ಭಾರತದಲ್ಲಿ ಪ್ರಪಂಚದಲ್ಲಿಯೇ ಅತಿ ಹೆಚ್ಚಿನ ಯುವಜನರಿದ್ದಾರೆ (15 ಮತ್ತು 29 ವರ್ಷದ ನಡುವೆ ಇರುವವರು). ಉದ್ಯೋಗ ಮಾಡುವ ಸಾಮರ್ಥ್ಯವುಳ್ಳ ದೇಶದ ಜನರಲ್ಲಿ ಇವರ ಪ್ರಮಾಣವು ಮೂರನೇ ಒಂದರಷ್ಟಿದೆ (ಶೇ 33). ಈ ಬೃಹತ್ ವಿದ್ಯಾವಂತ ಯುವಪಡೆಯಲ್ಲಿ ಎಷ್ಟು ಮಂದಿಯನ್ನು ಉದ್ಯೋಗ ಮಾರುಕಟ್ಟೆ ಒಳಗೊಳ್ಳುತ್ತದೆ ಎನ್ನುವುದು ದೇಶದ ಯುವಶಕ್ತಿಯು ಯಾವ ರೀತಿಯ ಆರ್ಥಿಕಶಕ್ತಿಯಾಗಿ ಮಾರ್ಪಾಡಾಗುತ್ತದೆ ಎನ್ನುವುದನ್ನು ನಿರ್ಧರಿಸುತ್ತದೆ. ಆದರೆ, ಪ್ರಸ್ತುತ ದೇಶದ ಪದವೀಧರರಲ್ಲಿ ನಿರುದ್ಯೋಗ ತೀವ್ರವಾಗಿದ್ದು, 15ರಿಂದ 25 ವರ್ಷದೊಳಗಿನ ಶೇ 40ರಷ್ಟು ಮಂದಿ, 25ರಿಂದ 29 ವರ್ಷದೊಳಗಿನ ಪದವೀಧರರಲ್ಲಿ ಶೇ 20ರಷ್ಟು ನಿರುದ್ಯೋಗಿಗಳಾಗಿದ್ದಾರೆ. 20ರಿಂದ 29 ವರ್ಷದೊಳಗಿನ 1.1 ಕೋಟಿ ಪದವೀಧರರಿಗೆ ಉದ್ಯೋಗ ಇಲ್ಲ ಎಂದು ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ‘ಸ್ಟೇಟ್ ಆಫ್ ವರ್ಕಿಂಗ್ ಇಂಡಿಯಾ– 2026’ ವರದಿ ಹೇಳಿದೆ. ಸರ್ಕಾರದ ವಿವಿಧ ಮಾಹಿತಿಗಳ ಮೂಲಗಳನ್ನು ಆಧರಿಸಿ 40 ವರ್ಷಗಳ (1983ರಿಂದ 2023) ವಿದ್ಯಾಭ್ಯಾಸ ಮತ್ತು ಉದ್ಯೋಗದ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲಾಗಿದೆ.

