ಮಂಗಳವಾರ, ಆಗಸ್ಟ್ 9, 2022
23 °C
ಮಾದರಿ ಪ್ರಶ್ನೋತ್ತರ

ಸ್ಪರ್ಧಾತ್ಮಕ ಪರೀಕ್ಷೆ: ಸಾಮಾನ್ಯ ಜ್ಞಾನ ವಿಷಯ | ಮಾದರಿ ಪ್ರಶ್ನೋತ್ತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

1) ಕೆಳಗಿನ ಹೇಳಿಕೆಗಳನ್ನು ಗಮನಿಸಿ

1) ಕರ್ನಾಟಕದ ವಿಧಾನಸಭೆಗೆ 70ರ ಸಂಭ್ರಮ. 1952ರಲ್ಲಿ ಮೊದಲ ವಿಧಾನಸಭೆಯ ಕಲಾಪ ಇಂದಿನ ಹೈಕೋರ್ಟ್ ಇರುವ ಕಟ್ಟಡದಲ್ಲಿ ನಡೆದಿತ್ತು.

2) ಮೊದಲ ವಿಧಾನಸಭೆಯ ಗೌರವ ಸ್ಪೀಕರ್ ಆಗಿ ವಿ.ವೆಂಕಟಪ್ಪ ಕಾರ್ಯನಿರ್ವಹಿಸಿದ್ದರು ಮತ್ತು ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಸೇರಿ ಎಲ್ಲಾ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದ್ದರು.

ಉತ್ತರ ಸಂಕೇತಗಳು

ಎ) 1ನೇ ಹೇಳಿಕೆ ಮಾತ್ರ ಸರಿಯಾಗಿದೆ

ಬಿ) 2ನೇ ಹೇಳಿಕೆ ಮಾತ್ರ ಸರಿಯಾಗಿದೆ

ಸಿ) ಯಾವ ಹೇಳಿಕೆಯೂ ಸರಿಯಾಗಿಲ್ಲ

ಡಿ) 1 ಮತ್ತು 2 ಎರಡೂ ಹೇಳಿಕೆಗಳು ಸರಿಯಾಗಿವೆ

ಉತ್ತರ: ಡಿ

2) ಭಾರತೀಯ ಪತ್ರಿಕಾ ಮಂಡಳಿಯ ಅಧ್ಯಕ್ಷರಾಗಿ ಯಾರನ್ನು ನೇಮಕ ಮಾಡಲಾಗಿದೆ?

ಎ) ನ್ಯಾ. ರಂಜನಾ ದೇಸಾಯಿ

ಬಿ) ನ್ಯಾ. ಸಂಜಯ ಕಿಶನ್ ಕೌಲ್‌

ಸಿ) ನ್ಯಾ. ಎನ್ ವಿ ರಮಣ

ಡಿ) ಮೇಲಿನ ಯಾವುದೂ ಅಲ್ಲ

ಉತ್ತರ: ಎ

3) ವಿಶ್ವಸಂಸ್ಥೆ ಪ್ರಕಟಣೆಗಳು ಭಾರತೀಯ ಯಾವ ಭಾಷೆಯಲ್ಲಿ ಲಭ್ಯವಿವೆ?

ಎ) ಬಂಗಾಲಿ

ಬಿ) ತಮಿಳು

ಸಿ) ಹಿಂದಿ

ಡಿ) ಗುಜರಾತ್

ಉತ್ತರ: ಸಿ

4) ಐಟುಯೂಟು (I2U2)ಕೂಟದಲ್ಲಿ ಯಾವೆಲ್ಲಾ ದೇಶಗಳು ಇವೆ?

ಎ) ಭಾರತ, ಇಸ್ರೇಲ್, ಅಮೆರಿಕ, ಯುಎಇ

ಬಿ) ಭಾರತ, ಆಸ್ಟ್ರೇಲಿಯಾ, ಬ್ರಿಟನ್, ಯುಎಇ

ಸಿ) ಚೀನಾ, ಇಸ್ರೇಲ್, ಅಮೆರಿಕ, ಜಪಾನ್‌

ಡಿ) ಇಂಡೋನೇಷ್ಯ, ಇಸ್ರೇಲ್, ಅಮೆರಿಕ, ಜಪಾನ್

ಉತ್ತರ: ಎ

5) ಕೆಳಗಿನ ಹೇಳಿಕೆಗಳನ್ನು ಗಮನಿಸಿ

1) ಕ್ಪೀರಪಥದ ಕಪ್ಪುಕುಳಿ ಸಗ್ಗಿಟರಸ್-ಎ(Sagittarius A)ಗಿಂತಲೂ 500 ಪಟ್ಟು ದೊಡ್ಡದಾಗಿರುವ ಹೊಸ ಕಪ್ಪುಕುಳಿ ಪತ್ತೆಯಾಗಿದೆ. ಅದೂ ಸೂರ್ಯನ 3 ಬಿಲಿಯನ್ ಪಟ್ಟು ದ್ರವ್ಯರಾಶಿಯನ್ನು ಹೊಂದಿದೆ.

