ಮಳವಳ್ಳಿ: ‘ಅಧಿಕಾರಿಗಳಿಗೆ ವೈಜ್ಞಾನಿಕ ವಿಚಾರ, ಕಾಯ್ದೆ, ನಿಯಮಗಳ ಜೊತೆಗೆ ಕೆಲಸದ ಕಾರ್ಯವೈಖರಿಯಲ್ಲಿನ ನಡವಳಿಕೆ ಮತ್ತು ಕಾರ್ಯದಕ್ಷತೆಯನ್ನು ತರಬೇತಿ ಕಾರ್ಯಾಗಾರ ಕಲಿಸುತ್ತದೆ’ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಸಿಬ್ಬಂದಿ ಮತ್ತು ಜಾಗೃತಿ) ನಿರ್ದೇಶಕಿ ಗಾಯತ್ರಿ ಹೇಳಿದರು.

ಪಟ್ಟಣದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪ್ರಾದೇಶಿಕ ತರಬೇತಿ ಕೇಂದ್ರದಲ್ಲಿ ಸೋಮವಾರದಿಂದ ಆರಂಭವಾದ ವೃತ್ತಿ ಪರಿಚಯ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಈಗಾಗಲೇ ರಾಜ್ಯದ ಎಲ್ಲ ರಾಜ್ಯ ರಸ್ತೆ ಸಾರಿಗೆ ನಿಗಮದ ತರಬೇತಿ ಕೇಂದ್ರಗಳನ್ನು ಉನ್ನತೀಕರಣದೊಂದಿಗೆ ಅಧಿಕಾರಿಗಳ ವೃತ್ತಿ ಕೌಶಲ ವೃದ್ಧಿಸಲು ಅಗತ್ಯ ಮಾಹಿತಿ ಮಾರ್ಗದರ್ಶನ ನೀಡಲು ಎಲ್ಲ ಸೌಲಭ್ಯ ಒದಗಿಸಲಾಗುತ್ತಿದೆ. ಹೀಗಾಗಿ ಸಾರಿಗೆ ನಿರೀಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ. ತರಬೇತಿಯಲ್ಲಿ ವೃತ್ತಿಗೆ ಸಂಭಂದಿಸಿದಂತೆ ಹತ್ತಾರು ವಿಷಯಗಳ ಬಗ್ಗೆ ಮಾಹಿತಿ ನೀಡುವುದರೊಂದಿಗೆ ತಮ್ಮಲ್ಲಿರುವ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಾರ್ಗದರ್ಶನ ನೀಡಲಾಗುವುದು’ ಎಂದು ಹೇಳಿದರು.

ಅಧಿಕಾರಿಗಳು ಈ ಕಾರ್ಯಾಗಾರದ ಮೂಲಕ ಕಾರ್ಯದಕ್ಷತೆಯನ್ನು ಹೆಚ್ಚಿಸಿಕೊಂಡು ವೃತ್ತಿ ಬದುಕಿನಲ್ಲಿ ಯಶಸ್ವಿಯಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಪ್ರಾದೇಶಿಕ ತರಬೇತಿ ಕೇಂದ್ರದ ಪ್ರಾಂಶುಪಾಲ ಜಗದೀಶ್ ಕುಮಾರ್ ಮಾತನಾಡಿ, ‘15 ದಿನಗಳ ತರಬೇತಿ ಕಾರ್ಯಾಗಾರದ ಮೂಲಕ ಅಧಿಕಾರಿಗಳಲ್ಲಿನ ವೃತ್ತಿ ಕೌಶಲವನ್ನು ಹೆಚ್ಚಿಸಲು ಮುಂದಾಗಿದ್ದೇವೆ. ಪ್ರತಿನಿತ್ಯ ನಿಗಮದ ನಾನಾ ವಿಷಯಗಳ ಕುರಿತು ತಜ್ಞರಿಂದ ತರಬೇತಿ ನಡೆಯಲಿದೆ’ ಎಂದು ಹೇಳಿದರು.

ಗ್ರಾಮಾಂತರ ಸಿಪಿಐ ಬಸವರಾಜು ಮಾತನಾಡಿ, ‘ರಾಜ್ಯದ ಸಾರಿಗೆ ಬಸ್ ನಿಗಮ ದೇಶದಲ್ಲೇ ಉತ್ತಮ ಹೆಸರು ಪಡೆದಿದ್ದು, ಈ ಕಾರ್ಯಾಗಾರದ ಮೂಲಕ ತರಬೇತಿ ನೀಡಿ ಮತ್ತಷ್ಟು ಶಕ್ತಿ ನೀಡುತ್ತಿರುವುದು ಶ್ಲಾಘನೀಯ’ ಎಂದು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-40-1981984880

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.