ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಆರ್‌ಪಿ, ಐಆರ್‌ಬಿ, ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಮಾದರಿ ಪ್ರಶ್ನೋತ್ತರ

Last Updated 2 ಮಾರ್ಚ್ 2022, 12:29 IST
ಅಕ್ಷರ ಗಾತ್ರ

ಭಾಗ – 11

1) ಉಕ್ರೇನ್ ದೇಶದ ಮೇಲೆ ರಷ್ಯಾ ದಾಳಿ ಮಾಡಿದೆ. ಹಿನ್ನೆಲೆಯಲ್ಲಿ ಕೆಳಗಿನ ಹೇಳಿಕೆಗಳನ್ನು ಗಮನಿಸಿ.

1) ಉಕ್ರೇನ್ ದೇಶವು 10ನೇ ಮತ್ತು 11ನೇ ಶತಮಾನಗಳಲ್ಲಿ ಕೈವಾನ್ ರುಸ್ (Kievan Rus')ಎಂಬ ಹೆಸರಿನ ದೇಶವಾಗಿತ್ತು. ಕಾಲಾನಂತರದಲ್ಲಿ ಕೈವಾನ್ ರುಸ್ ದೇಶವು ಒಡೆದು ಹೋಗಿ ಅನೇಕ ದೇಶಗಳು ಹುಟ್ಟಿದವು ಅದರಲ್ಲಿ ರಷ್ಯಾ ದೇಶವೂ ಒಂದು.

2) ಉಕ್ರೇನ್‌ನ ಚರ್ನೋಬಿಲ್‌ ಪರಮಾಣು ವಿದ್ಯುತ್ ಸ್ಥಾವರವನ್ನು ರಷ್ಯಾದ ಪಡೆಗಳು ವಶಪಡಿಸಿಕೊಂಡಿವೆ. 1986ರಲ್ಲಿ ಚರ್ನೋಬಿಲ್‌ನಲ್ಲಿ ಅಣುಶಕ್ತಿ ಉತ್ಪಾದನೆ ವೇಳೆ ತಾಂತ್ರಿಕ ದೋಷ ಉಂಟಾಗಿ ಭಾರಿ ಪ್ರಮಾಣದ ಸ್ಫೋಟ ಸಂಭವಿಸಿತ್ತು.

3) 1991ರಲ್ಲಿ ರಷ್ಯಾ ಒಡೆದು 15 ರಾಷ್ಟ್ರಗಳಾದ ಸಂದರ್ಭದಲ್ಲಿ ಅಮೆರಿಕಾದ ನೇತೃತ್ವದ ದೇಶಗಳು ರಷ್ಯಾದ ಹತ್ತಿರವಿರುವ ಅದರಲ್ಲೂ ಸ್ವತಂತ್ರವಾಗುವ ಹೊಸ ದೇಶಗಳನ್ನು ನ್ಯಾಟೊ ಮಿಲಿಟರಿ ಒಕ್ಕೂಟಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಭರವಸೆ ನೀಡಿದ್ದವು ಆದರೆ ಅದನ್ನು ಉಲ್ಲಂಘಿಸಿದ್ದು ರಷ್ಯಾಕ್ಕೆ ಕೋಪಕ್ಕೆ ಕಾರಣವಾಗಿದೆ.

4) ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನ ಹೊಂದಿರುವ ಭಾರತ, ವಿಶ್ವ ಸಂಸ್ಥೆಯಲ್ಲಿ ರಷ್ಯಾ ಬಣವನ್ನಾಗಲಿ, ಅಮೆರಿಕ ಬಣವನ್ನಾಗಲಿ ಬೆಂಬಲಿಸದೇ ತಟಸ್ಥವಾಗಿ ನಿಂತಿದೆ.

ಯಾವೆಲ್ಲಾ ಹೇಳಿಕೆಗಳು ಸರಿಯಾಗಿವೆ?
ಎ) ಹೇಳಿಕೆ 1ರಿಂದ 4ರ ತನಕ ಎಲ್ಲವೂ ಸರಿಯಾಗಿದೆ
ಬಿ) 1 ಮತ್ತು 4ನೇ ಹೇಳಿಕೆ ಮಾತ್ರ ಸರಿಯಾಗಿದೆ
ಸಿ) ಹೇಳಿಕೆ 1, 2 ಮತ್ತು 4 ಮಾತ್ರ ಸರಿಯಾಗಿದೆ
ಡಿ) ಯಾವ ಹೇಳಿಕೆಯೂ ಸರಿಯಾಗಿಲ್ಲ

