ಮಂಗಳೂರು: ವೃತ್ತಿಪರ ಡಿಪ್ಲೊಮಾ ಸಿವಿಲ್ ಎಂಜಿನಿಯರ್ಗಳು 100 ಚ.ಮೀ ವಿಸ್ತೀರ್ಣದ ನಿವೇಶನ ಹಾಗೂ ನೆಲ ಮತ್ತು ಮೂರು ಮಹಡಿಗೆ ಸೀಮಿತಗೊಳಿಸಿ ಮೇಲ್ವಿಚಾರಣೆ ನಡೆಸಬಹುದು ಎಂಬ ಆದೇಶಕ್ಕೆ ಸರ್ಕಾರ ತಿದ್ದುಪಡಿ ಮಾಡಿದೆ. 10 ವರ್ಷಕ್ಕಿಂತ ಹೆಚ್ಚಿನ ಅನುಭವ ಹೊಂದಿರುವ ಡಿಪ್ಲೊಮಾ ಸಿವಿಲ್ ಎಂಜಿನಿಯರ್ಗಳು ಇನ್ನು ವಿಸ್ತೀರ್ಣ ಮತ್ತು ಎತ್ತರದ ನಿರ್ಬಂಧವಿಲ್ಲದೇ ಎಲ್ಲ ರೀತಿಯ ಕಟ್ಟಡ ನಿರ್ಮಾಣದ ಪರವಾನಗಿ ಪಡೆದು ಮೇಲ್ವಿಚಾರಣೆ ನಡೆಸಲು ಸರ್ಕಾರ ಅನುವು ಮಾಡಿ ಕೊಟ್ಟಿದೆ ಎಂದು ಎಂಸಿಸಿ ರಿಜಿಸ್ಟರ್ಡ್ ಡಿಪ್ಲೊಮಾ ಸಿವಿಲ್ ಎಂಜಿನಿಯರ್ಸ್ ಸಂಸ್ಥೆ ತಿಳಿಸಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾಹಿತಿ ನೀಡಿದ ಸಂಘದ ಸಂಚಾಲಕ ಜಿ.ಯೋಗೀಶ್ ಪೈ, ‘ಕೇಂದ್ರ ಸರ್ಕಾರದ ಮಾದರಿ ಕಟ್ಟಡ ನಿರ್ಮಾಣ ಉಪವಿಧಿಯನ್ನು ಸೂಕ್ತ ಮಾರ್ಪಾಡುಗಳೊಂದಿಗೆ ಅಳವಡಿಸಿಕೊಳ್ಳುವಂತೆ ಎಲ್ಲ ರಾಜ್ಯಗಳಿಗೆ 2016ರಲ್ಲಿ ಸುತ್ತೋಲೆ ಹೊರಡಿಸಿತ್ತು. ಅದರ ಅನ್ವಯ ರಾಜ್ಯ ಸರ್ಕಾರ 2017ರಲ್ಲಿ ಮಾದರಿ ಕಟ್ಟಡ ನಿರ್ಮಾಣ ಉಪವಿಧಿಯ ಅಧಿಸೂಚನೆ ಪ್ರಕಟಿಸಿತು. ಅದರ ಪ್ರಕಾರ ವೃತ್ತಿಪರ ಡಿಪ್ಲೊಮಾ ಸಿವಿಲ್ ಎಂಜಿನಿಯರ್ಗಳು 100 ಚ.ಮೀ ವಿಸ್ತೀರ್ಣದ ನಿವೇಶನ ಹಾಗೂ ನೆಲ ಮತ್ತು ಮೂರು ಮಹಡಿಗೆ ಸೀಮಿತವಾಗಿ ಮೇಲ್ವಿಚಾರಣೆಗೆ ಅವಕಾಶವಿತ್ತು. ಆದರೆ ಮಹಾರಾಷ್ಟ್ರ ಮತ್ತು ಗುಜರಾತ್ಗಳಲ್ಲಿ ಈ ನಿರ್ಬಂಧ ಕೈಬಿಡಲಾಗಿತ್ತು’ ಎಂದರು.

‘ಮಂಗಳೂರು ಮಹಾನಗರ ಪಾಲಿಕೆಯ ಕಟ್ಟಡ ಉಪವಿಧಿಗಳು– 2025ರ ಅಂತಿಮ ಅಧಿಸೂಚನೆ ಪ್ರಕಟವಾದಾಗ ವೃತ್ತಿಪರರನ್ನು ಗುರುತಿಸುವಾಗ ಡಿಪ್ಲೊಮಾ ಸಿವಿಲ್ ಎಂಜಿನಿಯರ್ಗಳಿಗೆ ಎರಡೂವರೆ ಸೆಂಟ್ಸ್ಗಿಂತ ಕಡಿಮೆ ವಿಸ್ತೀರ್ಣದ ಜಾಗದಲ್ಲಿ ನಿರ್ಮಾಣವಾಗುವ ಕಟ್ಟಡ ಮೇಲುಸ್ತುವಾರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಎಂಜಿನಿಯರ್ ಬದಲು ಸೂಪರ್ವೈಸರ್ ಎಂಬ ಪದನಾಮ ನೀಡಿಲಾಗಿತ್ತು. ಇದಕ್ಕೆ ಆಕ್ಷೇಪಣೆ ಸಲ್ಲಿಸಿ, ಆದೇಶ ಮಾರ್ಪಾಡು ಮಾಡಿಸುವಲ್ಲಿ ಸಫಲರಾಗಿದ್ದೇವೆ. ವಿಧಾನ ಸಬಾಧ್ಯಕ್ಷ ಯು.ಟಿ.ಖಾದರ್ ಹಾಗೂ ಶಾಸಕ ಡಿ.ವೇದವ್ಯಾಸ ಕಾಮತ್ ಸಹಕರಿಸಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸಲು ಇದೇ 27ರಂದು ಸಂಜೆ 5.30ರಿಂದ ಪುರಭವನದಲ್ಲಿ ಸಮಾರಂಭ ಹಮ್ಮಿಕೊಂಡಿದ್ದೇವೆ’ ಎಂದರು.

ಸಂಸ್ಥೆಯ ಸಹ ಸಂಚಾಲಕರಾದ ಧೀರಜ್, ಮಹಮ್ಮದ್ ಇಕ್ಬಾಲ್, ರವಿಶಂಕರ್ ಎ.ಎನ್., ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ನ ಪ್ರೇಮಾನಂದ ಸಾಲ್ಯಾನ್, ಭರತ್ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-29-1667992236

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.