ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

KPSC ಗ್ರೂಪ್‌ ‘ಸಿ’ಯ ವಿವಿಧ ಹುದ್ದೆಗಳು: ಸಾಮಾನ್ಯ ಜ್ಞಾನ- ಮಾದರಿ ಪ್ರಶ್ನೋತ್ತರ

ಸಾಮಾನ್ಯ ಜ್ಞಾನ
Last Updated 15 ಜೂನ್ 2022, 20:30 IST
ಅಕ್ಷರ ಗಾತ್ರ

1) ಕೇಂದ್ರ ಸರ್ಕಾರದ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಬಿಡುಗಡೆ ಮಾಡಿರುವ 4ನೇ ರಾಜ್ಯಗಳ ಆಹಾರ ಭದ್ರತಾ ಸೂಚ್ಯಂಕ(4th State Food Safety Index)ದಲ್ಲಿ ಕರ್ನಾಟಕ ಯಾವ ಸ್ಥಾನ
ಪಡೆದಿದೆ?

ಎ) 6

ಬಿ) 9

ಸಿ) 12

ಡಿ) 15

ಉತ್ತರ: ಬಿ

2)ಇತ್ತೀಚಿಗೆ ಥಾಯ್ಲೆಂಡ್‌ ಗಲ್ಫ್‌ನಲ್ಲಿರುವ ರೀಮ್ ನೌಕಾಪಡೆಯ ನೆಲೆಯಲ್ಲಿ ಚೀನಾ 2 ನೇ ವಿದೇಶಿ ಸೇನಾ ನೆಲೆ ನಿರ್ಮಿಸುತ್ತಿದೆ. ಹಾಗಾದರೆ ಮೊದಲ ವಿದೇಶಿ ಸೇನಾ ನೆಲೆಯನ್ನು ಎಲ್ಲಿ ಆರಂಭ ಮಾಡಿತ್ತು?

ಎ) ಜೆಬೂಟಿ (Djibouti - ಪೂರ್ವ ಆಫ್ರಿಕ)

ಬಿ) ಶ್ರೀಲಂಕಾ

ಸಿ) ಮ್ಯಾನ್ಮಾರ್

ಡಿ) ಮೇಲಿನ ಯಾವುದೂ ಅಲ್ಲ

ಉತ್ತರ: ಎ

3) 2021ರಲ್ಲಿ ಭಾರತಕ್ಕೆ ಹರಿದು ಬಂದ ವಿದೇಶಿ ನೇರ ಬಂಡವಾಳ ಹೂಡಿಕೆ(ಎಫ್ ಡಿ ಐ) ಮೊತ್ತ ಕಡಿಮೆ ಆಗಿದ್ದರೂ ಭಾರತವು ಜಗತಿಕ ಮಟ್ಟದಲ್ಲಿ ಎಫ್‌ಡಿಐ ಆಕರ್ಷಿಸಿದ ದೇಶಗಳಲ್ಲಿ ಮೊದಲ ಹತ್ತು ಸ್ಥಾನದಲ್ಲಿದೆ. ಹಾಗಾದರೆ ನಿರ್ದಿಷ್ಟವಾಗಿ ಭಾರತ ಎಷ್ಟನೇ ಸ್ಥಾನದಲ್ಲಿದೆ?

ಎ) ಮೂರು

ಬಿ) ನಾಲ್ಕು

ಸಿ) ಏಳು

ಡಿ) ಒಂಬತ್ತು

ಉತ್ತರ: ಸಿ

4) ಭಾರತದಲ್ಲಿ ಮೊದಲ ಸೋಲಿಗಮಿ/ ಸ್ವಯಂ ವಿವಾಹ ಎಲ್ಲಿ ನಡೆಯಿತು?

