ಹುಬ್ಬಳ್ಳಿ: ‘ವ್ಯಕ್ತಿಯಲ್ಲಿ ಎಷ್ಟೇ ಪ್ರತಿಭೆ ಇದ್ದರೂ ಪರಿಶ್ರಮವೂ ಅಗತ್ಯವಿರುತ್ತದೆ. ಪ್ರಾಮಾಣಿಕತೆ ಹಾಗೂ ಪರಿಶ್ರಮವನ್ನೇ ಎಲ್ಲ ಕ್ಷೇತ್ರಗಳು ಬಯಸುತ್ತವೆ’ ಎಂದು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಗರಿಮಾ ಪನ್ವಾರ್ ಹೇಳಿದರು.

ಇಲ್ಲಿನ ವಿದ್ಯಾನಗರದ ಕೆಎಲ್ಇ ಸಂಸ್ಥೆಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಆ್ಯಂಡ್ ರಿಸರ್ಚ್ ವತಿಯಿಂದ ಸಂಸ್ಥೆಯ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಮ್ಯಾಡ್ಸ್ ಮೀಟ್–ಪದವಿ ವಿದ್ಯಾರ್ಥಿಗಳಿಗಾಗಿ ನವೋದ್ಯಮ ಉತ್ಸವ’ದಲ್ಲಿ ಮಾತನಾಡಿದರು.

‘ಉದ್ಯಮ ರಂಗದಲ್ಲಿ ಹಲವಾರು ಸವಾಲುಗಳು ಎದುರಾಗುತ್ತವೆ. ಕ್ಷೇತ್ರದಲ್ಲಿನ ಸಮಸ್ಯೆ ಗುರುತಿಸಿ, ಮಾನವೀಯ ನೆಲೆಯಲ್ಲಿ ಪರಿಹಾರ ಕಂಡುಕೊಳ್ಳಬೇಕು. ಉದ್ಯಮಿಗಳು ವೈಫಲ್ಯವನ್ನೂ ಸ್ವೀಕರಿಸಬೇಕು. ಪ್ರತಿದಿನ ಪರಿಶ್ರಮದಿಂದ ಕೆಲಸ ನಿರ್ವಹಿಸುವುದೇ ಯಶಸ್ಸಿನ ಸೂತ್ರ’ ಎಂದರು.

‘ಆಧುನಿಕ ತಂತ್ರಜ್ಞಾನ ಅನೇಕ ಅವಕಾಶಗಳನ್ನು ನೀಡಿದರೂ, ನಾವೇನು ಮಾಡುತ್ತೇವೆ ಎಂಬುದೇ ಅಂತಿಮವಾಗಿರುತ್ತದೆ. ಯಾವುದೇ ಕ್ಷೇತ್ರದಲ್ಲಿ ಉತ್ತಮ ಆಲೋಚನೆಯೊಂದಿಗೆ ಕಾರ್ಯಪ್ರವೃತ್ತರಾಗಿ. ಆತ್ಮವಿಶ್ವಾಸ, ಸಮಾಜದ ಬಗ್ಗೆ ಕಾಳಜಿ, ಅಂದುಕೊಂಡಿದ್ದನ್ನು ಸಾಧಿಸುವ ಹಠ ಅತ್ಯವಶ್ಯ’ ಎಂದು ತಿಳಿಸಿದರು.

ಸಂಸ್ಥೆಯ ನಿರ್ದೇಶಕ ರಾಜೇಂದ್ರಪ್ರಸಾದ್ ಹನಗಂಡಿ ಮಾತನಾಡಿ, ‘ಸಾಮಾಜಿಕ ಸಮಸ್ಯೆ ಪರಿಹರಿಸಲು, ಜನರಿಗೆ ನೆರವಾಗುವ ಉದ್ದೇಶದಿಂದ ಸ್ಥಾಪಿಸುವ ಉದ್ಯಮ ಯಶಸ್ವಿಯಾಗುತ್ತದೆ. ದೇಶದಲ್ಲಿ ಸದ್ಯ 1.56 ಲಕ್ಷ ನವೋದ್ಯಮಗಳಿದ್ದು, ಹೊಸ ಆಲೋಚನೆ ಉಳ್ಳವರಿಗೆ ಇದು ಸಕಾಲ. ಆದರೆ, ತಪ್ಪುಗಳಾದಾಗ ಹಿಂಜರಿಯಬಾರದು; ಮತ್ತದೇ ತಪ್ಪುಗಳನ್ನು ಮಾಡಬಾರದು’ ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಸಂಯೋಜಕಿ ಪ್ರೊ.ಅರುಣಾ ಬಟ್ಟೂರ ಸಹ ಪ್ರಾಧ್ಯಾಪಕ ಅಮಿತ್ ಅಂಗಡಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-24-480063989

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.