ಹೊಳೆನರಸೀಪುರ: ‘ಆರ್ಟಿಫಿಶಿಯಲ್ ಇಂಟಲಿಜೆನ್ಸ್(ಎ.ಐ) ಅವಿಷ್ಕಾರ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗದಲ್ಲಿ ಅಭದ್ರತೆ, ಸಂದಿಗ್ಧತೆ ತಂದಿಟ್ಟಿದೆ. ಶಿಕ್ಷಣ ಉತ್ತಮ ಬದುಕು ನೀಡುವ ಖಚಿತತೆ ಇಲ್ಲ. ಆದರೂ ಉದ್ಯೋಗ ಉಳಿಸಿಕೊಳ್ಳಲು ಶಿಕ್ಷಣದ ಜೊತೆಗೆ ಉತ್ತಮ ಕೌಶಲವನ್ನು ಬೆಳೆಸಿಕೊಳ್ಳಬೇಕು’ ಎಂದು ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನ ಪ್ರೊ. ಕೃಷ್ಣಮೂರ್ತಿ ಸಲಹೆ ನೀಡಿದರು.

ತಾಲ್ಲೂಕು ವಿತರಕರ ಸಂಘ ಮಂಗಳವಾರ ಕೊನೇರಿ ರಾಮಶೆಟ್ಟರ ಛತ್ರದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹಿಂದೆ ಕಡಿಮೆ ಓದಿದವರಿಗೂ ಕೆಲಸ ಸಿಗುತ್ತಿತ್ತು. ನಂತರದ ದಿನಗಳಲ್ಲಿ ಉತ್ತಮವಾಗಿ ವ್ಯಾಸಂಗ ಮಾಡಿದವರಿಗೆ ಕೆಲಸ ಸಿಗುವಂತಾಯಿತು. ಮುಂದಿನ ದಿನದಲ್ಲಿ ಎಷ್ಟೇ ಉನ್ನತ ವ್ಯಾಸಂಗ ಮಾಡಿದರೂ ಕೆಲಸವೇ ಸಿಗದಂತಹ ಕಾಲ ಬಂದರೂ ಬರಬಹುದು. ಪರಿಸ್ಥಿತಿ ಹೇಗೇ ಇರಲಿ ನಾವು ನಮ್ಮ ಬದುಕನ್ನು ಕಟ್ಟಿಕೊಳ್ಳುವಷ್ಟು ಮಾನಸಿಕವಾಗಿ, ದೈಹಿಕವಾಗಿ ಸದೃಢವಾಗಿರಬೇಕು’ ಎಂದರು.

ವಿತರಕರ ಸಂಘದ ಅಧ್ಯಕ್ಷ ರಾಮನಾಥ್ ಅವರು ಬಾಲಕಿಯರ ಪದವಿಪೂರ್ವ ಕಾಲೇಜಿನ ನಿಶಿತಾ, ಶೋಬಿತಾ, ಬಾಲಕರ ಪದವಿಪೂರ್ವ ಸರ್ಕಾರಿ ಕಾಲೇಜಿನ ಯೋಗೇಶ್ ಹಾಗೂ ಸಮರ್ಥ್ ಅವರನ್ನು ಹಾಗೂ ಹಿರಿಯ ವರ್ತಕರಾದ ಎಚ್.ಎನ್. ಶ್ರೀಧರ್, ದಿಲೀಪ್ಕುಮಾರ್ ಜೈನ್ ಅವರನ್ನು ಸನ್ಮಾನಿಸಿದರು.

ಉಪಾಧ್ಯಕ್ಷ ರಾಮಚಂದ್ರಗುಪ್ತಾ, ಹಿರಿಯ ಸದಸ್ಯ ನಾಗಪ್ಪ, ಕಾರ್ಯದರ್ಶಿ ಅರುಣ್, ಸಹಕಾರ್ಯದರ್ಶಿ ಮಹೇಂದ್ರಬಾಬು, ಯೋಜನಾ ನಿರ್ದೇಶಕ ಸುನಿಲ್ ಉಪಸ್ಥಿತರಿದ್ದರು. ಹಿರಿಯ ಸಲಹೆಗಾರ ಸುರೇಶ್ಕುಮಾರ್ ಪ್ರಾಸ್ತಾವಿಕ ಮಾಡುಗಳನ್ನಾಡಿದರು. ವಾಸುದೇವ್ ಮೂರ್ತಿ ಕಾರ್ಯಕ್ರಮ ನಿರೂಪಿಸಿದರು. ರೋಹಿತ್ ಸ್ವಾಗತಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-36-325369784

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.