ಕೂಡಲಸಂಗಮ: ಯಾವುದೇ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಶೇ 100ರಷ್ಟು ಉದ್ಯೋಗದ ಭರವಸೆ ಕೊಡುವುದಿಲ್ಲ. ಕೂಡಲಸಂಗಮ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ಪ್ರವೇಶ ಪಡೆಯುವಾಗಲೇ ಶಿಕ್ಷಣ-ಉದ್ಯೋಗದ ಭರವಸೆ ನೀಡಿ, ಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕೂಡಲಸಂಗಮ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಪ್ರಾಚಾರ್ಯ ದೇವದಾಸ ನಾಯಕ ಹೇಳಿದರು.

ಕೂಡಲಸಂಗಮ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಈಚೆಗೆನಡೆದ 24ನೇ ಬ್ಯಾಚಿನ ಔದ್ಯೋಗಿಕ ತರಬೇತಿ ಪತ್ರಗಳ ವಿತರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಮೂರು ವರ್ಷ ಶಿಸ್ತಿನಿಂದ ತರಬೇತಿ ಪಡೆದಿದ್ದಿರಿ, ಒಂದು ವರ್ಷದ ಕಡ್ಡಾಯ ಔದ್ಯೋಗಿಕ ತರಬೇತಿಯನ್ನು ಪರಿಶ್ರಮದಿಂದ ಮುಗಿಸಿ, ಸುಂದರ ಬದುಕು ನಿರ್ಮಾಣವಾಗುವುದು. ಬದಲಾಗುವ ತಾಂತ್ರಿಕತೆಗೆ ಹೊಂದಿಕೊಳ್ಳುವ ಗುಣವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು.

ಪ್ಲೇಸ್ಮೆಂಟ್ ವಿಭಾಗದ ಮುಖ್ಯಸ್ಥ ಶಿವಕುಮಾರ ಕಂಚ್ಯಾಣಿ ಮಾತನಾಡಿ, ಒಂದು ವರ್ಷದ ಔದ್ಯೋಗಿಕ ತರಬೇತಿಗೆ ಆಯ್ಕೆಯಾದ ವಿದ್ಯಾರ್ಥಿಗಳು ಕೆಲಸಕ್ಕೆ ಸಿಮೀತವಾಗದೇ ಅಧ್ಯಯನದಲ್ಲಿ ತೊಡಗಬೇಕು. ತರಬೇತಿ ಅವಧಿಯಲ್ಲಿ ಕಂಪನಿಯ ನಿಯಮಗಳನ್ನು ಪಾಲಿಸಿ, ಸುರಕ್ಷತೆಯಿಂದ ಕೆಲಸ ನಿರ್ವಹಿಸಿ. ಈ ವರ್ಷ ನಮ್ಮ ತರಬೇತಿ ಕೇಂದ್ರದಿಂದ 74 ವಿದ್ಯಾರ್ಥಿಗಳು ದೇಶದ ವಿವಿಧ 20 ಕಂಪನಿಗಳಿಗೆ ತರಬೇತಿ ಪಡೆಯಲು ಆಯ್ಕೆಯಾಗಿದ್ದಾರೆ ಎಂದರು.

ಸಮಾರಂಭದಲ್ಲಿ ಉಪನ್ಯಾಸಕ ವೀರಣ್ಣ ಮನಗೊಂಡ, ಸವಿತಾ ಮ್ಯಾಗೇರಿ ಇದ್ದರು.

ಸಮಾರಂಭದಲ್ಲಿ 20 ಕಂಪನಿಗಳ ತರಬೇತಿಗೆ ಆಯ್ಕೆಯಾದ 74 ವಿದ್ಯಾರ್ಥಿಗಳಿಗೆ ಆದೇಶ ಪ್ರತಿ ವಿತರಿಸಿದರು. ಸಮಾರಂಭದಲ್ಲಿ ಎಲ್ಲ ವಿದ್ಯಾರ್ಥಿಗಳ ಪಾಲಕರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-19-1235317583

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.