2) ಆಸ್ಟ್ರೇಲಿಯನ್ ನ್ಯಾಷನಲ್ ಯೂನಿವರ್ಸಿಟಿ ಖಗೋಳಶಾಸ್ತ್ರಜ್ಞರು ಸೆಂಟಾರಸ್ ನಕ್ಷತ್ರಪುಂಜದಲ್ಲಿರುವ ಬೃಹತ್ ಕುಪ್ಪುಕುಳಿ ಇದಾಗಿದೆ.

ಉತ್ತರ ಸಂಕೇತಗಳು

ಎ) 1ನೇ ಹೇಳಿಕೆ ಮಾತ್ರ ಸರಿಯಾಗಿದೆ

ಬಿ) 2ನೇ ಹೇಳಿಕೆ ಮಾತ್ರ ಸರಿಯಾಗಿದೆ

 ಸಿ) ಯಾವ ಹೇಳಿಕೆಯೂ ಸರಿಯಾಗಿಲ್ಲ

ಡಿ) 1 ಮತ್ತು 2 ಎರಡೂ ಹೇಳಿಕೆಗಳು ಸರಿಯಾಗಿವೆ

ಉತ್ತರ: ಡಿ

6) ಅಗ್ನಿಪಥ ಕುರಿತಾದ ಹೇಳಿಕೆಗಳನ್ನು ಗಮನಿಸಿ

1) ಹದಿನೇಳೂವರೆ ವರ್ಷದಿಂದ 23ರ ತನಕದ ಯುವಕರನ್ನು ಸೇನೆಗೆ ಸೇರಲು ಅವಕಾಶ ನೀಡುತ್ತದೆ.

2) ಅಗ್ನಿಪಥದಲ್ಲಿ ಸೇರಿದ ಅಗ್ನಿವೀರರಿಗೆ ನೂತನ ಶಿಕ್ಷಣ ನೀತಿಗೆ ಅನುಗುಣವಾಗಿ ಇಂದಿರಾಗಾಂಧಿ ಮುಕ್ತ ವಿಶ್ವ ವಿದ್ಯಾಲಯದಿಂದ ಪದವಿ ದೊರೆಯಲಿದೆ ಹಾಗೂ ಆ ಪದವಿಗೆ ನಮ್ಮ ದೇಶದಲ್ಲಿ ಹಾಗೂ ವಿದೇಶಗಳಲ್ಲಿಯೂ ಮಾನ್ಯತೆ ದೊರೆಯಲಿದೆ.

3) ಭೂ ಸೇನಾ ಸೈನಿಕರ ಸರಾಸರಿ ವಯಸ್ಸು 32 ರಿಂದ 33 ವರ್ಷಗಳಾಗಿದ್ದು ಅಗ್ನಿಪಥ ಯೋಜನೆಯಿಂದಾಗಿ 26ಕ್ಕೆ ಇಳಿಯುವ ಸಾಧ್ಯತೆ ಇದೆ.

4) ಅಗ್ನಿಪಥ ಯೋಜನೆಯಡಿ ನೇಮಕವಾದವರಿಗೆ ನಾಲ್ಕುವರ್ಷ ಸೇವೆ ಸಲ್ಲಿಸಿದ ನಂತರ ಶೇ 75ರಷ್ಟು ಅಗ್ನಿವೀರರನ್ನು ವಾಪಸ್ ಸಮಾಜಕ್ಕೆ ಕಳುಹಿಸಲಾಗುತ್ತದೆ. ಇವರಿಗೆ ಪಿಂಚಣಿ ವ್ಯವಸ್ಥೆ ಇರುವುದಿಲ್ಲ. ₹ 11ರಿಂದ ₹12 ಲಕ್ಷದಷ್ಟು ಹಣವನ್ನು ನೀಡಲಾಗುತ್ತದೆ.

ಉತ್ತರ ಸಂಕೇತಗಳು

ಎ) ಹೇಳಿಕೆ 1, 2 ಮತ್ತು 3 ಮಾತ್ರ ಸರಿಯಾಗಿದೆ

ಬಿ) 1, 4ನೇ ಹೇಳಿಕೆ ಮಾತ್ರ ಸರಿಯಾಗಿದೆ

ಸಿ) 1 ರಿಂದ 4ರ ತನಕ ಎಲ್ಲಾ ಹೇಳಿಕೆಗಳು ಸರಿಯಾಗಿವೆ

ಡಿ) 1 ಮತ್ತು 2 ಎರಡೂ ಹೇಳಿಕೆಗಳು ಸರಿಯಾಗಿದ್ದಾವೆ

ಉತ್ತರ: ಸಿ

7) ಬೆಂಗಳೂರಿನ ರಾಷ್ಟ್ರೀಯ ಮಿಲಿಟರಿ ಶಾಲೆಯ ಅಮೃತ ಮಹೋತ್ಸವ ಆಚರಿಸುತ್ತದೆ. ಇದನ್ನು ಆರನೇ ಕಿಂಗ್ ಜಾರ್ಜ್ ಆರಂಭಿಸಿದ್ದರು. ಈ ಶಾಲೆಯನ್ನು ಯಾವ ವರ್ಷ ಆರಂಭಿಸಲಾಗಿತ್ತು?