ಎ) ವಡೋದರಾ (ಗುಜರಾತ್)

ಬಿ) ಲಖನೌ (ಉತ್ತರ ಪ್ರದೇಶ)

ಸಿ) ಪುಣೆ (ಮಹಾರಾಷ್ಟ್ರ)

ಡಿ) ಮೇಲಿನ ಎಲ್ಲಿಯೂ ಅಲ್ಲ

ಉತ್ತರ: ಎ

5) ಕರ್ನಾಟಕದಲ್ಲಿ ‘ಗಡಿನಾಡಿನ ಚೇತನ’ ಎಂಬ ಪ್ರಶಸ್ತಿಯನ್ನು `ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ’ ನೀಡಲು ನಿಶ್ಚಯಿಸಿದೆ. ಯಾರ ಜನ್ಮದಿನಾಚರಣೆ ಸಂದರ್ಭದಲ್ಲಿ ಅವರ ಸ್ಮರಣೆಗಾಗಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ?

ಎ) ಕಯ್ಯಾರ ಕಿಞ್ಞಣ್ಣ ರೈ

ಬಿ) ವಿವೇಕ ರೈ

ಸಿ) ಮಂಜೆ ಮಂಗೇಶ ಪೈ

ಡಿ) ಶಿವರಾಮ ಕಾರಂತ

ಉತ್ತರ: ಎ

6) ಕೆಳಗಿನ ಹೇಳಿಕೆಗಳನ್ನು ಗಮನಿಸಿ

1) ಆದಿ ಶಂಕರಾಚಾರ್ಯರ ಜನ್ಮಸ್ಥಳ ಕಾಲಡಿ ರಾಷ್ಟ್ರೀಯ ಸ್ಮಾರಕವಾಗಲಿದೆ ಎಂದು ರಾಷ್ಟ್ರೀಯ ಸ್ಮಾರಕಗಳ ಪ್ರಾಧಿಕಾರದ (National Monuments Authority)ಅಧ್ಯಕ್ಷ ತರುಣ ವಿಜಯ್ ತಿಳಿಸಿದ್ದಾರೆ.

2) ಕೇರಳದ ಎರ್ನಾಕುಲಂ ಜಿಲ್ಲೆಯ ಪೆರಿಯಾರ್ ನದಿಯ ದಡದಲ್ಲಿರುವ ಕಾಲಡಿ ಆದಿ ಶಂಕರಾಚಾರ್ಯರ ಜನ್ಮ ಸ್ಥಳ ಎಂದು ಗುರುತಿಸಲಾಗಿದೆ. ಪ್ರಸ್ತುತ ಕಾಲಡಿಯಲ್ಲಿ ಶಾರದಾ ದೇವಿ ಹಾಗೂ ದಕ್ಷಿಣಾಮೂರ್ತಿ ದೇವಾಲಯಗಳಿವೆ.

ಉತ್ತರ ಸಂಕೇತಗಳು

ಎ) 1ನೇ ಹೇಳಿಕೆ ಮಾತ್ರ ಸರಿಯಾಗಿದೆ

ಬಿ) 2ನೇ ಹೇಳಿಕೆ ಮಾತ್ರ ಸರಿಯಾಗಿದೆ

ಸಿ) ಯಾವ ಹೇಳಿಕೆಯೂ ಸರಿಯಾಗಿಲ್ಲ

ಡಿ) 1 ಮತ್ತು 2 ಎರಡೂ ಹೇಳಿಕೆಗಳು ಸರಿಯಾಗಿದ್ದಾವೆ

ಉತ್ತರ: ಡಿ

7) ಕೇಂದ್ರ ಆರೋಗ್ಯ ಸಚಿವಾಲಯ 1945ರ ಔಷಧ ಕಾಯ್ದೆಯ ತಿದ್ದುಪಡಿಗೆ ಸೂಚಿಸಿದೆ. ಆ ಪ್ರಕಾರ ಪ್ಯಾರಾಸಿಟಮಾಲ್‌, ಮೂಗಿನ ಡ್ರಾಪ್ಸ್, ಫಂಗಸ್ ತಡೆಯುವ ಆಂಟಿಬಯೊಟಿಕ್ಸ್ ಸೇರಿದಂತೆ ಎಷ್ಟು ಔಷಧಗಳನ್ನು ವೈದ್ಯರ ಚೀಟಿಯಿಲ್ಲದೇ ಮೆಡಿಕಲ್ ಅಂಗಡಿಯಿಂದ ಪಡೆಯಲು ಇತ್ತೀಚಿಗೆ ಅನುಮತಿ ನೀಡಿದೆ?

