ಕನಕಗಿರಿ: ಇಲ್ಲಿನ ಪಂಪಣ್ಣ ಶರಣಪ್ಪ ಸರ್ಕಾರಿ ಪದವಿ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಉದ್ಯೋಗ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದು ಕಾಲೇಜಿನ ಪ್ರಭಾರ ಪ್ರಾಂಶುಪಾಲ ಬಜರಂಗಬಲಿ ಹೇಳಿದರು.

ಕಾಲೇಜಿನ ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಕೋಶ, ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯೂಎಸಿ) ಹಾಗೂ ಕೊಪ್ಪಳ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಅವರು ಮಾತನಾಡಿ, ‘ಪೈಪೋಟಿ ಹೆಚ್ಚಿರುವ ಇಂದಿನ ದಿನಮಾನಗಳಲ್ಲಿ ಕುಟುಂಬಗಳನ್ನು ನಿರ್ವಹಿಸಲು ಗಂಡು ಮತ್ತು ಹೆಣ್ಣು ಇಬ್ಬರೂ ದುಡಿಯಬೇಕಾದ ಅನಿವಾರ್ಯ ಸನ್ನಿವೇಶಗಳು ಸೃಷ್ಟಿಯಾಗಿದೆ. ಆರ್ಥಿಕ ಸ್ವಾವಲಂಬನೆಗಾಗಿ ಪ್ರತಿಯೊಬ್ಬರಿಗೂ ದುಡಿಮೆ ಅನಿವಾರ್ಯವಾಗಿದೆ’ ಎಂದು ಹೇಳಿದರು.

‘ಲಕ್ಷಾಂತರ ರೂಪಾಯಿ ಶುಲ್ಕ ತುಂಬಿಸಿಕೊಳ್ಳುವ ಖಾಸಗಿ ಶಿಕ್ಷಣ ಸಂಸ್ಥೆಗಳು ಮಾತ್ರ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ನೇಮಕಾತಿ ಅವಕಾಶ ಒದಗಿಸುತ್ತಾರೆ. ಆದರೆ ಆರ್ಥಿಕ ವಾಗಿ ಹಿಂದುಳಿದಿರುವ, ಹೊರ ಮತ್ತು ಕಾರ್ಪೋರೇಟ್ ಜಗತ್ತಿನ ಪರಿಚಯ ವಿರದ ಗ್ರಾಮೀಣ ಅಭ್ಯರ್ಥಿಗಳು ಈ ಅವಕಾಶ ಮತ್ತು ಪೈಪೋಟಿಯಿಂದ ಹಿಂದೆ ಉಳಿದುಬಿಡುತ್ತಾರೆ. ಈ ವ್ಯತ್ಯಾಸವನ್ನು ಗಮನದಲ್ಲಿಟ್ಟುಕೊಂಡು ಸ್ಥಳೀಯರು ಹಾಗೂ ಮುಖ್ಯವಾಗಿ ಗ್ರಾಮೀಣ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಒದಗಿಸುವ ಉದ್ದೇಶದಿಂದ ಉದ್ಯೋಗ ಮೇಳ ಆಯೋಜಿಸಲಾಗಿದೆ’ ಎಂದು ತಿಳಿಸಿದರು.

ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಕೋಶದ ಸಂಯೋಜಕ ವೀರೇಶ ಕೆಂಗಲ್ ಮಾತನಾಡಿ, ‘ಶಿಕ್ಷಣದೊಂದಿಗೆ ಪ್ರಮಾಣಪತ್ರಗಳನ್ನು ನೀಡುವುದಷ್ಟೇ ಶಿಕ್ಷಣ ಸಂಸ್ಥೆಗಳ ಕೆಲಸ ಆಗಬಾರದು. ವಿದ್ಯೆಯೊಂದಿಗೆ ಜೀವನ ಕಟ್ಟಿಕೊಳ್ಳುವ ಮಾರ್ಗಗಳನ್ನು ಕಲ್ಪಿಸುವ ಕೆಲಸವೂ ಅವುಗಳಿಂದಾಗಬೇಕು’ ಎಂದು ಹೇಳಿದರು.

ಕೊಪ್ಪಳ, ಹುಬ್ಬಳ್ಳಿ, ಬೆಂಗಳೂರು ಸೇರಿದಂತೆ ರಾಜ್ಯದ ಇತರೆ ಭಾಗಗಳ 15ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸಿದ್ದವು.

ವಿವಿಧ ಘಟಕಗಳ ಸಂಯೋಜಕ ರಕ್ಷಿತ್.ಎ, ಲಲಿತಾ ಎನ್.ಕೆ., ಸರ್ವಮಂಗಳಮ್ಮ ಟಿ.ಆರ್., ಉಪನ್ಯಾಸಕರಾದ ಅಮರೇಶ್ ವಿ., ಜಿಲ್ಲಾ ಉದ್ಯೋಗ ಅಭಿವೃದ್ಧಿ ನಿರ್ವಾಹಕ ಹನುಮೇಶ ತೊಂಡಿಹಾಳ ಹಾಗೂ ವಿವಿಧ ಕಂಪನಿಗಳ ಪ್ರತಿನಿಧಿಗಳಾದ ರವಿಚಂದ್ರ, ಚನ್ನಬಸವ ಇದ್ದರು. ಯಲ್ಲಮ್ಮ ಪ್ರಾರ್ಥಿಸಿದರು. ಕಲ್ಯಾಣ ಹಾಗೂ ದುರ್ಗಾ ಸ್ವಾಗತಿಸಿದರು. ರಾಮಕುಮಾರ, ಚೈತ್ರಾ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-35-1909142247

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.