ಹುಬ್ಬಳ್ಳಿ: ಇಲ್ಲಿನ ಐಇಎಂಎಸ್ ಎಂಬಿಎ ಕಾಲೇಜಿನಲ್ಲಿ ಭಾನುವಾರ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿತ್ತು.

ಮೇಳ ಉದ್ಘಾಟಿಸಿದ ಆರ್ಎನ್ಎಸ್ ಮೋಟಾರ್ಸ್ನ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಮಾತನಾಡಿ, ‘ನಿರಂತರ ಕಲಿಕೆ, ಉತ್ಸಾಹ, ಕೌಶಲವನ್ನು ಉದ್ಯಮ ಕ್ಷೇತ್ರವು ಉದ್ಯೋಗಾಕಾಂಕ್ಷಿಗಳಿಂದ ನಿರೀಕ್ಷಿಸುತ್ತದೆ’ ಎಂದರು.

‘ವೃತ್ತಿ ಜೀವನದ ಆರಂಭಿಕ ಹಂತಗಳಲ್ಲಿ ಎದುರಾಗುವ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕು. ಬದ್ಧತೆಯಿಂದ ವೃತ್ತಿಯಲ್ಲಿ ಯಶಸ್ಸು ಸಾಧಿಸಲು ಸಾಧ್ಯ’ ಎಂದು ಹೇಳಿದರು.

ಸಂಸ್ಥೆಯ ನಿರ್ದೇಶಕ ವೀರಣ್ಣ ಡಿ.ಕೆ., ಅಧ್ಯಕ್ಷ ಎನ್.ಎ.ಚರಂತಿಮಠ ಮಾತನಾಡಿದರು. ಮುತ್ತೂಟ್ ಫೈನಾನ್ಸ್, ಆಕ್ಸಿಸ್ ಬ್ಯಾಂಕ್, ಕೋಟಕ್ ಮಹಿಂದ್ರಾ, ಫ್ಲಿಪ್ಕಾರ್ಟ್, ನೈಕಾ, ಅಡೆಕೊ, ಎಚ್ಡಿಎಫ್ಸಿ ಬ್ಯಾಂಕ್, ಟಾಟಾ ಎಲೆಕ್ಟ್ರಾನಿಕ್ಸ್, ಆರ್ಎನ್ಎಸ್ ಮೋಟಾರ್ಸ್ ಸೇರಿದಂತೆ 33 ಕಂಪನಿಗಳು, 300 ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು.

ಸಂಸ್ಥೆಯ ತರಬೇತಿ ಮತ್ತು ಉದ್ಯೋಗ ವಿಭಾಗದಿಂದ ಮೇಳವನ್ನು ಆಯೋಜಿಸಲಾಗಿತ್ತು. ಪ್ರೊ.ವಿ.ವಿ.ಹಿರೇಮಠ, ಪ್ರೊ.ಲಾಜರಸ್ ಚೆಲ್ಲಿ, ಪ್ರೊ.ವಿಶಾಲ್ ಪಾಟೀಲ, ವಾಣಿ ಪಿಸೆ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-24-1152470762

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.