LIC Jobs: ಯಾವುದೇ ಪದವಿ ಪಾಸಾದವರಿಗೆ ಎಲ್‌ಐಸಿಯಲ್ಲಿ ಎಒಒ ಹುದ್ದೆಗಳು

ಭಾರತೀಯ ಜೀವ ವಿಮಾ ನಿಗಮ ಸಂಸ್ಥೆಯಲ್ಲಿ (ಎಲ್‌ಐಸಿ) ಅಧಿಕಾರಿಯಾಗಿ ಸೇವೆ ಸಲ್ಲಿಸುವ ಅವಕಾಶ ಉದ್ಯೋಗಾಂಕ್ಷಿಗಳಿಗೆ ಇದೀಗ ಒದಗಿ ಬಂದಿದೆ.
ಹೌದು ಎಲ್‌ಐಸಿಯಲ್ಲಿ ಸಹಾಯಕ ಆಡಳಿತಾಧಿಕಾರಿ ಹುದ್ದೆಗಳ ಭರ್ತಿಗೆ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ.
ಬ್ಯಾಕ್‌ಲಾಗ್ ಹುದ್ದೆಗಳು ಸೇರಿದಂತೆ ದೇಶದಾದ್ಯಂತ ಒಟ್ಟು 300 ‘ಎಲ್‌ಐಸಿ ಸಹಾಯಕ ಆಡಳಿತಾಧಿಕಾರಿ (ಜನರಲಿಸ್ಟ್) 31ನೇ ಬ್ಯಾಚ್’ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.
ಜನವರಿ 15 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು ಜನವರಿ 31 ಕೊನೆ ದಿನವಾಗಿದೆ, ಅಂಗೀಕೃತ ಯಾವುದೇ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಡೆದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಎಸ್.ಸಿ, ಎಸ್.ಟಿ, ಯೋಜನಾ ನಿರಾಶ್ರಿತ ಅಭ್ಯರ್ಥಿಗಳಿಗೆ ₹85 ಮತ್ತು ಇತರೆ ಅಭ್ಯರ್ಥಿಗಳಿಗೆ ₹700 ಅರ್ಜಿ ಶುಲ್ಕವಿದೆ.
21 ವರ್ಷದಿಂದ 30 ವರ್ಷ ವಯೋಮಾನದ ಪುರುಷ ಮತ್ತು ಸ್ತ್ರೀ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಎಸ್‌ಸಿ, ಎಸ್‌ಟಿ, ಯೋಜನಾ ನಿರಾಶ್ರಿತ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇದೆ.
ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ| ಅರ್ಥಶಾಸ್ತ್ರ ಕ್ಷೇತ್ರದಲ್ಲಿ ಹಲವು ಅವಕಾಶ
ಈ ಹುದ್ದೆಗಳಿಗೆ ನೇಮಕವಾಗಿ ಪ್ರೊಬೇಷನರಿ ಅವಧಿ ಯಶಸ್ವಿಯಾಗಿ ಮುಗಿಸುವ ಅಭ್ಯರ್ಥಿಗೆ ಎಲ್ಲ ಕಡಿತವಾಗಿ ₹92ಸಾವಿರ ವರೆಗೆ ವೇತನ ಸಿಗಲಿದೆ.
ನೇಮಕಾತಿ ಪ್ರಕ್ರಿಯೆ ಹೇಗಿದೆ?
ಮೂರು ಹಂತಗಳಲ್ಲಿ ಈ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಮೊದಲು ಕಂಪ್ಯೂಟರ್ ಆಧರಿತ ಪರೀಕ್ಷೆ ಇರುತ್ತದೆ. ಇದರಲ್ಲಿ ಎರಡು ಭಾಗ ಇರುತ್ತವೆ 1ಪೂರ್ವಭಾವಿ ಪರೀಕ್ಷೆ 2ಮುಖ್ಯ ಪರೀಕ್ಷೆ.
ಪೂರ್ವಭಾವಿ, ಮುಖ್ಯಪರೀಕ್ಷೆ ಪಾಸಾದ ಅಭ್ಯರ್ಥಿಗಳನ್ನು 1:5 ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಿದ್ದಾರೆ. ಸಂದರ್ಶನ ಪಾಸಾದ ಅಭ್ಯರ್ಥಿಗಳು ವೈದ್ಯಕೀಯ ಪರೀಕ್ಷೆ ಪಾಸಾಗಬೇಕಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಹಾಗೂ ಆನ್‌ಲೈನ್ ಅರ್ಜಿ ಸಲ್ಲಿಸಲು www.licindia.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
Jobs: ಸಿಆರ್ಪಿಎಫ್ನಲ್ಲಿ 1,315 ಹೆಡ್ ಕಾನ್ಸ್ಟೇಬಲ್, 143 ಎಎಸ್ಐ ಹುದ್ದೆಗಳು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.