ಹುಬ್ಬಳ್ಳಿ: ‘ಪ್ರತಿ ಕ್ಷೇತ್ರದಲ್ಲಿಯೂ ಸ್ಪರ್ಧೆ ಅನಿವಾರ್ಯವಾಗಿದ್ದು, ಉದ್ಯೋಗಾಂಕ್ಷಿಗಳು ಉದ್ಯೋಗ ದೊರಕಿಸಿಕೊಡುವ ಸಂದರ್ಶನದ ಬಗ್ಗೆ ಉಪೇಕ್ಷೆ ಮಾಡಬಾರದು. ಆತ್ಮವಿಶ್ವಾಸದಿಂದ ಸಂದರ್ಶನ ಎದುರಿಸಬೇಕು’ ಎಂದು ಟಿಪ್ಪು ಷಹೀದ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ (ಪಾಲಿಟೆಕ್ನಿಕ್) ಪ್ರಾಚಾರ್ಯ ರವೀಂದ್ರ ಸಿಂಗ್ ಅತ್ತೇರ ಹೇಳಿದರು.

ನಗರದ ಟಿಪ್ಪು ಷಹೀದ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ (ಪಾಲಿಟೆಕ್ನಿಕ್) ಸಂಸ್ಥೆಯಲ್ಲಿ ಈಚೆಗೆ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಮಾತನಾಡಿದ ಅವರು, ‘ಶಿಕ್ಷಣ ಪಡೆಯುವ ಹಂತ ಮುಗಿಸಿರುವ ವಿದ್ಯಾರ್ಥಿಗಳು ಇನ್ನು ಮುಂದೆ ಜೀವನ ರೂಪಿಸಿಕೊಳ್ಳಲು ಅವಶ್ಯವಾದ ಉದ್ಯೋಗದತ್ತ ಗಮನಹರಿಸಬೇಕು’ ಎಂದರು.

‘ಸಂದರ್ಶನಕ್ಕೆ ಹಾಜರಾಗುವ ಮುಂಚೆ ಸಂಬಂಧಿಸಿದ ಉದ್ಯೋಗದ ಕುರಿತು ಸಾಧಕ– ಬಾಧಕಗಳ ಅಧ್ಯಯನ ನಡೆಸಬೇಕು. ಸಂದರ್ಶಕರ ಎದುರು ಮುಕ್ತವಾಗಿ ಮಾತನಾಡಬೇಕು. ವೃತ್ತಿ ಬದ್ಧತೆಯನ್ನು ತಿಳಿಸಬೇಕು’ ಎಂದು ಸಲಹೆ ನೀಡಿದರು.

ವಿಪ್ರೊ ಕಂಪೆನಿಯ ಮಿಥಿಲೇಶ ಅವರು, ‘ಯಾವುದೇ ಗುರಿ ಸಾಧಿಸಬೇಕಾದರೆ ಸತತ ಪರಿಶ್ರಮ ಮತ್ತು ಕಾರ್ಯದಕ್ಷತೆ ಹೊಂದಿರಬೇಕು. ಆಗ ಮಾತ್ರ ಜೀವನದ ಪ್ರಗತಿ ಹೊಂದಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು. ಇದೇ ವೇಳೆ ಸಂದರ್ಶಕರ ಮಂಡಳಿಯ ಸದಸ್ಯರನ್ನು ಗೌರವಿಸಲಾಯಿತು.

ಮೇಳದಲ್ಲಿ ವಿವಿಧ ಕಂಪನಿಗಳ ಪ್ರಮುಖರು ಭಾಗವಹಿಸಿ, ಅಭ್ಯರ್ಥಿಗಳ ಸಂದರ್ಶನ ನಡೆಸಿದರು.

ಪ್ರಮುಖರಾದ ಜಗದೀಶ ಅಸುಂಡಿ, ರವಿ ಅಲಗೋಡಿ, ಮಂಜುನಾಥ ಯಾದವಾಡ, ಸುರೇಶ ಎಸ್.ಎಸ್., ವಿನೋದ ಹೂಲಿ, ಮಲ್ಲಿಕ್ ಧಾರವಾಡ, ಮನ್ಸೂರ ಅಲಿ ಫಿರಜಾದೆ, ಕಿರಣಕುಮಾರ್ ಮಂಟೂರ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-24-1240484213

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.