ಎ) 20

ಬಿ) 16

ಸಿ) 50

ಡಿ) 12

ಉತ್ತರ: ಬಿ

8) ಕೆಳಗಿನ ಹೇಳಿಕೆಗಳನ್ನು ಗಮನಿಸಿ

1) ಕೊಲಂಬಿಯಾ ವಿಶ್ವವಿದ್ಯಾಲಯದ ಪರಿಸರ ಕಾನೂನು ಮತ್ತು ನೀತಿ ಅಧ್ಯಯನ ಕೇಂದ್ರ ಮತ್ತು ಭೂವಿಜ್ಞಾನ ಮಾಹಿತಿ ಜಾಲ ಕೇಂದ್ರ ನಡೆಸಿದ ಈ ಸಾಲಿನ ಪರಿಸರ ಕಾರ್ಯ ದಕ್ಷತೆ ಸೂಚ್ಯಂಕದಲ್ಲಿ ಡೆನ್ಮಾರ್ಕ್ ಮೊದಲ ಸ್ಥಾನದಲ್ಲಿದ್ದರೆ ಭಾರತವು ಕೊನೆಯ ಸ್ಥಾನದಲ್ಲಿದೆ.

2) ಪರಿಸರ ಕಾರ್ಯ ದಕ್ಷತೆ ಸೂಚ್ಯಂಕದಲ್ಲಿ ಒಟ್ಟು 180 ದೇಶಗಳನ್ನು ಪರಿಗಣಿಸಿ ಅಧ್ಯಯನ ನಡೆಸಲಾಗಿತ್ತು, ಪ್ರತಿ ದೇಶಗಳ ಸುಸ್ಥಿರ ಅಭಿವೃದ್ದಿ ಮಾದರಿಗಳು, ಹಸಿರುಮನೆ ಅನಿಲ ಹೊರಸೂಸುವಿಕೆ ನಿಯಂತ್ರಣ ಕ್ರಮಗಳನ್ನು ಪರಿಶೀಲಿಸಿ ಸೂಚ್ಯಂಕ ತಯಾರಿಸಲಾಗಿದೆ.

ಉತ್ತರ ಸಂಕೇತಗಳು

ಎ) 1ನೇ ಹೇಳಿಕೆ ಮಾತ್ರ ಸರಿಯಾಗಿದೆ

ಬಿ) 2ನೇ ಹೇಳಿಕೆ ಮಾತ್ರ ಸರಿಯಾಗಿದೆ

ಸಿ) ಯಾವ ಹೇಳಿಕೆಯೂ ಸರಿಯಾಗಿಲ್ಲ

ಡಿ) 1 ಮತ್ತು 2 ಎರಡೂ ಹೇಳಿಕೆಗಳು ಸರಿಯಾಗಿವೆ.

ಉತ್ತರ: ಡಿ

9) 30ಕ್ಕೂ ಹೆಚ್ಚು ಕ್ಷೇತ್ರಗಳನ್ನು ಪ್ರತಿನಿಧಿಸುವ 70ಕ್ಕೂ ಹೆಚ್ಚು ಕಂಪನಿಗಳು ದೇಶದಾದ್ಯಂತ ಹೊಸ ಪ್ರಯೋಗ ನಡೆಸಲು ನಿಶ್ಚಯಿಸಿದ್ದು`ವಾರದಲ್ಲಿ ನಾಲ್ಕು ದಿನ ಮಾತ್ರ ಕೆಲಸ ಮಾಡಲು ಅವಕಾಶಕೊಟ್ಟಿವೆ’. ಹಾಗಾದರೆ ಈ ಘಟನೆ ಎಲ್ಲಿ ನಡೆದಿದೆ?

ಎ) ಅಮೆರಿಕ

ಬಿ) ಡೆನ್ಮಾರ್ಕ್

ಸಿ) ಬ್ರಿಟನ್‌

ಡಿ) ಫ್ರಾನ್ಸ್

ಉತ್ತರ: ಸಿ

ವೈಟ್‌ಹೌಸ್ ಏಕೆ ಬೆಳ್ಳಗಿದೆ?

ವೈಟ್‌ಹೌಸ್‌– ಇದು ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ. ವಾಷಿಂಗ್‌ಟನ್‌ನಲ್ಲಿದೆ. ಈ ಕಟ್ಟಡವನ್ನು ಕಟ್ಟಿದಾಗ ಇದು ಬೆಳ್ಳಗಿರಲಿಲ್ಲ. ಇದನ್ನು ವೈಟ್ ಹೌಸ್ ಎಂದು ಕರೆಯುತ್ತಿರಲಿಲ್ಲ.

ಈ ಕಟ್ಟಡದ ವಿನ್ಯಾಸವನ್ನು ಐರ‍್ಲೆಂಡ್‌ನ ಜೇಮ್ಸ್ ಹೋಬನ್(James Hoban) ಎಂಬ ಕಟ್ಟಡ ವಿನ್ಯಾಸಕಾರ ರಚಿಸಿದ್ದಾರೆ. 1792ರಲ್ಲಿ ಅಕ್ಟೋಬರ್ 13ರಂದು ಈ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಯಿತು. 1800ರಲ್ಲಿ ಕಟ್ಟಡ ನಿರ್ಮಾಣ ಪೂರ್ಣಗೊಂಡಿತು. ಈ ಕಟ್ಟಡವನ್ನು ಮೊದಲು ಬೂದು ಬಣ್ಣದ ಕಲ್ಲಿನಲ್ಲಿ ಕಟ್ಟಲಾಗಿತ್ತು. ಆಗಿನಿಂದಲೂ ಇದು ಅಮೆರಿಕ ಅಧ್ಯಕ್ಷರ ನಿವಾಸವಾಗಿದೆ. 1814 ರ ಆಗಸ್ಟ್ 24 ರಂದು, ಯುದ್ಧದಲ್ಲಿ ಬ್ರಿಟಿಷ್ ಸೈನಿಕರು ಈ ಕಟ್ಟಡವನ್ನು ಸುಟ್ಟು ಹಾಕಿದರು. ಈ ಕಟ್ಟಡದ ಸ್ವಲ್ಪ ಭಾಗ ಮಾತ್ರ ಹಾಗೆಯೇ ಉಳಿದಿತ್ತು. ಅನಂತರ ಈ ಕಟ್ಟಡವನ್ನು ಪುನರ್‌ನಿರ್ಮಿಸಲಾಯಿತು. 1817ರಲ್ಲಿ ಪುನರ್‌ನಿರ್ಮಾಣ ಕಾರ್ಯ ಪೂರ್ಣಗೊಂಡಿತು. ಬೆಂಕಿ ಹಾಗೂ ಮಸಿಯ ಕಲೆಗಳನ್ನು ತೆಗೆದುಹಾಕುವುದಕ್ಕಾಗಿ, ಈ ಕಟ್ಟಡದ ಗೋಡೆಗಳಿಗೆ ಬಿಳಿ ಬಣ್ಣವನ್ನು ಹಚ್ಚಲಾಯಿತು. ಆಗಿನಿಂದ ಈ ಕಟ್ಟಡಕ್ಕೆ ‘ವೈಟ್ ಹೌಸ್’ ಎಂದು ಹೆಸರು ಬಂತು. ಆದರೆ 1902ರ ವರೆಗೆ ಈ ಹೆಸರು ಅಧಿಕೃತವಾಗಿ ಮನ್ನಣೆ ಪಡೆದಿರಲಿಲ್ಲ. ಅಧ್ಯಕ್ಷ ಥಿಯೋಡರ್ ರೂಸ್‌ವೆಲ್ಟ್, ‘ವೈಟ್ ಹೌಸ್’ ಎಂಬ ಹೆಸರಿಗೆ ಅಧಿಕೃತವಾಗಿ ಅನುಮೋದನೆ ನೀಡಿದರು.

(ಮಾಹಿತಿ: Spardha Bharati UPSC ಯೂಟ್ಯೂಬ್ ಚಾನೆಲ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT