ಜಗಳೂರು: ‘ರಾಜ್ಯದಲ್ಲಿ 50 ಲಕ್ಷಕ್ಕೂ ಹೆಚ್ಚು ರಂಗಕರ್ಮಿಗಳು, ಜಾನಪದ ಕಲಾವಿದರಿದ್ದು ಕಾರ್ಮಿಕರಿಗೆ ಸಿಗುವ ಎಲ್ಲ ಸವಲತ್ತುಗಳು ಕಲಾವಿದರಿಗೂ ಸಿಗಬೇಕು’ ಎಂದು ಕರ್ನಾಟಕ ಕಲಾವಿದರ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ವೀರೇಂದ್ರ ಪ್ರಸಾದ್ ಆಗ್ರಹಿಸಿದರು.

ಪಟ್ಟಣದ ಬಯಲು ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಕಲಾವಿದರ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಶಕ್ತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನಮ್ಮ ಸಂಘಟನೆಯಲ್ಲಿ ರಾಜ್ಯವ್ಯಾಪಿ 17,500 ಕಲಾವಿದರು ಸದಸ್ಯತ್ವ ಹೊಂದಿದ್ದಾರೆ. ಆನ್ಲೈನ್ ಅರ್ಜಿ ಆಹ್ವಾನದಿಂದ ಗ್ರಾಮೀಣ ಭಾಗದ ಮಹಿಳಾ ಕಲಾವಿದರು ವಂಚಿತರಾಗುತ್ತಿದ್ದು, ಸಂಘಟನೆಯನ್ನು ಹೋಬಳಿ ಮಟ್ಟಕ್ಕೆ ವಿಸ್ತರಿಸಿ ಬಲಪಡಿಸಲಾಗು ವುದು. ಮುಂದಿನ ಬಜೆಟ್ನಲ್ಲಿ ಕಲಾವಿದರ ಭದ್ರತೆಗಾಗಿ ₹5,000 ಕೋಟಿ ಅನುದಾನ ಮೀಸಲಿಡಲು ಆಗ್ರಹಿಸಿ ಶೀಘ್ರವೇ ವಿಧಾನಸೌಧ ಚಲೋ ನಡೆಸಲಾಗುವುದು’ ಎಂದು ತಿಳಿಸಿದರು.

‘ಕಲೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಹಿರಿಯ ಕಲಾವಿದರ ಜೀವನ ಭದ್ರತೆಗಾಗಿ ಸರ್ಕಾರ ಯೋಜನೆಯನ್ನು ರೂಪಿಸಬೇಕು’ ಎಂದು ಮಾಜಿ ಶಾಸಕ ಕೃಷ್ಣಾರೆಡ್ಡಿ ಒತ್ತಾಯಿಸಿದರು.

‘ಸವಲತ್ತುಗಳನ್ನು ಪಡೆಯ ಬೇಕಾದರೆ ಕಲಾವಿದರಲ್ಲಿ ಒಗ್ಗಟ್ಟು ಅಗತ್ಯವಿದೆ. ಕಲಾವಿದರ ಕುಂದು– ಕೊರತೆಗಳಿಗೆ ವಿಧಾನಸೌಧ ದಲ್ಲಿ ಧ್ವನಿಯಾಗುವ ಶಾಸಕರನ್ನು ಆಯ್ಕೆಮಾಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಪಿ. ಪಾಲಯ್ಯ ಅಭಿಪ್ರಾಯಪಟ್ಟರು.

ಕೆಪಿಸಿಸಿ ಎಸ್ಟಿ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಡಿ. ಕೀರ್ತಿ ಕುಮಾರ್ ಮಾತನಾಡಿದರು. 21 ಸಾಧಕರಿಗೆ ಜಾನಪದ ಪ್ರಶಸ್ತಿ ಹಾಗೂ ಕರ್ನಾಟಕ ರಂಗ ಪದ್ಮಶ್ರೀ, ಕರ್ನಾಟಕ ಚಿತ್ರ ಪದ್ಮಶ್ರೀ ಬಿರುದು ಪ್ರದಾನ ಮಾಡಲಾಯಿತು.

ಹಿಪ್ಪರಗಿ ಮಠದ ಮಾತೃಶ್ರೀ ಅನುರಾಧೇಶ್ವರಿ ಅಮ್ಮ, ಮುಖಂಡರಾದ ಬಿಸ್ತುವಳ್ಳಿ ಬಾಬು, ರಾಜು ಗೌಡ, ಮರೇನಹಳ್ಳಿ ಕುಮಾರ, ಡಿ.ಕೆಂಪಣ್ಣ, ವೃಷಭೇಂದ್ರ, ಕುಮಾರ್, ಸುಮಾ, ಬಸವರಾಜ್, ಭಾರತಿ, ಭರತೇಶ್, ಶಾರದಮ್ಮ, ಸಂದೀಪ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-43-1157233996

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.