ಮಂಗಳೂರು: ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ವಿಆರ್ಡಿಎಫ್) ಹಾಗೂ ಮಣಿಪಾಲದ ಭಾರತ್ ವಿಕಾಸ ಟ್ರಸ್ಟ್ ಆಶ್ರಯದಲ್ಲಿ ಬ್ಯಾಂಕ್ ಆಫ್ ಬರೋಡ (ಬಿಒಬಿ) ಪ್ರಾಯೋಜಕ ತ್ವದಲ್ಲಿ ಇಲ್ಲಿನ ಲಯನ್ಸ್ ಸೇವಾಮಂದಿ ರದಲ್ಲಿ ಈಚೆಗೆ ಮಹಿಳಾ ಸ್ವ ಉದ್ಯೋ ಗಿಗಳಿಗೆ ‘ಸ್ವಾವಲಂಬಿ’ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಸಮಾವೇಶವನ್ನು ಉದ್ಘಾಟಿಸಿದ ಬ್ಯಾಂಕ್ ಆಫ್ ಬರೋಡದ ವಲಯ ಮುಖ್ಯಸ್ಥ ರಾಜೇಶ್ ಖನ್ನ ಮಾತನಾಡಿ, ‘ವಿಜಯ ಗ್ರಾಮೀಣಭಿವೃದ್ಧಿ ಪ್ರತಿಷ್ಠಾನದಿಂದ ತರಬೇತಿ ಪಡೆದ ಉದ್ಯೋಗಕಾಕಾಂಕ್ಷಿ ಮಹಿಳೆಯರಿಗೆ ಅಗತ್ಯ ಆರ್ಥಿಕ ಸಹಾಯ ನೀಡುವಂತೆ ಬ್ಯಾಂಕ್ ಶಾಖೆಗಳಿಗೆ ಸೂಚಿಸಲಾಗಿದೆ. ಪ್ರತಿಷ್ಠಾನದ ವ್ಯಾಪ್ತಿಯನ್ನು ಶಿವಮೊಗ್ಗ ಹಾಗೂ ಹಾಸನ ಜಿಲ್ಲೆಗಳಿಗೂ ವಿಸ್ತರಿಸುವ ಬಗ್ಗೆ ಚಿಂತಿಸಲಾಗುತ್ತಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಆರ್ಡಿಎಫ್ ಕಾರ್ಯದರ್ಶಿ ರಾಜೇಂದ್ರ ರೈ ಅವರು, ‘ನಮ್ಮ ಕಾರ್ಯಕ್ರಮಗಳನ್ನು ತರಬೇತಿಗೆ ಸೀಮಿತಗೊಳಿಸದೆ, ಆದಾಯ ತರುವ ನಿಟ್ಟಿನಲ್ಲಿ ನೆರವು ಒದಗಿಸಲಾಗುವುದು’ ಎಂದರು.

ಮುಖ್ಯ ಅತಿಥಿಯಾಗಿದ್ದ ಬ್ಯಾಂಕ್ ಆಫ್ ಬರೋಡದ ಉಪಮಹಾಪ್ರಬಂಧಕ ರಾಜೇಶ್ ಶರ್ಮ, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸ್ವಉದ್ಯೋಗ ಕೈಗೊಳ್ಳಬೇಕು ಎಂದು ಕರೆ ನೀಡಿದರು. ವಿಜಯ ಕುಮಾರ್ ಅವರು ಸ್ವಉದ್ಯೋಗ ಕೈಗೊಳ್ಳುವ ಮಹಿಳೆಯರಿಗೆ ಸರ್ಕಾರದಿಂದ ಲಭ್ಯವಿರುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಪ್ರತಿಷ್ಠಾನದ ಆಡಳಿತ ಮಂಡಳಿ ಸದಸ್ಯೆ ಗಿರಿಜಾತೆ ಭಂಡಾರಿ ಉಪಸ್ಥಿತರಿದ್ದರು.

ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನವು ಕೈಗೊಂಡ ಸುಮಾರು 200 ಕಾರ್ಯಕ್ರಮಗಳಲ್ಲಿ ತರಬೇತಿ ಪಡೆದ ಮಹಿಳೆಯರಿಗೆ ಮಾರ್ಗದರ್ಶನ ಹಾಗೂ ತಮ್ಮ ಉತ್ಪನ್ನಗಳ ಮಾರಾಟಕ್ಕೆ ವೇದಿಕೆ ಕಲ್ಪಿಸಲಾಯಿತು. ಮಂಗಳೂರು ಮತ್ತು ಸುತ್ತಮುತ್ತಲಿನ ಗ್ರಾಮಗಳ ಸುಮಾರು 250 ಮಹಿಳೆಯರು ಪಾಲ್ಗೊಂಡಿದ್ದರು.

ಅದ್ಯಾರು ಗ್ರಾಮ ಸಮಿತಿಯ ಚಂದ್ರಿಕಾ ನಿರೂಪಿಸಿದರು. ಭಾರತ್ ವಿಕಾಸ್ ಟ್ರಸ್ಟಿನ ಜೀವನ್ ಕೊಲ್ಯ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-29-1515084120

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.