ಮಂಗಳೂರು: ಸಾಂಪ್ರದಾಯಿಕ ಪದವಿ ಶಿಕ್ಷಣದೊಂದಿಗೆ ಉದ್ಯೋಗಕ್ಕೆ ಪೂರಕವಾದ ತರಬೇತಿ ಪಡೆಯಬಹುದಾದ ಕೋರ್ಸ್ಗಳು ನಗರದ ಬಲ್ಮಠ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ರಥಬೀದಿಯ ಡಾ. ಪಿ. ದಯಾನಂದ ಪೈ– ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇವೆ.

ಕೌಶಲಾಧಾರಿತ ಶಿಕ್ಷಣ ನೀಡುವುದರೊಂದಿಗೆ ಪದವಿ ಪೂರ್ಣಗೊಳಿಸುವ ಹೊತ್ತಿಗೆ ವಿದ್ಯಾರ್ಥಿಗಳನ್ನು ಉದ್ಯೋಗಿಗಳಾಗಿ ರೂಪಿಸುವ ಉದ್ದೇಶದಿಂದ ಅಪ್ರೆಂಟಿಸ್ಷಿಪ್ ಎಂಬೆಡೆಡ್ ಡಿಗ್ರಿ ಪ್ರೋಗ್ರಾಂ (ಎಇಡಿಪಿ) ಅನ್ನು ರಾಜ್ಯ ಉನ್ನತ ಶಿಕ್ಷಣ ಇಲಾಖೆ 2024–25ನೇ ಸಾಲಿನಲ್ಲಿ ಅನುಷ್ಠಾನಗೊಳಿಸಿದೆ. ರಥಬೀದಿ ಕಾಲೇಜಿನಲ್ಲಿ ಬಿ.ಕಾಂ ಇನ್ ಬ್ಯಾಂಕಿಂಗ್, ಬಿ.ಕಾಂ ಇನ್ ಫೈನಾನ್ಸ್, ಬಿ.ಕಾಂ ಇನ್ ಇನ್ಶುರೆನ್ಸ್ ಈ ಮೂರು ವಿಷಯಗಳಲ್ಲಿ ಎಇಡಿಪಿ ಇದ್ದರೆ, ಬಲ್ಮಠ ಮಹಿಳಾ ಕಾಲೇಜಿನಲ್ಲಿ ಬಿ.ಕಾಂ.ನೊಂದಿಗೆ ರಿಟೇಲ್ ಮ್ಯಾನೇಜ್ಮೆಂಟ್ ಕೋರ್ಸ್ ಅಧ್ಯಯನ ಮಾಡಬಹುದು. ಈ ಎರಡೂ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ಜೂನ್ವರೆಗೆ ಪ್ರವೇಶಕ್ಕೆ ಅವಕಾಶವಿದೆ.

ಪದವಿಯ ಮೊದಲ ನಾಲ್ಕು ಸೆಮಿಸ್ಟರ್ ಕಾಲೇಜಿನಲ್ಲಿ ಕಲಿಕೆ, 5 ಮತ್ತು 6ನೇ ಸೆಮಿಸ್ಟರ್ನಲ್ಲಿ ಕಂಪನಿಗಳಲ್ಲಿ ಅಪ್ರೆಂಟಿಸ್ಷಿಪ್ ಮಾಡುವ ಅವಕಾಶ ದೊರೆಯುತ್ತದೆ. ಆನ್ಲೈನ್ ಮೂಲಕ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡರೆ, ವಿದ್ಯಾರ್ಥಿಗಳು ಮತ್ತು ಕಂಪನಿಯ ನಡುವೆ ಕೊಂಡಿಯಾಗಿ ಸರ್ಕಾರದ ಇಲಾಖೆಗಳು ನೆರವಾಗುತ್ತವೆ. ಅಪ್ರೆಂಟಿಸ್ಷಿಪ್ನಲ್ಲಿ ಉತ್ತಮ ಪ್ರತಿಭೆ ತೋರುವವರಿಗೆ ಅದೇ ಕಂಪನಿಯಲ್ಲಿ ಉದ್ಯೋಗ ನೇಮಕಾತಿ ಪತ್ರ ಪಡೆಯಬಹುದಾದ ಅವಕಾಶಗಳು ಇರುತ್ತವೆ. ಅಪ್ರೆಂಟಿಸ್ಷಿಪ್ ವೇಳೆ ಶಿಷ್ಯವೇತನವೂ ದೊರೆಯುವುದರಿಂದ ವಿದ್ಯಾರ್ಥಿಗಳು ಸ್ವಾವಲಂಬಿಗಳಾಗಿ ಶಿಕ್ಷಣ ಪಡೆಯಬಹುದು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-29-1883310024

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.