ಮಹಾಲಿಂಗಪುರ: ‘ಇಂದು ಉದ್ಯೋಗ ಹುಡುಕುವವರಿಗಿಂತ ಉದ್ಯೋಗ ನೀಡುವವರಾಗುವುದು ಮುಖ್ಯವಿದೆ. ಯುವಜನತೆ ಹೊಸ ಹೊಸ ಆಲೋಚನೆ ಬೆಳೆಸಿಕೊಂಡು, ಸ್ವಂತ ವ್ಯವಹಾರ ಆರಂಭಿಸುವ ಧೈರ್ಯ ಹೊಂದಬೇಕು’ ಎಂದು ಲೆಕ್ಕ ಪರಿಶೋಧಕ ಶಿವಪ್ಪ ನೇಸೂರ ಹೇಳಿದರು.

ಪಟ್ಟಣದ ಕೆಎಲ್ಇ ಸಂಸ್ಥೆಯ ಎಸ್ಸಿಪಿ ಪದವಿ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ವತಿಯಿಂದ ಗುರುವಾರ ಹಮ್ಮಿಕೊಂಡ ಉದ್ಯಮಶೀಲತೆ ಅಭಿವೃದ್ಧಿ ವಿಷಯ ಕುರಿತ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಉದ್ಯಮವು ಯುವಕರಲ್ಲಿ ನಾಯಕತ್ವ ಗುಣ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಸೃಜನಾತ್ಮಕತೆ ಹೆಚ್ಚಿಸುತ್ತದೆ. ಇದು ದೇಶದ ಆರ್ಥಿಕ ಬೆಳವಣಿಗೆಯಲ್ಲಿಯೂ ಮಹತ್ವದ ಪಾತ್ರ ವಹಿಸುತ್ತದೆ’ ಎಂದರು.

ಪ್ರಾಚಾರ್ಯ ಎನ್.ಬಿ.ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಉದ್ಯಮ ಮಾಡಲು ಇಂದಿನ ಯುವಜನ ಉದ್ಯಮಶೀಲತೆ ಕಡೆ ಹೆಚ್ಚು ಗಮನ ಹರಿಸಬೇಕು. ನಾವು ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು, ಡಿಜಿಟಲ್ ಜಗತ್ತಿನಲ್ಲಿ ಹೊಸ ಅವಕಾಶಗಳನ್ನು ಕಂಡು ಹಿಡಿಯಬಹುದು. ಸ್ಟಾರ್ಟ್ಅಪ್ ಸಂಸ್ಕೃತಿ ಇಂದು ವೇಗವಾಗಿ ಬೆಳೆಯುತ್ತಿದೆ. ಇದು ನಮ್ಮ ದೇಶದ ಭವಿಷ್ಯ ಬದಲಾಯಿಸುವ ಶಕ್ತಿ ಹೊಂದಿದೆ’ ಎಂದು ತಿಳಿಸಿದರು.

ಐಕ್ಯೂಎಸ್ಸಿ ಸಂಯೋಜಕಿ ಎಸ್.ಡಿ.ಸೋರಗಾಂವಿ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಆರ್.ಎಂ.ಕಾಕಡೆ, ಪಿ.ಟಿ.ಅಥಣಿ, ಪೂಜಾ ಮಾನಗಾಂವಿ, ಅಶ್ವಿನಿ ಲಟ್ಟಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-19-1307607239

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.