ಉತ್ತರ: ಎ

2) ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಭರ್ತಿಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮಗಳ ಹೊರತಾಗಿಯೂ ಆ ಆಯ್ಕೆ ಪಟ್ಟಿಯನ್ನು ಊರ್ಜಿತ ಗೊಳಿಸಲು ವಿಧಾನ ಮಂಡಲದಲ್ಲಿ ಶಾಸನವನ್ನು ಮಂಡಿಸುವ ಮೂಲಕ ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್ ತೀರ್ಪನ್ನೇ ಪಕ್ಕಕ್ಕೆ ಸರಿಸಲು ಹೊರಟಿದೆ. ಹಾಗಾದರೆ ಯಾವ ವರ್ಷ ಅಧಿಸೂಚಿಸಿದ ಕೆಎಎಸ್ ಪರೀಕ್ಷೆಯನ್ನು ಊರ್ಜಿತಗೊಳಿಸಿ 362 ಜನರಿಗೆ ಹುದ್ದೆಗಳನ್ನು ನೀಡಲು ಹೊರಟಿದೆ?

ಎ) 1998 ಬಿ) 2004
ಸಿ) 2011 ಡಿ) 2015

ಉತ್ತರ: ಸಿ

3) ಕೆಳಗಿನ ಹೇಳಿಕೆಗಳನ್ನು ಗಮನಿಸಿ

1) ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ (ಎನ್‌ಇಎಸ್‌) ವಿಶ್ವದ ಅತಿದೊಡ್ಡ ಷೇರು ವಿನಿಮಯ ಕೇಂದ್ರಗಳಲ್ಲಿ ಒಂದು. ಇದು 1992ರಲ್ಲಿ ಅಸ್ತಿತ್ವಕ್ಕೆ ಬಂತು. 1994ರಲ್ಲಿ ಕಾರ್ಯಾರಂಭ ಮಾಡಲಾರಂಭಿಸಿತು.
2) ಚಿತ್ರಾ ರಾಮಕೃಷ್ಣ ಅವರು 2013ರ ಏಪ್ರಿಲ್‌ನಿಂದ 2016ರ ಡಿಸೆಂಬರ್‌ವರೆಗೆ ಎನ್‌ಇಎಸ್‌ ಸಂಸ್ಥೆಯ ಕಾರ್ಯನಿರ್ವಹಣಾ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕಿಯಾಗಿ (ಸಿ.ಇ.ಒ ತ್ತು ಎಂ.ಡಿ) ಇದ್ದರು. ಈ ಅವಧಿಯಲ್ಲಿ ಕಾಣದ ಯೋಗಿಯೊಬ್ಬರಿಂದ ಆಧ್ಯಾತ್ಮಿಕ ಮಾರ್ಗದರ್ಶನ ಪಡೆಯುತ್ತಿದ್ದರು. ಅವರ ಜತೆ ಚರ್ಚಿಸಿಯೇ ಎನ್‌ಎಸ್‌ಇ ಕುರಿತಾದ ನಿರ್ಣಯವನ್ನು ತೆಗೆದುಕೊಳ್ಳುತ್ತಿದ್ದರು. ಎನ್‌ಎಸ್‌ಇ ಸೇರಿದ ಎಲ್ಲ ತರಹದ ಗೌಪ್ಯ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದರು.
3) ಸೆಬಿಯು ಚಿತ್ರಾ ರಾಮಕೃಷ್ಣವರ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿ ಆನಂದ್ ಸುಬ್ರಮಣ್ಯ ಅವರೇ ಪ್ರಕರಣದ ರೂವಾರಿ ಎಂದು ಘೋಷಿಸಿದೆ ಹಾಗೂ 15 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದೆ.
4) ಭಾರತದ ಷೇರು ಹಗರಣದ ಕಾರಣ ಇಡೀ ವಿಶ್ವದಲ್ಲಿ ಎಲ್ಲಾ ಷೇರು ಮಾರುಕಟ್ಟೆಗಳು ಸತತ 22 ದಿನಗಳ ಕಾಲ ಕುಸಿತ ಕಂಡವು.
ಯಾವೆಲ್ಲಾ ಹೇಳಿಕೆಗಳು ಸರಿಯಾಗಿವೆ?

