ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Jobs: ಸಿಎಪಿಎಫ್‌ನಲ್ಲಿ ಮೆಡಿಕಲ್ ಆಫೀಸರ್ಸ್‌ ಹುದ್ದೆಗಳು

ಅಕ್ಷರ ಗಾತ್ರ

ಕೇಂದ್ರ ಗೃಹ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯಲ್ಲಿ (CAPF) ಅಂದರೆ ಸಿಆರ್‌ಪಿಎಫ್‌, ಬಿಎಸ್‌ಎಫ್‌, ಐಟಿಬಿಪಿ, ಎಸ್‌ಎಸ್‌ಬಿ, ಅಸ್ಸಾಂ ರೈಫಲ್ಸ್‌ ನಲ್ಲಿ ‘ಗ್ರೂಪ್ ಎ’ ವೃಂದದ ಮೆಡಿಕಲ್ ಆಫೀಸರ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಅಧಿಸೂಚನೆ ಹೊರಡಿಸಲಾಗಿದೆ.

ಒಟ್ಟು 297 ಮೆಡಿಕಲ್ ಆಫೀಸರ್ಸ್‌ ಹುದ್ದೆಗಳನ್ನು (ಪುರುಷ ಮತ್ತು ಮಹಿಳೆ) ಇಂಡೊ ಟಿಬೆಟಿಯನ್ ಬಾರ್ಡರ್ ಪೊಲೀಸ್ ಪೋರ್ಸ್ (ITBP) ಘಟಕದಿಂದ ನೇಮಕ ಮಾಡಿಕೊಳ್ಳಲಾಗುತ್ತಿದೆ. ಫೆಬ್ರವರಿ 15 ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭವಾಗಲಿದ್ದು ಮಾರ್ಚ್ 16 ಕೊನೆಯ ದಿನವಾಗಿದೆ. www.recruitment.itbpolice.nic.in ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆ ಶುಲ್ಕ ₹400. ಮಹಿಳೆ, ಎಸ್‌ಸಿ/ಎಸ್‌ಟಿ ಒಬಿಸಿ ಅಭ್ಯರ್ಥಿಗಳಿಗೆ ಶುಲ್ಕದಲ್ಲಿ ವಿನಾಯಿತಿ ಇದೆ.

ಹುದ್ದೆಗಳ ವರ್ಗೀಕರಣ, ವೇತನ

l ಸೂಪರ್ ಸ್ಪೆಷಲಿಸ್ಟ್‌ ಮೆಡಿಕಲ್ ಆಫೀಸರ್ಸ್ 5 ಹುದ್ದೆಗಳು, ಸೆಕೆಂಡ್ ಇನ್ ಕಮಾಂಡ್ ಶ್ರೇಣಿ, ವೇತನ ₹2.9 ಲಕ್ಷ

l ಸ್ಪೆಷಲಿಸ್ಟ್‌ ಮೆಡಿಕಲ್ ಆಫೀಸರ್ಸ್ 185 ಹುದ್ದೆಗಳು, ಡೆಪ್ಯೂಟಿ ಕಮಾಂಡ್ ಶ್ರೇಣಿ, ವೇತನ ₹2.8 ಲಕ್ಷ

l ಮೆಡಿಕಲ್ ಆಫೀಸರ್ಸ್ 107 ಹುದ್ದೆಗಳು, ಅಸಿಸ್ಟಂಟ್ ಕಮಾಂಡಂಟ್ ಶ್ರೇಣಿ, ವೇತನ ₹1.77 ಲಕ್ಷ

ವಿದ್ಯಾರ್ಹತೆ

ಮಾನ್ಯತೆ ಪಡೆದ ವೈದ್ಯಕೀಯ ವಿಶ್ವವಿದ್ಯಾಲಯದಿಂದ ಎಂಬಿಬಿಎಸ್‌ ಪದವಿ ಅಥವಾ ತತ್ಸಮಾನ ಪದವಿ ಪಡೆದಿರಬೇಕು. ಯಾವುದೇ ಸ್ಟೇಟ್ ಮೆಡಿಕಲ್ ರಿಜಿಸ್ಟರ್‌ನಲ್ಲಿ ನೋಂದಣಿಯಾಗಿರಬೇಕು. ಕಡ್ಡಾಯವಾಗಿ ಇಂಟರ್ನ್‌ಷಿಪ್‌ ಮುಗಿಸಿರಬೇಕು. ಜೊತೆಗೆ, ಆಯಾ ವಿಭಾಗದ ಹುದ್ದೆಗಳಿಗೆ ಅನುಗುಣವಾಗಿ ತಜ್ಞತೆಗೆ ಸಂಬಂಧಿಸಿದ ಪದವಿ, ಕೋರ್ಸ್‌ಗಳನ್ನು ಪೂರ್ಣಗೊಳಿಸಿರ
ಬೇಕು. ವಿದ್ಯಾರ್ಹತೆ ಕುರಿತ ಹೆಚ್ಚಿನ ವಿವರಕ್ಕೆ ಅಧಿಸೂಚನೆಯನ್ನು ನೋಡಬಹುದು.

ವಯೋಮಿತಿ

ಸೂಪರ್ ಸ್ಪೆಷಲಿಸ್ಟ್ ಮೆಡಿಕಲ್ ಆಫೀಸರ್ಸ್ ಹುದ್ದೆಗಳಿಗೆ 50 ವರ್ಷ ಮೀರಿರಬಾರದು, ಸ್ಪೆಷಲಿಸ್ಟ್ ಮೆಡಿಕಲ್ ಆಫೀಸರ್ಸ್ ಹುದ್ದೆಗೆ 40 ವರ್ಷ ಮತ್ತು ಮೆಡಿಕಲ್ ಆಫೀಸರ್ಸ್ ಹುದ್ದೆಗಳಿಗೆ 30 ವರ್ಷ ಮೀರಿರಬಾರದು.

ನೇಮಕಾತಿ ವಿಧಾನ

ಈ ನೇಮಕಾತಿ ವಿಧಾನವು ನಾಲ್ಕು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ದಾಖಲಾತಿ ಪರಿಶೀಲನೆ ನಡೆಲಿದೆ. ನಂತರ ಸಂದರ್ಶನವಿರಲಿದೆ. ಸಂದರ್ಶನ ಪಾಸಾದ ಅಭ್ಯರ್ಥಿಗಳಿಗೆ ದೈಹಿಕ ಸಹಿಷ್ಣುತೆ ಹಾಗೂ ದೇಹ ದಾರ್ಢ್ಯತ್ಯೆ ಪರೀಕ್ಷೆ ಇರಲಿದೆ. ಬಳಿಕ ಮೆಡಿಕಲ್ ಟೆಸ್ಟ್ ಇರಲಿದೆ. ಅಭ್ಯರ್ಥಿಗಳು ದೈಹಿಕ ಹಾಗೂ ಮೆಡಿಕಲ್ ಪರೀಕ್ಷೆಗಳ ಅರ್ಹತಾ ಮಾನದಂಡಗಳಿಗೆ ಅಧಿಸೂಚನೆ ಪರಿಶೀಲಿಸಬೇಕು

ಈ ನಾಲ್ಕು ಹಂತಗಳಲ್ಲಿ ಯಶಸ್ವಿಯಾಗುವ ಅಭ್ಯರ್ಥಿಗಳು 2 ವರ್ಷ ಪ್ರೊಬೆಷನರಿ ಅವಧಿ ಪೂರ್ಣಗೊಳಿಸಬೇಕು. ಅಲ್ಲದೇ ಸಿಎಪಿಎಫ್‌ನ ಯಾವುದೇ ವಿಭಾಗಗಳಲ್ಲಿ, ದೇಶದ ಯಾವುದೇ ವಿಭಾಗದಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಅಲ್ಲದೇ ಸಂದರ್ಭಕ್ಕನುಗುಣವಾಗಿ ವಿದೇಶಗಳಲ್ಲೂ ಕಾರ್ಯನಿರ್ವಹಿಸಬೇಕಾಗುತ್ತದೆ.

ಇನ್ನೊಂದು ಅಂಶವೆಂದರೆ ಅಭ್ಯರ್ಥಿಗಳು ತಮಗೆ ಬೇಕಾದ ಪಡೆಯನ್ನು ಅಂದರೆ CRPF, BSF, ITBP, SSB ಮತ್ತು Assam Rifles ಆಯ್ಕೆ ಮಾಡಿಕೊಳ್ಳಲು ಅವಕಾಶ ಇದೆ. ಸೂಪರ್ ಸ್ಪೆಷಲಿಸ್ಟ್ ಮೆಡಿಕಲ್ ಆಫೀಸರ್ಸ್ ಹುದ್ದೆಗಳು ಐಟಿಬಿಪಿಯಲ್ಲಿ ಮಾತ್ರ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT