ಹುಣಸೂರು: ಮಹಿಳೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸ್ವಯಂ ಉದ್ಯೋಗ ಹೊಂದಬೇಕಿದ್ದು, ಆ ದಿಕ್ಕಿನಲ್ಲಿ ವಿವೇಕ ಗ್ರಾಮೀಣ ಜೀವನಧಾರ ಕೇಂದ್ರ ಹಲವು ವರ್ಷಗಳಿಂದ ವಿವಿಧ ಕೌಶಲ ತರಬೇತಿ ನೀಡುತ್ತಿದೆ ಎಂದು ತರಬೇತಿ ಶಿಬಿರದ ಸಂಯೋಜಕ ರಾಜು ಹೇಳಿದರು.

ನಗರದ ಕೇಂದ್ರೀಯ ಕಚೇರಿಯಲ್ಲಿ ಈಚೆಗೆ ಬ್ಯೂಟಿಷಿಯನ್ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.

ಕೇಂದ್ರದಲ್ಲಿ ಹಲವು ವರ್ಷಗಳಿಂದ ವಿವಿಧ ತರಬೇತಿಯನ್ನು ಸಂಬಂಧಿಸಿದ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ ತರಬೇತಿ ಮತ್ತು ಸರ್ಕಾರದ ಯೋಜನೆಗಳ ಪರಿಚಯ ಮಾಡಿಸುವ ಕೆಲಸ ನಿರಂತರವಾಗಿ ನಡೆಸಿದೆ. ಈ ಕೇಂದ್ರದಲ್ಲಿ ತರಬೇತಿ ಪಡೆದ ಬಹುತೇಕ ಶಿಬಿರಾರ್ಥಿಗಳು ಸ್ವಯಂ ಉದ್ಯೋಗ ಮಾಡುತ್ತಿದ್ದಾರೆ ಎಂದರು.

ಆರೋಗ್ಯ ಇಲಾಖೆ ತಾಲ್ಲೂಕು ಅಧಿಕಾರಿ ರಾಜೇಶ್ವರಿ, ‘ಮೂರು ತಿಂಗಳ ಅವಧಿಯಲ್ಲಿ ಕಲಿತ ವಿದ್ಯೆಯನ್ನು ಮರೆಯದೆ ನಿಮ್ಮ ಆರ್ಥಿಕ ಭದ್ರತೆಗೆ ಒತ್ತು ನೀಡುವ ಮೂಲಕ ಸಬಲರಾಗಬೇಕು. ಆರ್ಥಿಕ ಸಬಲೀಕರಣದೊಂದಿಗೆ ಆರೋಗ್ಯ ಕುಟುಂಬವನ್ನು ರೂಪಿಸಿಕೊಳ್ಳುವತ್ತ ಗಮನ ನೀಡಬೇಕು’ ಎಂದು ಹೇಳಿದರು.

ತಾಲ್ಲೂಕು ಶಿಶು ಅಭಿವೃದ್ಧಿ ಅಧಿಕಾರಿ ಸೋಮಯ್ಯ ಮಾತನಾಡಿ, ‘ಮಹಿಳೆಯರು ಪುರುಷರಿಗೆ ಸರಿಸಮನಾಗಿ ಬದುಕುವ ಎಲ್ಲಾ ಅವಕಾಶಗಳನ್ನು ಸರ್ಕಾರ ರೂಪಿಸಿದೆ. ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ಪಡೆದು ಅದರ ಲಾಭವನ್ನು ಪಡೆದು ಹೊಸ ಬದುಕು ಕಟ್ಟಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೃಷ್ಣಕುಮಾರ್, ಕೆಂಚನಹಳ್ಳಿ ವಿವೇಕಾನಂದ ಯೂತ್ ಮೂಮೆಂಟ್ ವ್ಯವಸ್ಥಾಪಕ ರವಿಕುಮಾರ್, ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರದ ಚಂದ್ರೇಶ್, ಮಾದನಾಯಕ, ರೇಖಾ, ಹರ್ಷಿತಾ, ತರಬೇತಿ ಶಿಕ್ಷಕರಾದ ಗೀತಾ,ಪಲ್ಲವಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260403-38-1609538997

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.