಕರಲ್ಲಿ ನಾಯಕತ್ವ, ನಿರ್ಧಾರ ಸಾಮರ್ಥ್ಯ, ಆರ್ಥಿಕ ಅರಿವು ವೃದ್ಧಿಸುವುದು. ಆರ್ಥಿಕ ಸಬಲೀಕರಣಕ್ಕೆ ಸಹಕಾರಿಯಾಗುವ ವಾತಾವರಣ ನಿರ್ಮಿಸುವುದು. ಪರಿಶಿಷ್ಟ ಸಮುದಾಯದ ಯುವಕರಿಗೆ ವಿಶೇಷ ಅವಕಾಶಗಳು, ಪ್ರೇರಣೆ ಒದಗಿಸುವುದು ಕಾರ್ಯಕ್ರಮದ ಉದ್ದೇಶ.

‘ಭೀಮೋತ್ಸವ’ ಯುವಕರ ಕನಸುಗಳಿಗೆ ಜೀವ ತುಂಬಿ, ಸ್ವಾವಲಂಬಿ ಬದುಕಿನತ್ತ ಹೆಜ್ಜೆ ಇಡುವ, ಸಮಾಜದ ಅಭಿವೃದ್ಧಿಗೆ ಯುವಶಕ್ತಿಯನ್ನು ರೂಪಿಸಿ, ಜೋಡಿಸುವ ಮಹತ್ವದ ಪ್ರಯತ್ನವಾಗಿದೆ ಎಂದು ಶಾಸಕರ ಕಚೇರಿ ಪ್ರಕಟನೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-28-1234775089

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.