ಎ) ಹೇಳಿಕೆ 1ರಿಂದ 4ರ ತನಕ ಎಲ್ಲವೂ ಸರಿಯಾಗಿದೆ
ಬಿ) ಹೇಳಿಕೆ 1 ಮತ್ತು 2 ಮಾತ್ರ ಸರಿಯಾಗಿದೆ
ಸಿ) ಯಾವ ಹೇಳಿಕೆಯೂ ಸರಿಯಾಗಿಲ್ಲ
ಡಿ) 2 ಮತ್ತು 4ನೇ ಹೇಳಿಕೆ ಮಾತ್ರ ಸರಿಯಾಗಿದೆ

4) ಕರ್ನಾಟಕ ಸರ್ಕಾರ ಶಾಸಕರು ಸೇರಿದಂತೆ ಜನಪ್ರತಿನಿಧಿಗಳ ವೇತನವನ್ನು ಹೆಚ್ಚಿಗೆ ಮಾಡಿದೆ. ಹಾಗಾದರೆ ಮುಖ್ಯಮಂತ್ರಿಗಳ ತಿಂಗಳ ಸಂಬಳ ಎಷ್ಟು?

ಎ) ₹75 ಸಾವಿರ ಬಿ) ₹1 ಲಕ್ಷ
ಸಿ) ₹ 60 ಸಾವಿರ ಡಿ) ಮೇಲಿನ ಯಾವುದೂ ಅಲ್ಲ

ಉತ್ತರ: ಎ

5) ಈ ಕೆಳಗೆ ಹೆಸರಿಸಿರುವ ಯಾರಿಗೆ ಪಾಕಿಸ್ತಾನದ ಎರಡನೇ ಅತ್ಯುನ್ನತ ಗೌರವವಾದ `ಹಿಲಾಲ್ ಇ ಪಾಕಿಸ್ತಾನ್’ ನೀಡಿ ಸಮ್ಮಾನಿಸಲಾಗಿದೆ?

ಎ) ಆಂಟೊನಿಯೊ ಗುಟರೆಸ್
ಬಿ) ಕೋಫಿ ಅನ್ನಾನ್ ಸಿ) ಎಂ ಸಿ ಛಾಗಲಾ
ಡಿ) ಬಿಲ್ ಗೇಟ್ಸ್

ಉತ್ತರ:ಡಿ

6) ಈ ಕೆಳಗಿನ ಯಾರು ಚೆಸ್ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸನ್ ಅವರನ್ನು ಸೋಲಿಸಿದರು?

ಎ) ಆರ್‌ ಪ್ರಜ್ಞಾನಂದ
ಬಿ) ವಿಶ್ವನಾಥ್ ಆನಂದ್ ಸಿ) ಶ್ರೀನಾಥ್ ಶ್ರೀಕಾಂತ್
ಡಿ) ಮೇಲಿನ ಯಾರೂ ಅಲ್ಲ

ಉತ್ತರ: ಎ

7) ಶಿವಮೊಗ್ಗ ಜಿಲ್ಲೆಯಿಂದ ಈವರೆಗೆ ನಮ್ಮ ರಾಜ್ಯದ ಮುಂಖ್ಯಮಂತ್ರಿಗಳಾದ ಶಾಸಕರ ಸಂಖ್ಯೆ ಎಷ್ಟು?

ಎ) 5 ಬಿ) 4

ಸಿ) 6 ಡಿ) 7

ಉತ್ತರ: ಬಿ

8) ಕೆಳಗಿನ ಹೇಳಿಕೆಗಳನ್ನು ಗಮನಿಸಿ

1) ತೆಲಂಗಾಣದ ಐತಿಹಾಸಿಕ ರಾಮಪ್ಪ ದೇವಸ್ಥಾನವನ್ನು ಕಾಕತೀಯರ ಕಾಲದಲ್ಲಿ 1213ರಲ್ಲಿ ನಿರ್ಮಿಸಲಾಗಿತ್ತು. ಇದನ್ನು ಪ್ರಸಿದ್ಧ ಶಿಲ್ಪಿ ರಾಮಪ್ಪನವರು ತಮ್ಮ ಕಲಾ ಕೌಶಲ್ಯದ ಮೂಲಕ ನಿರ್ಮಿಸಿದ್ದನು.

2) ಕಾಕತೀಯರ ರಾಜರ ಕಾಲದ ರಾಮಪ್ಪ ದೇವಾಲಯ ವಾರಂಗಲ್ ಜಿಲ್ಲೆಯ ವೆಂಕಟಪುರ ಮಂಡಲದ ಪಾಲಂಪೇಟ್ ಗ್ರಾಮದಲ್ಲಿದೆ.

