ವೇಮಗಲ್: ಕರ್ನಾಟಕ ಅಂಚೆ ನೌಕರರ ಸಾಹಿತ್ಯ ಬಳಗವು ಅಜೀವ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ್ದು, ಆಸಕ್ತ ನೌಕರರಿಂದ ಅರ್ಜಿ ಆಹ್ವಾನಿಸಿದೆ.

ಸಾಹಿತ್ಯಾಸಕ್ತ ಅಂಚೆ ನೌಕರರನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ಅಜೀವ ಸದಸ್ಯತ್ವ ಅಭಿಯಾನ ಆರಂಭವಾಗಿದೆ. ಇಲಾಖೆಯ ನೌಕರರಿಗೆ ಸೃಜನಶೀಲ ಬರವಣಿಗೆ, ಕವನ ವಾಚನ ಹಾಗೂ ಸಾಹಿತ್ಯಿಕ ಚರ್ಚೆಗಳಲ್ಲಿ ತೊಡಗಿಸಿಕೊಳ್ಳಲು ಉತ್ತಮ ಅವಕಾಶವನ್ನು ಒದಗಿಸುತ್ತಿದೆ. ಕೇವಲ ಸೇವೆಯಲ್ಲಿರುವವರು ಮಾತ್ರವಲ್ಲದೆ, ಇಲಾಖೆಯಿಂದ ನಿವೃತ್ತರಾದ ಸಾಹಿತ್ಯ ಪ್ರೇಮಿಗಳು ಸಹ ಈ ಬಳಗದ ಸದಸ್ಯತ್ವ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಅಜೀವ ಸದಸ್ಯತ್ವ ಪಡೆಯುವ ನೌಕರರಿಗೆ ಅಂಚೆ ಸಾಹಿತ್ಯ ಸಮ್ಮೇಳನದ ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಅಧಿಕೃತ ಗುರುತಿನ ಚೀಟಿ ವಿತರಿಸಲಾಗುವುದು. ಬಳಗದ ವತಿಯಿಂದ ಪ್ರಕಟವಾಗುವ ಪುಸ್ತಕಗಳ ಮೇಲೆ ಶೇ 50 ರಷ್ಟು ರಿಯಾಯಿತಿ ನೀಡಲಾಗುವುದು. ಜೊತೆಗೆ ಬಳಗವು ಹೊರತರುವ ವಿಶೇಷಾಂಕ ಪುಸ್ತಕಗಳಲ್ಲಿ ಸದಸ್ಯರ ಕಥೆ, ಕವನ ಹಾಗೂ ಲೇಖನಗಳ ಪ್ರಕಟಣೆಗೆ ಮೊದಲ ಆದ್ಯತೆ ನೀಡಲಾಗುವುದು.

ಅರ್ಜಿ ಸಲ್ಲಿಸಲು ಹಾಗೂ ಸದಸ್ಯತ್ವ ಶುಲ್ಕ ಸೇರಿದಂತೆ ಹೆಚ್ಚಿನ ಮಾಹಿತಿಗಾಗಿ ಆಸಕ್ತರು ಕರ್ನಾಟಕ ಅಂಚೆ ನೌಕರರ ಸಾಹಿತ್ಯ ಬಳಗ, ಎಂ.ಎಂ.ಕಾಂಪ್ಲೆಕ್ಸ್, ವೇಮಗಲ್ ಟೌನ್, ಕೋಲಾರ ಜಿಲ್ಲಾ ಕಚೇರಿ ಅಥವಾ ಕರ್ನಾಟಕ ಅಂಚೆ ನೌಕರರ ಸಾಹಿತ್ಯ ಬಳಗ, C/o ಸುಮಂಗಲಿ ಸೇವಾಶ್ರಮ, ಆರ್.ಟಿ.ನಗರ, ಬೆಂಗಳೂರು ಇಲ್ಲಿನ ಕಚೇರಿಯನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ 99014 66369 ಸಂಪರ್ಕಿಸಿ ಎಂದು ಬಳಗದ ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-18-491667033

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.