ಕಾರ್ಕಳ: ಮಹಿಳೆಗೆ ಸಾಮಾಜಿಕ ಸ್ವಾತಂತ್ರ್ಯ, ನೈತಿಕ ಸ್ವಾತಂತ್ರ್ಯದ ಜೊತೆಗೆ ಆರ್ಥಿಕ ಸ್ವಾತಂತ್ರ್ಯವೂ ದೊರೆತರೆ ಮಾತ್ರ ಅವಳ ಸ್ಥಿತಿ ಸುಧಾರಿಸಿ ಆತ್ಮಗೌರವಕ್ಕೆ ಭೂಷಣವಾಗುತ್ತದೆ ಎಂದು ಸಾಹಿತಿ ಜ್ಯೋತಿ ಗುರುಪ್ರಸಾದ್ ಹೇಳಿದರು.

ನಗರದಲ್ಲಿ ಸುಮೇಧಾ ಫ್ಯಾಷನ್ ಸಂಸ್ಥೆಯ ವತಿಯಿಂದ ಪಿ.ಯು.ಸಿ ನಂತರದ ವಿದ್ಯಾರ್ಥಿನಿಯರಿಗಾಗಿ ಆಯೋಜಿಸಲಾದ ಉಚಿತ ಫ್ಯಾಷನ್ ಡಿಸೈನಿಂಗ್ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿ, ಮಹಿಳೆಯರಿಗೆ ಆತ್ಮಗೌರವ ಒದಗಿಸಲು ಹೊರಟಿರುವ ಸುಮೇಧ ಫ್ಯಾಷನ್ ಡಿಸೈನಿಂಗ್ ಸಂಸ್ಥೆಯ ಸಂಸ್ಥಾಪಕಿ ಸಾಧನಾ ಅಶ್ರೀತ್ ಅವರ ಕಾರ್ಯ ಸ್ತುತ್ಯಾರ್ಹ ಎಂದರು.

ಉಡುಗೆ ತೊಡುಗೆಯ ಫ್ಯಾಷನ್ ಉಡುವವರ ಆತ್ಮವಿಶ್ವಾಸ ಹೆಚ್ಚಿಸುವಂತಿರಬೇಕು. ಅಂಥ ಕೌಶಲವನ್ನು ಶ್ರದ್ಧೆ, ಪ್ರೀತಿಯಿಂದ ಕಲಿತು ಹೊಸತನದ ಫ್ಯಾಷನ್ ಮಾದರಿಗಳನ್ನು ಮಾರುಕಟ್ಟೆಗೆ ಒದಗಿಸುವ ಮೂಲಕ ಪ್ರಸಿದ್ಧಿ, ಆರ್ಥಿಕ ಸ್ವಾತಂತ್ರ್ಯವನ್ನು ಇಲ್ಲಿ ತರಬೇತಿ ಪಡೆವ ಹೆಣ್ಣು ಮಕ್ಕಳು ಗಳಿಸಬೇಕು. ಅಂತರಂಗದ ಸೌಂದರ್ಯದ ಮೂಲಕ ಬಹಿರಂಗದ ಸೌಂದರ್ಯ ಹೊಳೆಯುವಂಥ ಫ್ಯಾಸನ್ ವಿನ್ಯಾಸ ಕಲಿಯಬೇಕು ಎಂದರು.

ಭಿನ್ನ ಸಾಮರ್ಥ್ಯದ ವಿದ್ಯಾರ್ಥಿನಿ ಸೌಜನ್ಯಾ ಅವರು ವಿನ್ಯಾಸಗೊಳಿಸಿದ ಫ್ಯಾಷನ್ ಬಟ್ಟೆಗಳು, ಜ್ಯುವೆಲ್ಲರಿಗಳ ಪ್ರದರ್ಶನವನ್ನು ದಾನಿ, ಲೆಕ್ಕ ಪರಿಶೋಧಕ ಕಮಲಾಕ್ಷ ಕಾಮತ್ ಉದ್ಘಾಟಿಸಿದರು. ಅವರು ಮಾತನಾಡಿ, ವಿದ್ಯಾರ್ಥಿನಿಯರು ಕಲಿಕೆಯಲ್ಲಿ ಪ್ರೀತಿ, ಆತ್ಮವಿಶ್ವಾಸ, ಸಕರಾತ್ಮಕ ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ ಜೀವನದಲ್ಲಿ ಪರಿವರ್ತನೆ ಕಂಡುಕೊಳ್ಳಬೇಕು. ಈ ಕಾರ್ಯಾಗಾರದ ಪ್ರಯೋಜನ ಪಡೆದುಕೊಂಡು ಸ್ವಂತ ಉದ್ಯೋಗ ನಡೆಸಿ ಸ್ವಾವಲಂಬಿ ಬದುಕು ನಡೆಸಿ ಎಂದು ಅವರು ಹೇಳಿದರು.

ಸುಮೇಧಾ ಫ್ಯಾಷನ್ ಇನ್ಸ್ಟಿಟ್ಯೂಟ್ ಸಂಸ್ಥಾಪಕಿ ಸಾಧನಾ ಅಶ್ರೀತ್ ಪ್ರಾಸ್ತವಿಕವಾಗಿ ಮಾತನಾಡಿ, ಯುವತಿಯರಿಗೆ ಉಚಿತವಾಗಿ ಹೂಪ್ ಆರ್ಟ್, ಜ್ಯುವೆಲ್ಲರಿ ತಯಾರಿಕೆ, ಮೆಹೆಂದಿ, ಕ್ಲೇ ಆರ್ಟ್ ಸೇರಿದಂತೆ ಫ್ಯಾಷನ್ ಸಂಬಂಧಿಸಿದ ವಿಷಯಗಳನ್ನು ಕಲಿಸಿಕೊಡಲಾಗುವುದು ಎಂದರು.

ವಿಶೇಷ ಶಿಕ್ಷಕಿ ಸೌಜನ್ಯಾ ಭಾಗವಹಿಸಿದ್ದರು. ಸಂಜನಾ ನಿರೂಪಿಸಿದರು. ಶಿಕ್ಷಕಿ ಕಾವ್ಯಾ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-28-77040362

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.