3) ತೆಲಂಗಾಣದ ಐತಿಹಾಸಿಕ ರುದ್ರೇಶ್ವರ ದೇವಾಲಯವನ್ನು ಯುನೆಸ್ಕೊ ಪಾರಂಪರಿಕ ತಾಣ ಎಂದು ಘೋಷಿಸಿದೆ.

4) ರುದ್ರೇಶ್ವರ ದೇವಾಲಯವನ್ನು ರಾಮಪ್ಪ ದೇವಾಲಯ ಎಂಥಲೂ ಎಂಥಲೂ ಕರೆಯುತ್ತಾರೆ.

ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?

ಎ) ಮೇಲಿನ ಎಲ್ಲಾ ಹೇಳಿಕೆಗಳು ಸರಿಯಾಗಿವೆ.
ಬಿ) ಮೇಲಿನ ಯಾವ ಹೇಳಿಕೆಯೂ ಸರಿಯಾಗಿಲ್ಲ
ಸಿ) 1 ಮತ್ತು 4ನೇ ಹೇಳಿಕೆ ಮಾತ್ರ ಸರಿಯಾಗಿವೆ
ಡಿ) 4ನೇ ಹೇಳಿಕೆ ಮಾತ್ರ ಸರಿಯಾಗಿವೆ.

ಉತ್ತರ:ಎ

ಉತ್ತರ:ಬಿ

ಬಾಕ್ಸ್

ನಿಮಗಿದು ಗೊತ್ತೆ?
ರಾಕೆಟ್
ಇಂದು ‘ರಾಕೆಟ್’ ಎಂಬ ಪದವನ್ನು ಹಲವಾರು ರೂಪಗಳಲ್ಲಿ ಬಳಸಲಾಗುತ್ತದೆ. ಯುದ್ಧದಲ್ಲಿ ಬಳಸುವ ಕ್ಷಿಪಣಿಗಳು (Missiles) ಕೂಡಾ ಒಂದು ಮಾದರಿಯ ರಾಕೆಟ್‌ಗಳೇ ಆಗಿವೆ. ಗ್ರಹಗಳ ಮತ್ತು ಅವುಗಳ ಉಪಗ್ರಹಗಳ ಬಗ್ಗೆ ಮಾಹಿತಿ ಸಂಗ್ರಹಿಸುವ ಬಾಹ್ಯಾಕಾಶ ನೌಕೆಗಳನ್ನು ‘ರಾಕೆಟ್’ಗಳೆಂದೇ ಕರೆಯಲಾಗುತ್ತದೆ. ಅಷ್ಟೇ ಏಕೆ, ಪಟಾಕಿಯೊಂದಕ್ಕೆ ‘ರಾಕೆಟ್’ ಎನ್ನುತ್ತೇವೆ.

ರಾಕೆಟ್ ಎಂಬ ಶಬ್ದವನ್ನು ಯಾವುದೇ ಸಂದರ್ಭದಲ್ಲಿ ಬಳಸಿದರೂ, ಅದು ಮುಂದೆ ಚಲಿಸುವುದು ನ್ಯೂಟನ್ ಮೂರನೇ ನಿಯಮದ ಆಧಾರದ ಮೇಲೆ. ರಾಕೆಟ್‌ನ ಒಳಗಿರುವ ಇಂಧನಗಳು ಉರಿದು ಉತ್ಪತ್ತಿಯಾಗುವ ಅನಿಲ, ಭಾರಿ ಶಕ್ತಿಯೊಡನೆ ಹೊರಚಿಮ್ಮುತ್ತದೆ. ಇದರಿಂದ ರಾಕೆಟ್‌ಗೆ ಮುನ್ನುಗುವುದಕ್ಕೆ ಅಗತ್ಯ ಚೇತನ ದೊರೆಯುತ್ತದೆ.

