ಹುಬ್ಬಳ್ಳಿ: ‘ಕಾರ್ಮಿಕರ ದಿನಾಚರಣೆಗೆ ಚಾರಿತ್ರಿಕ ಇತಿಹಾಸವಿದೆ. ವಿಶ್ವದ ಕಾರ್ಮಿಕರನ್ನು ಒಗ್ಗೂಡಿಸಲು, ಕಾರ್ಮಿಕರ ಹಕ್ಕುಗಳು ಹಾಗೂ ಘನತೆಯ ಬದುಕಿಗಾಗಿ ನಡೆಸುತ್ತಿರುವ ಹೋರಾಟಕ್ಕೆ ಇದು ಸ್ಫೂರ್ತಿಯಾಗಿದೆ’ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ ಹೇಳಿದರು.

ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ಎಐಟಿಯುಸಿ, ಸಿಐಟಿಯುಸಿ ಸಂಘಟನೆ ವತಿಯಿಂದ ನಗರದ ಪಾಲಿಕೆ ಉದ್ಯಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.

‘ಕೇಂದ್ರ ಸರ್ಕಾರವು ಕಾರ್ಮಿಕರನ್ನು ನವ ಗುಲಾಮಗಿರಿ ವ್ಯವಸ್ಥೆಗೆ ತಳ್ಳುವಂತಹ ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡುತ್ತಿದೆ. ಇದರಿಂದ ಕಾರ್ಮಿಕರು ಹೆಚ್ಚು ಶೋಷಣೆಗೆ ಒಳಗಾಗುತ್ತಾರೆ. 9 ವರ್ಷಗಳಿಂದ ಕಾರ್ಮಿಕರ ವೇತನ ಪರಿಷ್ಕರಣೆಯಾಗಿಲ್ಲ. ಕನಿಷ್ಠ ವೇತನದ ಅಧಿಸೂಚನೆ ಹೊರಡಿಸಿಲ್ಲ. ಇದಕ್ಕಾಗಿ ಹೋರಾಟ ತೀವ್ರಗೊಳಿಸಬೇಕಿದೆ’ ಎಂದರು.

ಹಳೇ ಹುಬ್ಬಳ್ಳಿಯ ಎ.ಜೆ.ಮುಧೋಳ ಭವನದಿಂದ ಪಾಲಿಕೆ ಉದ್ಯಾನದ ತನಕ ಕಾರ್ಮಿಕರು ಮೆರವಣಿಗೆ ನಡೆಸಿದರು. ಎಐಟಿಯುಸಿ ಮುಖಂಡರಾದ ಬಶೀರ ಮುಧೋಳ, ಬಿ.ಎಸ್. ಸೊಪ್ಪಿನ, ರಮೇಶ ಭೂಸ್ಲೆ, ಬಿ.ಐ. ಈಳಿಗೇರ, ಬಿ.ಎನ್. ಪೂಜಾರಿ, ಬಾಬಾಜಾನ ಮುಧೋಳ, ಇಸೂಫ್ ಬಳ್ಳಾರಿ, ಸಿದ್ದು ತೇಜಿ, ಚಿದಾನಂದ ಸವದತ್ತಿ, ಪುಂಡಲೀಕ ಬಡಿಗೇರ, ಹನಮಂತಪ್ಪ ಪವಾಡಿ ಹಾಗೂ ಕಟ್ಟಡ ಕಾರ್ಮಿಕರು, ಹಮಾಲಿ, ಆಟೊ ಚಾಲಕರು, ಬಿಸಿಯೂಟ ಕಾರ್ಮಿಕರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-24-1700856621

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.