ಎ) 1946

ಬಿ) 1939

ಸಿ) 1940

ಡಿ)1950

ಉತ್ತರ: ಎ

8) ಅನಾಮಾರ್ಫಾಸಿಸ್ ಎಂಬ ಹೆಸರಿನ ದೃಶ್ಯ ಕಲೆಯನ್ನು ಬಳಸಿ ಅನಿಲ್ ಭೋಗಶೆಟ್ಟಿ ಎಂಬ ಕಲಾವಿದರು ಪ್ರಧಾನಿ ನರೇಂದ್ರ ಮೋದಿ ಚಿತ್ರ ಬಿಡಿಸಿದರು. ಹಾಗಾದರೆ ಅನಾಮಾರ್ಫಾಸಿಸ್ ವಿಶೇಷತೆ ಏನು?

ಎ) ನೋಡಿದ ತಕ್ಷಣ ಚಿತ್ರ ಏನು ಎಂಬುದು ಗೊತ್ತಾಗುತ್ತದೆ

ಬಿ) ನಿರ್ದಿಷ್ಟ ಬಿಂದುವಿನಲ್ಲಿ/ಕೋನದಲ್ಲಿ ನೋಡಿದಾಗ ಮಾತ್ರ ಚಿತ್ರವು ಸ್ಪಷ್ಟವಾಗುತ್ತದೆ

ಸಿ) ಕೇವಲ ಹೂವು ಹಣ್ಣುಗಳನ್ನು ಮಾತ್ರ ಬಿಡಿಸಲು ಈ ಕಲೆ ಬಳಸಲಾಗುತಿತ್ತು ಈಗ ಮಾನವರನ್ನು ಕೂಡಾ ಚಿತ್ರಿಸಲಾಗುತ್ತದೆ

ಡಿ) ಮೇಲಿನ ಯಾವುದೇ ಹೇಳಿಕೆ ಸರಿಯಾಗಿಲ್ಲ

ಉತ್ತರ: ಬಿ

ನಿಮಗಿದು ಗೊತ್ತೇ?

ಆಫೀಮು

ಆಫೀಮು ಒಂದು ಮಾದಕ ವಸ್ತು. ಪೌರಾತ್ಯ ದೇಶಗಳಲ್ಲಿ ಇದನ್ನು ಜನರು ತಂಬಾಕಿನಂತೆ ಉಪಯೋಗಿಸುತ್ತಾರೆ. ಕೆಲವರು ಇದನ್ನು ಜಗಿದು ತಿನ್ನುತ್ತಾರೆ. ಆಫೀಮು ಹೇಗೆ ಪಡೆಯುತ್ತಾರೆ ಗೊತ್ತೆ? ಅದನ್ನು ನಾವು ಅಡಿಗೆ, ಪಾಯಸಕ್ಕೆ ಬಳಸುತ್ತೇವಲ್ಲ ಗಸಗಸೆ, ಆ ಗಿಡದಿಂದ ಪಡೆಯಲಾಗುತ್ತದೆ. ಗಸಗಸೆ ಹಣ್ಣುಗಳಿಂದ ಬರುವ ರಸವನ್ನು  ತೆಗೆಯಲಾಗುತ್ತದೆ. ಬಿಳಿ ಬಣ್ಣದ ಈ ರಸ ಹೆಪ್ಪುಗಟ್ಟುತ್ತದೆ. ಅನಂತರ ಅದು ಕಂದು ಬಣ್ಣಕ್ಕೆ ತಿರುಗುತ್ತದೆ. ಗಾಳಿ ಮತ್ತು ಬೆಳಕಿನಿಂದ ಹೀಗೆ ಬಣ್ಣ ಬದಲಾಗುತ್ತದೆ. ಈ ಅಂಟಿನಿಂದ ಇದರಿಂದ ಮಾತ್ರೆಗಳನ್ನು ತಯಾರಿಸಲಾಗುತ್ತದೆ. 

ಭಾರತ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಅಫೀಮು ಮಾರಾಟ ನಿಷೇಧಿಸಲಾಗಿದೆ. ಪರಿಶುದ್ಧ ಆಫೀಮನ್ನು ಮಾರ್ಫಿನ್ ಮುಂತಾದವುಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಕೆಲವು ರಾಷ್ಟ್ರಗಳಲ್ಲಿ ಕಚ್ಚಾ ಮತ್ತು ಶುದ್ಧ ಆಫೀಮು ಮತ್ತು ಗಾಂಜಾದ ಅಕ್ರಮ ಮಾರಾಟದ ಮೇಲೆ ನಿಷೇಧ ಹೇರಲಾಗಿದೆ. 

ಆಫೀಮಿನಲ್ಲಿ ಸಸಾರಜನಕ ಕ್ಷಾರ ದ್ರವ್ಯಗಳಿರುವುದರಿಂದ ಅದು ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ಈ ಸಸಾರಜನಕ ಕ್ಷಾರ ದ್ರವ್ಯಗಳಲ್ಲಿ ಮಾರ್ಫಿನ್ ಅತಿ ಮುಖ್ಯವಾದುದು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು