ಹುಣಸೂರು: ಯುವ ಸಮುದಾಯಕ್ಕೆ ಉದ್ಯೋಗ ನೀಡಿ, ಅವರನ್ನು ಸಾಮಾಜಿಕವಾಗಿ ಅಭಿವೃದ್ಧಿಯತ್ತ ಕರೆದೊಯ್ಯಲು ಸಾಧ್ಯ ಎಂದು ಜನ್ಮದಿನದಂದು ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ‘ಸ್ನೇಹಜೀವಿ’ ಎಚ್.ಪಿ.ಮಂಜುನಾಥ್ ಹೇಳಿದರು.

ನಗರದಲ್ಲಿ ನಡೆದ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಯುವಜನರಗೆ ಉದ್ಯೋಗ ಸಿಕ್ಕರೆ ಅವರ ಭವಿಷ್ಯವನ್ನು ಅವರೇ ನಿರ್ಮಿಸಿಕೊಳ್ಳುವರು. ವಿದ್ಯಾವಂತ ಲಕ್ಷಾಂತರ ಯುವಶಕ್ತಿಗೆ ಕೆಲಸ ನೀಡುವುದರೊಂದಿಗೆ ದೇಶದ ಆರ್ಥಿಕ ಬೆಳವಣಿಗೆಗೆ ಪುಷ್ಟೀಕರಿಸುವ ಕೆಲಸ ಈ ಮೇಳದಲ್ಲಿ ನಡೆದಿದೆ ಎಂದರು.

ಸಂಬಳ: ಯುವಶಕ್ತಿ ದೇಶದ ಆಸ್ತಿಯಾಗಿದ್ದು, ನಿಮ್ಮ ಹುದ್ದೆಗೆ ತಕ್ಕಂತೆ ಸಂಬಳ ಸಿಗಲಿದೆ. ನೀವು ಸಂಬಳಕ್ಕಾಗಿ ಉದ್ಯೋಗಕ್ಕೆ ಸೇರುವ ಬದಲು ನಿಮ್ಮ ಭವಿಷ್ಯ ರೂಪಿಸಿಕೊಳ್ಳಲು ಉದ್ಯೋಗ ಹೊಂದಿ ಎಂದು ಸಲಹೆ ನೀಡಿದರು. ಗಳಿಸಿದ ಹಣದಲ್ಲಿ ಅಲ್ಪ ಪ್ರಮಾಣದ ಉಳಿತಾಯ ಅತ್ಯಗತ್ಯ. ಉದ್ಯೋಗ ಮೇಳದಲ್ಲಿ 1,224 ಅಭ್ಯರ್ಥಿಗಳು ರಾಜ್ಯದ ವಿವಿಧ ಜಿಲ್ಲೆಗಳಿಂದ ನೋಂದಣಿ ಮಾಡಿದ್ದು, ಅವರಲ್ಲಿ 845 ಯುವಕರಿಗೆ ಉದ್ಯೋಗ ಸಿಕ್ಕಿದೆ ಎಂದರು.

ಮೈಸೂರು ಜಿಲ್ಲೆಯ 984 ಅರ್ಜಿಗಳಲ್ಲಿ 758 ಅರ್ಜಿದಾರರಿಗೆ ಉದ್ಯೋಗ ಪತ್ರ ಸಿಕ್ಕಿದ್ದು, ಈ ಪೈಕಿ ಹುಣಸೂರು ತಾಲ್ಲೂಕಿನ 586 ಅರ್ಜಿಗಳಲ್ಲಿ 507, ಪಿರಿಯಾಪಟ್ಟಣ 223 ಅರ್ಜಿಗೆ 156, ಎಚ್.ಡಿ.ಕೋಟೆ ತಾಲ್ಲೂಕಿನ 72 ಅರ್ಜಿಗೆ 35, ಕೆ.ಆರ್. ನಗರ 103 ಅರ್ಜಿಗೆ 60 ಜನರಿಗೆ ಉದ್ಯೋಗ ಪತ್ರ ಸಿಕ್ಕಿದೆ ಎಂದರು.

ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮಾತನಾಡಿ, ರಾಜ್ಯ ಸರ್ಕಾರ 2 ಲಕ್ಷ ಯುವಕರಿಗೆ ಉದ್ಯೋಗ ನೀಡುವ ಭರವಸೆ ನೀಡಿದ್ದು, ಒಂದೆರಡು ತಿಂಗಳಲ್ಲಿ ಈಡೇರಲಿದೆ ಎಂದರು.

ಗೌರವ: ಅಂತರರಾಷ್ಟ್ರೀಯ ಶುಶ್ರೂಷಕರ ದಿನಾಚರಣೆ ಅಂಗವಾಗಿ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರಿಂದ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿಯನ್ನು ಸ್ವೀಕರಿಸಿದ ಹುಣಸೂರು ತಾಲ್ಲೂಕಿನ ಕವಿತಾ ಜಗನ್ನಾಥ್ ಅವರನ್ನು ಉದ್ಯೋಗ ಮೇಳದಲ್ಲಿ ಗೌರವಿಸಲಾಯಿತು.

ಟಿವಿಎಸ್ ಸೇರಿದಂತೆ ವಿವಿಧ ಕಂಪೆನಿಗಳ ಅಧಿಕಾರಿಗಳು , ರಾಜ್ಯ ಗ್ಯಾರಂಟಿ ಸಮಿತಿ ಉಪಾಧ್ಯಕ್ಷೆ ಪುಷ್ಪ ಅಮರನಾಥ್, ಹುಡಾ ಅಧ್ಯಕ್ಷ ಎಚ್.ಪಿ. ಅಮರನಾಥ್, ಸ್ನೇಹಬಳಗ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಆನಂದ್, ನೇರಳಕುಪ್ಪೆ ಮಹದೇವ್, ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-38-443117797

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.