ರಾಕೆಟ್‌ನ ವಿಕಾಸದ ಕಥೆ ಆರಂಭವಾಗಿದ್ದು ಚೀನಾದಲ್ಲಿ. 1232ರಲ್ಲಿ ಚೀನೀಯರು ಮಂಗೋಲರ ವಿರುದ್ಧ ಯುದ್ಧ ಹೂಡಿದಾಗ, ಅವರು ಬೆಂಕಿಯ ಬಾಣಗಳನ್ನು ಬಳಸಿದರು. ಚಿಮ್ಮಿ ನುಗ್ಗಿದ ಈ ಬೆಂಕಿ ಬಾಣಗಳು ರಾಕೆಟ್‍ ಅವಿಷ್ಕಾರಕ್ಕೆ ಮುನ್ನುಡಿಯಾದವು. 1275ರ ವೇಳೆಗೆ ಭಾರತ, ಇಂಗ್ಲೆಂಡ್, ಅರಬ್ ದೇಶಗಳು, ಜರ್ಮನಿ ಮತ್ತು ಫ್ರಾನ್ಸ್‌ನಲ್ಲಿರಾಕೆಟ್‌ಗಳನ್ನು ಬಳಸಲಾಯಿತು. ಐನೂರು ವರ್ಷಗಳ ನಂತರ ಭಾರತೀಯ ಸೈನ್ಯ ಇಂಗ್ಲಿಷರ ವಿರುದ್ಧ ನಡೆಸಿದ ಹೋರಾಟದಲ್ಲಿ ರಾಕೆಟ್‌ಗಳನ್ನು ಬಳಸಿತು. 1792ರಲ್ಲಿ ಪ್ರಥಮ ಕಬ್ಬಿಣ ಹೊದಿಕೆಯ ರಾಕೆಟ್‍ಗಳನ್ನು ಹೈದರ್ ಅಲಿ ಮತ್ತು ಟಿಪ್ಪುಸುಲ್ತಾನ್‌ ಬ್ರಿಟಿಷರ ವಿರುದ್ಧ ನಡೆದ ಆಂಗ್ಲೊ– ಮೈಸೂರು ಯುದ್ಧದಲ್ಲಿ ರಾಕೆಟ್‍ಗಳನ್ನು ಬಳಸಿದರು. ಕಾಲಕ್ರಮೇಣ ಯುದ್ಧದಲ್ಲಿ ರಾಕೆಟ್‌ಗಳ ಬಳಕೆ ಕಡಿಮೆಯಾಗಿ, ಬಾಹ್ಯಾಕಾಶ ಸಂಶೋಧನೆಯಲ್ಲಿ ಅದರ ಮಹತ್ವ ಹೆಚ್ಚಿಸಿತು.

ರಾಕೆಟ್‌ಗಳ ಕ್ಷೇತ್ರದಲ್ಲಿ ನಿಜವಾದ ಅಭಿವೃದ್ಧಿ ಆರಂಭವಾದದ್ದು19ನೇ ಶತಮಾನದ ಮಧ್ಯಭಾಗದಲ್ಲಿ. ಅಂತರಿಕ್ಷದಲ್ಲಿನ ರಹಸ್ಯಗಳನ್ನು ಕಂಡುಹಿಡಿಯುವ ತನ್ನ ಪ್ರಯತ್ನಗಳಲ್ಲಿ ಹೆಚ್ಚು ಹೆಚ್ಚಾಗಿ ಮಾನವ ರಾಕೆಟ್‌ಗಳ ಬಳಕೆ ಮಾಡಲಾರಂಭಿಸಿದ. 1958ರ ಅಕ್ಟೋಬರ್‌ನಲ್ಲಿ ಅಮೆರಿಕ ಚಂದ್ರನತ್ತ, ‘ಪಯನಿಯರ್’ (Pioneer programs) ಅನ್ನು ರಾಕೆಟ್ ಸಹಾಯದ ಮೂಲಕ ಹಾರಿಬಿಟ್ಟಿತು. ಈ ರಾಕೆಟ್ ಚಂದ್ರನನ್ನು ತಲುಪಲಿಲ್ಲವಾದರೂ ಅದು ಅನೇಕ ಹೊಸ ಅಂಶಗಳ ಬಗ್ಗೆ ಬೆಳಕು ಚೆಲ್ಲಿತು.

ಈಗ ರಾಕೆಟ್‌ಗಳ ಸಹಾಯದಿಂದ ಮಾನವ ಒಂದು ಗ್ರಹದಿಂದ ಮತ್ತೊಂದು ಗ್ರಹಕ್ಕೆ ಹೋಗುವ ಪ್ರಯತ್ನ ಕೈಗೊಂಡಿದ್ದಾನೆ. ಈ ರಾಕೆಟ್ ಅಭಿವೃದ್ಧಿಯಲ್ಲಿ ಅಮೆರಿಕ, ರಷ್ಯಾ, ಚೀನ ಮತ್ತು ಭಾರತ ಮುಂಚೂಣಿಯಲ್ಲಿವೆ.

(ಮಾಹಿತಿ: Spardha Bharati UPSC
ಯೂಟ್ಯೂಬ್ ಚಾನೆಲ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT