ಮಳವಳ್ಳಿ: ವೃತ್ತಿ ಕೌಶಲದೊಂದಿಗೆ ಹೊಸತನವನ್ನು ಅಳವಡಿಸಿಕೊಂಡರೆ ಕೆಲಸ ಸುಲಭವಾಗುತ್ತದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಿರ್ದೇಶಕಿ ಕೆ.ಎಂ. ಗಾಯಿತ್ರಿ ತಿಳಿಸಿದರು.

ಪಟ್ಟಣದ ಕೆಎಸ್ಆರ್ಟಿಸಿ ತರಬೇತಿ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ಅಂಕಿ–ಅಂಶ ಶಾಖೆಯ ಅಧಿಕಾರಿಗಳ ಹಾಗೂ ಸಿಬ್ಬಂದಿವರ್ಗದವರ ಪುನಶ್ಚೇತನ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕಾರ್ಯರೂಪವನ್ನು ಪರಿಚಯಿಸುವ ನಿಟ್ಟಿನಲ್ಲಿ ತರಬೇತಿ ನೀಡುವ ಮೂಲಕ ಕೆಲಸ ಕಾರ್ಯಗಳಿಗೆ ಅವರನ್ನು ಅಣಿಗೊಳಿಸಲು ಇಂಥ ಕಾರ್ಯಾಗಾರ ಸಹಕಾರಿಯಾಗಿದೆ. ಹೊಸದಾಗಿ ನೇಮಕಗೊಂಡವರಿಗೆ ಇದು ಅನುಕೂಲವಾಗುತ್ತದೆ. ಹೊಸದನ್ನು ಕಲಿತು ಹೊಸತನವನ್ನು ಅಳವಡಿಸಿಕೊಳ್ಳಲು ಮುಕ್ತ ಚರ್ಚೆಯ ಮೂಲಕ ಸರಿ ತಪ್ಪುಗಳನ್ನು ಕಂಡುಕೊಂಡು ಸುಲಭತೆಯೊಂದಿಗೆ ಅಭಿವೃದ್ಧಿಯನ್ನು ಸಾಧಿಸಬಹುದು’ ಎಂದು ಹೇಳಿದರು.

‘ವಿಚಾರಗಳು ವಿನಿಮಯವಾದಾಗ ಹೊಸ ಉತ್ಸಾಹದೊಂದಿಗೆ ನಿಮ್ಮ ಸಾಮರ್ಥ್ಯ ಹೆಚ್ಚಾಗಲಿದ್ದು, ಹೀಗಾಗಿ ಇಂಥ ಪುನಶ್ಚೇತನ ಕಾರ್ಯಕ್ರಮಗಳು ಅವಶ್ಯಕ. ಹಿಂದೆ ವಿರಳವಾಗಿದ್ದ ಕಾರ್ಯಾಗಾರ ಇದೀಗ ಅಂಕಿ–ಅಂಶಗಳಿಗೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಪ್ರತ್ಯೇಕವಾಗಿ ನಡೆಯುತ್ತಿದೆ. ಜೀವನದ ನಿರ್ವಹಣೆಯಲ್ಲಿ ಹೀಗೆ ಲೆಕ್ಕಾಚಾರ ಮುಖ್ಯವೂ ಹಾಗೆಯೇ ಕಚೇರಿಯ ಕೆಲಸ ಅಂಕಿಅಂಶಗಳಿಗೆ ಪ್ರಾಮುಖ್ಯತೆ ನೀಡಿದ್ದರೆ ವಾರ್ಷಿಕ ಕ್ರಿಯಾಯೋಜನೆ ತಯಾರಿಗೆ ಸಹಕಾರಿಯಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ನಿಗಮದಲ್ಲಿ ದೊಡ್ಡದಿಂದ ಸಣ್ಣದವರೆಗಿನ ಸಮಸ್ಯೆಗಳನ್ನು ನಿವಾರಣೆ ಮಾಡಲು ಅಂಕಿ–ಅಂಶಗಳಿದ್ದರೆ ಸಹಾಯವಾಗುತ್ತದೆ. ದಾಖಲೆಗಳೊಂದಿಗೆ ಕ್ರೋಡೀಕರಿಸಿದರೆ ಕೆಲಸದಲ್ಲಿ ಯಶಸ್ಸು ಸಾಧಿಸಬಹುದು’ ಎಂದು ಹೇಳಿದರು.

ಮುಖ್ಯಯೋಜನೆ ಮತ್ತು ಸಂಖ್ಯಾಧಿಕಾರಿ ವೀಣಾ ಪಿ.ದೇಸಾಯಿ ಮಾತನಾಡಿ, ‘ಪುನಶ್ಚೇತನ ಎಂದರೆ ವ್ಯಕ್ತಿ, ವ್ಯವಸ್ಥೆ, ಸಂಸ್ಥೆ ಅಥವಾ ಪರಿಸರವನ್ನು ಮತ್ತೆ ಚೇತರಿಸಿಕೊಳ್ಳುವಂತೆ ಮಾಡುವ ಪ್ರಕ್ರಿಯೆವಾಗಿದೆ. ನಮ್ಮ ಇಲಾಖೆಯಲ್ಲಿ ಕೆಲಸ ಮಾಡುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಹೊಸ ಚೈತನ್ಯ ತುಂಬುವ ನಿಟ್ಟಿನಲ್ಲಿ ಇದನ್ನು ಆಯೋಜನೆ ಮಾಡಲಾಗುತ್ತಿದೆ’ ಎಂದು ಹೇಳಿದರು.

ಮಂಡ್ಯ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಚನ್ನಬಸವರಾಜು ಹಾಗೂ ಅಧ್ಯಕ್ಷತೆ ವಹಿಸಿ ಕೇಂದ್ರದ ಪ್ರಾಂಶುಪಾಲ ಜಗದೀಶ್ ಕುಮಾರ್ ಮಾತನಾಡಿದರು.

17 ವಿಭಾಗಗಳ 70ಕ್ಕೂ ಅಧಿಕ ಅಧಿಕಾರಿಗಳ ಹಾಗೂ ಸಿಬ್ಬಂದಿ ಕಾರ್ಯಾಗಾರದಲ್ಲಿ ಭಾಗಿಯಾಗಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-40-1866082968

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.