ಹುಕ್ಕೇರಿ: ‘ಉದ್ಯೋಗ ಬಯಸುವವರು ಸಂದರ್ಶನ ಅಥವಾ ಲಿಖಿತ ಪರೀಕ್ಷೆಗೆ ಬರುವ ಮುಂಚೆ ತಯಾರಿ ಮಾಡಿಕೊಂಡಿರಬೇಕು. ಜತೆಗೆ ಉತ್ತಮ ಸಂವಹನ ಕಲೆ ಹೊಂದಿ, ಪೆನಲ್ ಮುಂದೆ ಸರಿಯಾದ ಪ್ರಶ್ನೆಗೆ ತಕ್ಕ ಉತ್ತರ ನೀಡಿದರೆ ಉದ್ಯೋಗ ಪಡೆಯಲು ಸಾಧ್ಯ’ ಎಂದು ಉದ್ಯೋಗ ಕೋಶ ಸಂಯೋಜಕ ಪ್ರೊ.ಶಕೀಬ್ ಹೇಳಿದರು.

ಬುಧವಾರ ತಾಲ್ಲೂಕಿನ ಪಾಶ್ಚಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಉದ್ಯೋಗ ಮೇಳ’ ಉದ್ಘಾಟಿಸಿ ಮಾತನಾಡಿದರು.

ಟಾಟಾ ಇಲೆಕ್ಟ್ರಾನಿಕ್ಸ್, ಪಾಕ್ಷಕಾನ್, ಎಮಿನೆಂಟ್ ಎಚ್ ಆರ್.ಸೊಲುಶನ್ಸ್ ಮತ್ತು ಕಾಲೇಜಿನ ಐಕ್ಯೂಎಸಿ ಹಾಗೂ ಪ್ಲೇಸಮೆಂಟ್ ಸೆಲ್ ಸಹಯೋಗದಲ್ಲಿ ಕಂಪನಿ ಉದ್ಯೋಗ ಅವಕಾಶಗಳಿಗಾಗಿ ಕ್ಯಾಂಪಸ್ ಆಯ್ಕೆ ಆಯೋಜಿಸಿದ್ದವು.

ಮುಖ್ಯ ಅತಿಥಿ ಎಚ್.ಆರ್.ಮ್ಯಾನೇಜರ್ ರಾಕೇಶ್ ಎಸ್., ನೇಮಕಾತಿ ಪ್ರಕ್ರಿಯೆ, ಆಯ್ಕೆ ವಿಧಾನ ಮತ್ತು ಕಂಪನಿಯ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ಪ್ರಾಚಾರ್ಯ ಡಾ.ಶ್ರೀಧರ್ ಕುಲಕರ್ಣಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಲಿಖಿತ ಪರೀಕ್ಷೆ: ಆಗಮಿಸಿದ್ದ ನೂರಾರು ವಿದ್ಯಾರ್ಥಿಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಪ್ರೊ.ಅಬ್ದುಲ್ ಲತೀಫ್ ನದಾಫ್, ಡಾ.ಕಲ್ಪನಾ ಪೈನಗೋಣಿ ಸೇರಿದಂತೆ ಕೊಲ್ಲಾಪುರ, ಬೈಲಹೊಂಗಲ, ಗೋಕಾಕ, ಬೆಳಗಾವಿ ತಾಲ್ಲೂಕು ಸೇರಿದಂತೆ ವಿವಿಧ ಕಾಲೇಜುಗಳಿಂದ ಹಾಗೂ ಪಾಶ್ಚಾಪುರದ ಒಟ್ಟು 120 ಉದ್ಯೋಗ ಆಕಾಂಕ್ಷಿಗಳು ಭಾಗವಹಿಸಿದ್ದರು.

ಡಾ.ಶಿವಶಂಕರ ಸ್ವಾಗತಿಸಿದರು. ಪ್ರೊ.ನೀಲಕಂಠ ಬೊಮ್ಮನವರ ನಿರೂಪಿಸಿದರು. ಪ್ರೊ.ರವಿ ಮೆಟಗೇರಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260402-21-834951026

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.