ಐಎಎಸ್, ಕೆಎಎಸ್, ಕೆಪಿಎಸ್‌ಸಿ ಸೇರಿದಂತೆ ವಿವಿಧ ಹುದ್ದೆಗಳಿಗಾಗಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ‘ಸಾಮಾನ್ಯ ಜ್ಞಾನ’ ವಿಷಯಕ್ಕೆ ಸಂಬಂಧಿಸಿದ ಮಾದರಿ ಪ್ರಶ್ನೋತ್ತರಗಳನ್ನು ಇಲ್ಲಿ ನೀಡಲಾಗಿದೆ.
1. ಭಾರತದಲ್ಲಿ ಭತ್ತ ಬೆಳೆಯುವ ಪ್ರದೇಶವು ಹೇಗೆ ಹಂಚಿಕೆಯಾಗಿದೆ?
ಎ. ದೇಶದ ಒಟ್ಟು ನೀರಾವರಿ ಪ್ರದೇಶದ ಶೇ 50ರಷ್ಟು ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ.
ಬಿ. ದೇಶದ 9 ರಾಜ್ಯಗಳು ಈ ಬೆಳೆಯ ಶೇ 68ರಷ್ಟು ಕ್ಷೇತ್ರ ಒಳಗೊಂಡಿದ್ದು, ಶೇ.79ರಷ್ಟು ಭತ್ತ ಉತ್ಪಾದಿಸುತ್ತಿವೆ.
ಎ. ಹೇಳಿಕೆ ಎ ಮಾತ್ರ ಸರಿಯಾಗಿದೆ.
ಬಿ. ಹೇಳಿಕೆ ಬಿ ಮಾತ್ರ ಸರಿಯಾಗಿದೆ.
ಸಿ. ಮೇಲಿನ ಎರಡೂ ಹೇಳಿಕೆಗಳು ಸರಿಯಾಗಿವೆ.
ಡಿ. ಮೇಲಿನ ಎರಡೂ ಹೇಳಿಕೆಗಳು ತಪ್ಪಾಗಿವೆ.
ಉತ್ತರ: ಸಿ
***
2. ಕರ್ನಾಟಕದಲ್ಲಿ ಸಕ್ಕರೆ ಕಾರ್ಖಾನೆಗಳನ್ನು ಕುರಿತ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿರಿ.
ಎ. ಬೆಳಗಾವಿ ಜಿಲ್ಲೆಯಲ್ಲಿ ಪ್ರತಿ 25 ಕಿ.ಮೀ ಅಂತರದಲ್ಲಿ ನಾಲ್ಕು ಸಕ್ಕರೆ ಕಾರ್ಖಾನೆಗಳಿವೆ.
ಬಿ. ದೂರದಿಂದ ಖರೀದಿ ಮಾಡುವ ಕಬ್ಬಿನ ಕಟಾವು ಮತ್ತು ಸಾಕಾಣಿಕ ಖರ್ಚನ್ನು ರೈತರಿಂದಲೇ ವಸೂಲಿ ಮಾಡಲಾಗುತ್ತಿದೆ.
ಎ. ಹೇಳಿಕೆ ಎ ಮಾತ್ರ ಸರಿಯಾಗಿದೆ.
ಬಿ. ಹೇಳಿಕೆ ಬಿ ಮಾತ್ರ ಸರಿಯಾಗಿದೆ.
ಸಿ. ಮೇಲಿನ ಎರಡೂ ಹೇಳಿಕೆಗಳು ಸರಿಯಾಗಿವೆ.
ಡಿ. ಮೇಲಿನ ಎರಡೂ ಹೇಳಿಕೆಗಳು ತಪ್ಪಾಗಿವೆ.
ಉತ್ತರ : ಸಿ
***
3. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿರಿ.
ಎ. ಸಾಗರ ಅಥವಾ ಸಮುದ್ರದ ಅಂಚಿನ ಹೆಚ್ಚು ಆಳವಿಲ್ಲದ ಭಾಗವನ್ನೇ ಖಂಡಾವರಣ ಪ್ರದೇಶವೆನ್ನುವರು.
ಬಿ. ಖಂಡಾವರಣ ಪ್ರದೇಶವು ಮೀನುಗಾರಿಕೆ, ಜಲಚರ ಕೃಷಿ, ನೌಕಾಯಾನ ಹಾಗೂ ಕಚ್ಚಾತೈಲಗಳ ಉತ್ಪಾದನೆಗೆ ಪ್ರಾಮುಖ್ಯತೆ ಪಡೆದಿದೆ.
ಎ. ಹೇಳಿಕೆ ಎ ಮಾತ್ರ ಸರಿಯಾಗಿದೆ.
ಬಿ. ಹೇಳಿಕೆ ಬಿ ಮಾತ್ರ ಸರಿಯಾಗಿದೆ.
ಸಿ. ಮೇಲಿನ ಎರಡು ಹೇಳಿಕೆಗಳೂ ಸರಿಯಾಗಿವೆ.
ಡಿ. ಮೇಲಿನ ಎರಡು ಹೇಳಿಕೆಗಳೂ ತಪ್ಪಾಗಿವೆ.
ಉತ್ತರ : ಸಿ
***
4. ಉತ್ತರ ಅಮೆರಿಕ ಮತ್ತು ಯುರೋಪಿನ ನಡುವೆ ಇರುವ ಸಾಗರ ಯಾವುದು
ಎ. ಅಟ್ಲಾಂಟಿಕ ಸಾಗರ
ಬಿ. ಪೆಸಿಫಿಕ್ ಸಾಗರ
ಸಿ. ಹಿಂದೂ ಮಹಾಸಾಗರ
ಡಿ. ಉತ್ತರಧ್ರುವ ಸಾಗರ
ಉತ್ತರ: ಎ
***
5. ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಕೆಳಗಿನ ಯಾವ ಸ್ಥಾನಮಾನವನ್ನು ಕಲ್ಪಿಸಲಾಗಿದೆ?
ಎ. ಶಾಸನೀಯ ಸ್ಥಾನಮಾನ.
ಬಿ. ಸಂವಿಧಾನಾತ್ಮಕ ಸ್ಥಾನಮಾನ.
ಸಿ. ಶಾಸನೀಯೇತರ ಸ್ಥಾನಮಾನ.
ಡಿ. ನಿಗಮದ ಸ್ಥಾನಮಾನ.
ಉತ್ತರ: ಎ
***
6. ಮೋ ಜಂಗಲ್ ಜಾಮಿ ಯೋಜನೆಯನ್ನು ಒಡಿಶಾ ಸರ್ಕಾರ ಕೆಳಗಿನ ಯಾವ ಸಮುದಾಯಗಳಿಗೆ ಹಮ್ಮಿಕೊಂಡಿದೆ?
ಎ. ಕೃಷಿ ಸಮುದಾಯ
ಬಿ. ಕೈಗಾರಿಕಾ ವಲಯ.
ಸಿ. ಸಣ್ಣ ಕೈಗಾರಿಕಾ ವಲಯ.
ಡಿ. ಬುಡಕಟ್ಟು ಸಮುದಾಯಗಳ ಅಭಿವೃದ್ಧಿ.
ಉತ್ತರ: ಡಿ
***
7. ಸಂವಿಧಾನಾತ್ಮಕ ಉದ್ದೇಶಗಳಿಗಾಗಿ ಪರಿಶಿಷ್ಟ ಪಂಗಡ ಎಂದು ಅಧಿಸೂಚನೆ ಹೊರಡಿಸುವ ಅಧಿಕಾರವನ್ನು ಕೆಳಗಿನ ಯಾವ ಹುದ್ದೆಗಳು ಹೊಂದಿವೆ?
ಎ. ರಾಷ್ಟ್ರಪತಿಗಳು
ಬಿ. ರಾಜ್ಯಪಾಲರು.
ಸಿ. ಕೇಂದ್ರ ಗೃಹ ಸಚಿವರು.
ಡಿ. ಭಾರತದ ಪ್ರಧಾನ ಮಂತ್ರಿಗಳು.
ಉತ್ತರ: ಎ
***
8. ಪ್ರಸ್ತುತ ವರ್ಷದ ಆವೃತ್ತಿಯ ಡುರಾಂಡ್ ಕಪ್ ಕ್ರೀಡಾಕೂಟದಲ್ಲಿ ಕೆಳಗಿನ ಯಾವ ರಾಷ್ಟ್ರಗಳ ತಂಡಗಳು ಭಾಗವಹಿಸಲಿದೆ?
1. ಬಾಂಗ್ಲಾದೇಶ
2. ಪಾಕಿಸ್ತಾನ.
3. ಭೂತಾನ್
4. ನೇಪಾಳ.
5. ಶ್ರೀಲಂಕಾ.
ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ
ಎ. 1, 3 ಮತ್ತು 4
ಬಿ. 1, 2, 3 ಮತ್ತು 4
ಸಿ. 2 ಮತ್ತು 5
ಡಿ. 3 ಮತ್ತು 5.
ಉತ್ತರ : ಎ
***
9. ಕೆಳಗಿನ ಯಾವ ಅಂಶಗಳನ್ನು ಪ್ರಧಾನಮಂತ್ರಿ-ಕುಸುಮ್ ಯೋಜನೆಯ ಧ್ಯೇಯೋದ್ದೇಶಗಳು ಎಂದು ಪರಿಗಣಿಸಬಹುದು?
1. ಡೀಸೆಲ್ ಚಾಲಿತ ಪಂಪ್ ಗಳ ಬಳಕೆಯನ್ನು ತಗ್ಗಿಸುವುದು.
2. ಸೌರ ವಿದ್ಯುತ್ ಚಾಲಿತ ಪಂಪ್ ಗಳ ಬಳಕೆಗೆ ಉತ್ತೇಜನ ನೀಡುವುದು.
3. ಸಮುದಾಯ ಆಧಾರಿತ ಸೌರ ವಿದ್ಯುತ್ ಚಾಲಿತ ನೀರಾವರಿ ಯೋಜನೆಗಳನ್ನು ಹಮ್ಮಿಕೊಳ್ಳುವುದು.
ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ
ಎ. 1 ಮಾತ್ರ
ಬಿ. 2 ಮಾತ್ರ
ಸಿ. 1, 2 ಮತ್ತು 3
ಡಿ. 2 ಮತ್ತು 3.
ಉತ್ತರ : ಸಿ
***
10. ಇತ್ತೀಚಿಗೆ ಟಿಬೆಟ್ ನ ಧರ್ಮ ಗುರುವಾದ ದಲೈಲಾಮಾ ಅವರು ಕೆಳಗಿನ ಯಾವ ರಾಷ್ಟ್ರದ ಅಧಿಕಾರಿಗಳೊಂದಿಗೆ ಚರ್ಚಿಸಿದರು?
ಎ. ಇಸ್ರೇಲ್ ರಾಷ್ಟ್ರದ ಅಧಿಕಾರಿಗಳು.
ಬಿ. ದಕ್ಷಿಣ ಕೊರಿಯಾ ರಾಷ್ಟ್ರದ ಅಧಿಕಾರಿಗಳು.
ಸಿ. ಅಮೆರಿಕದ ಅಧಿಕಾರಿಗಳು.
ಡಿ. ಚೀನಾದ ಅಧಿಕಾರಿಗಳು.
ಉತ್ತರ: ಸಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.