ಕಾರ್ಕಳ: ವಿದ್ಯಾಭ್ಯಾಸ ಮುಗಿದ ಬಳಿಕ ಮುಂದೇನು ಎನ್ನುವ ಪ್ರಶ್ನೆ ಎದುರಾದಾಗ ಶಿಕ್ಷಣದಿಂದ ಹೊರತಾದ ಚಾಣಾಕ್ಷತನವನ್ನು ಎಲ್ಲ ಕಂಪನಿಗಳು ಅಪೇಕ್ಷಿಸುತ್ತವೆ. ನಮ್ಮ ಜೀವನವನ್ನು ನಾವೇ ಎದುರಿಸಬೇಕಾಗಿರುವುದರಿಂದ ಬೇರೆ ಬೇರೆ ರೀತಿಯ ಅವಕಾಶಗಳನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ಬಳಸಿಕೊಳ್ಳಬೇಕು ಎಂದು ಟ್ಯಾಲೆಂಟ್ ಕನೆಕ್ಟ್ ಸಂಸ್ಥೆಯ ಮ್ಯಾನೇಜರ್ ರುಚಿತಾ ಹೇಳಿದರು.

ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನ ಐಕ್ಯುಎಸಿ ಹಾಗೂ ಎಚ್ಆರ್ಡಿ ಮತ್ತು ಪ್ಲೇಸ್ಮೆಂಟ್ ಸೆಲ್ ಆಶ್ರಯದಲ್ಲಿ, ಕಾಲೇಜಿನ ವಿದ್ಯಾರ್ಥಿಗಳಿಗೆ ಟ್ಯಾಲೆಂಟ್ ಕನೆಕ್ಟ್ ಕಂಪನಿ ಹಮ್ಮಿಕೊಂಡಿದ್ದ ಉದ್ಯೋಗ ಸಂದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಎ. ಕೋಟ್ಯಾನ್ ಮಾತನಾಡಿ, ಉದ್ಯೋಗವೆನ್ನುವುದು ಎಲ್ಲ ವಿದ್ಯಾರ್ಥಿಗಳ ಪ್ರಥಮ ಆದ್ಯತೆಯಾಗಿದೆ. ಹೆಚ್ಚಿನ ಶಿಕ್ಷಣ ಸಂಸ್ಥೆಗಳು ಹೆತ್ತವರಲ್ಲಿ ಉದ್ಯೋಗದ ಕನಸನ್ನು ಬಿತ್ತುತ್ತವೆ. ಹೆತ್ತವರು ತಮ್ಮ ಆಸಕ್ತಿಯನ್ನು ಮಕ್ಕಳ ಮೇಲೆ ಹೇರಿ ಅವರ ಅಪೇಕ್ಷೆಯಂತೆ ಓದಿಸುತ್ತಾರೆ. ಇದು ಸರಿಯಲ್ಲ ಎಂದರು.ಕಠಿಣ ಪರಿಶ್ರಮ, ಸಿದ್ಧತೆ, ಗುಂಪು ಚಟುವಟಿಕೆ ಇವೆಲ್ಲವೂ ಉದ್ಯೋಗ ಪಡೆದುಕೊಳ್ಳುವ ಹಂತದಲ್ಲಿ ಹೆಚ್ಚು ಪಾತ್ರ ವಹಿಸುತ್ತವೆ. ಉದ್ಯೋಗ ಕೊಡುವ ಸಂಸ್ಥೆಗಳು ನಮ್ಮಿಂದ ಏನನ್ನು ನಿರೀಕ್ಷಿಸುತ್ತವೆ ಎನ್ನುವುದು ನಮಗೆ ತಿಳಿದಿರಬೇಕು ಎಂದು ಹೇಳಿದರು.

ಕಾರ್ಯಕ್ರಮ ಸಂಯೋಜಕ ಮಹೇಶ್ ಶೆಟ್ಟಿ, ಸಹ ಸಂಯೋಜಕಿ ಜಾಯ್ಲಿನ್ ವಿ. ಕಬ್ರಾಲ್, ಸೌಮ್ಯ ಉಪಸ್ಥಿತರಿದ್ದರು. ವಿಘ್ನೇಶ್ ನಾಯಕ್ ಸ್ವಾಗತಿಸಿದರು. ರೋಹಿತ್ ನಿರೂಪಿಸಿದರು. ವರುಣ್ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-28-1543537594

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.