ಸ್ವಾತಂತ್ರ್ಯದ ನಂತರ ದೇಶದಲ್ಲಿ ವಿದ್ಯಾಭ್ಯಾಸ ಪಡೆಯುವವರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಲೇ ಇದೆ. ವಿದ್ಯಾಭ್ಯಾಸ ಪಡೆಯುವ ವಿಚಾರದಲ್ಲಿ ಬಡವರು, ಹಿಂದುಳಿದವರು, ಮಹಿಳೆಯರು, ಗ್ರಾಮೀಣ ಪ್ರದೇಶದವರು ಹೀಗೆ ಹಿಂದಿನಿಂದಲೂ ಇರುವ ಸಾಮಾಜಿಕ ಆರ್ಥಿಕ ಅಂತರಗಳು ಕಡಿಮೆಯಾಗಿವೆ. ಆದರೆ, ವಿದ್ಯಾಭ್ಯಾಸದಲ್ಲಿ ಅಸಮಾನತೆ ಇನ್ನೂ ಗಮನಾರ್ಹವಾಗಿಯೇ ಇದೆ. ಬಡವರು ಮತ್ತು ಶ್ರೀಮಂತರ ನಡುವೆ ಕೋರ್ಸ್ಗಳ ಆಯ್ಕೆ, ಗುಣಮಟ್ಟದ ವಿದ್ಯಾಭ್ಯಾಸದ ಲಭ್ಯತೆ ಇತ್ಯಾದಿ ವಿಚಾರಗಳಲ್ಲಿ ಅಂತರ ಇದೆ. ಇದರ ನಡುವೆಯೂ ದೇಶದಲ್ಲಿ ಪದವೀಧರರ ಸಂಖ್ಯೆಯು ಹೆಚ್ಚಾಗಿದೆ. ಆದರೆ, ಮುಖ್ಯ ಸಮಸ್ಯೆ ಏನೆಂದರೆ, ಪದವೀಧರರಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚಾಗಿದೆ. ಪದವೀಧರರಿಗೆ ಉದ್ಯೋಗ ಸಿಗುವುದು ಅನಿಶ್ಚಿತವಾಗಿದೆ, ಪದವಿಯು ಉದ್ಯೋಗವಾಗಿ ಮಾರ್ಪಾಡುಗುತ್ತಿಲ್ಲ ಎಂದು ವರದಿ ಹೇಳಿದೆ.

ಕಳೆದೊಂದು ದಶಕದಲ್ಲಿ ಉದ್ಯೋಗ ಸೃಷ್ಟಿ ಸಮರ್ಪಕವಾಗಿ ಆಗಿಲ್ಲ. ಕೋವಿಡ್ ನಂತರದಲ್ಲಿ ದೇಶದಲ್ಲಿ ಉದ್ಯೋಗಸ್ಥರ ಸಂಖ್ಯೆಯು 49 ಕೋಟಿಯಿಂದ 57.2 ಕೋಟಿಗೆ ಹೆಚ್ಚಾಗಿದೆ. 2021–22 ಮತ್ತು 2023–24ರ ನಡುವೆ ಉದ್ಯೋಗಸ್ಥ ಪುರುಷರ ಪ್ರಮಾಣವು ಶೇ 71ರಿಂದ ಶೇ 74ಕ್ಕೆ ಹೆಚ್ಚಾಗಿದ್ದರೆ, ಉದ್ಯೋಗಸ್ಥ ಮಹಿಳೆಯರ ಪ್ರಮಾಣವು ಶೇ 26ರಿಂದ ಶೇ 34ಕ್ಕೆ ಏರಿದೆ.

ಹೆಚ್ಚು ಉದ್ಯೋಗ ಸೃಷ್ಟಿ ಆಗಿರುವುದು ಕೃಷಿ ಕ್ಷೇತ್ರದಲ್ಲಿ; 2021–22 ಮತ್ತು 2023–24ರ ನಡುವೆ 4 ಕೋಟಿ ಉದ್ಯೋಗಗಳು ಸೃಷ್ಟಿಯಾಗಿದ್ದು, ಇದರಲ್ಲಿ ಮಹಿಳೆಯರ ಸಂಖ್ಯೆಯು 3.8 ಕೋಟಿ ಆಗಿದೆ. ಬಹುತೇಕ ಪುರುಷರು ಮತ್ತು ಮಹಿಳೆಯರ ಸಂಬಳದ ಆದಾಯ ಮತ್ತು ಸ್ವಯಂ ಉದ್ಯೋಗದ ಆದಾಯವು ಏರಿಕೆಯಾಗಿಯೇ ಇಲ್ಲ. ದೇಶದಲ್ಲಿ ಆರ್ಥಿಕ ಬೆಳವಣೆಗೆಯು ಅಸಮಾನತೆಯಿಂದ ಕೂಡಿದ್ದು, ಉದ್ಯೋಗಕ್ಕಾಗಿ ಯುವಜನರು ವಲಸೆ ಹೋಗುವುದು ಮುಖ್ಯ ವಿದ್ಯಮಾನವಾಗಿದೆ ಎಂದೂ ವರದಿ ಹೇಳಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-51-1622696047

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.