ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾನ್ಯ ಜ್ಞಾನ: ಮಾದರಿ ಪ್ರಶ್ನೋತ್ತರಗಳು

Published 17 ಮೇ 2023, 19:36 IST
Last Updated 17 ಮೇ 2023, 19:36 IST
ಅಕ್ಷರ ಗಾತ್ರ

ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ‘ಸಾಮಾನ್ಯ ಜ್ಞಾನ’ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿರುತ್ತವೆ. ಇದಕ್ಕೆ ಪೂರಕವಾಗಿ ರಾಷ್ಟ್ರೀಯ ವಿದ್ಯಮಾನ ಹಾಗೂ ಆರ್ಥಿಕತೆ, ಪರಿಸರ ವಿಷಯಗಳಿಗೆ ಸಂಬಂಧಿಸಿದ ಮಾದರಿ ಪ್ರಶ್ನೋತ್ತರಗಳನ್ನುಇಲ್ಲಿ ನೀಡಲಾಗಿದೆ.

1. ಇತ್ತೀಚಿಗೆ ಕೆಳಗೆ ಉಲ್ಲೇಖಿಸಿರುವ ಯಾವ ರಾಷ್ಟ್ರದ ನಗರದಲ್ಲಿ ವಿದುತ್‌ ಚಾಲಿತ ಬಾಡಿಗೆ ಸ್ಕೂಟರ್‌ಗಳ ಬಳಕೆಯನ್ನು ನಿಷೇಧಿಸಲಾಗುತ್ತಿದೆ?

ಎ. ಪ್ಯಾರಿಸ್, ಫ್ರಾನ್ಸ್

ಬಿ. ಲಂಡನ್, ಇಂಗ್ಲೆಂಡ್

ಸಿ. ಕೊಲಂಬೊ, ಶ್ರೀಲಂಕ

ಡಿ. ಇಸ್ಲಾಮಾಬಾದ್, ಪಾಕಿಸ್ತಾನ

ಉತ್ತರ : ಎ

2. ಶುದ್ಧ ನೀರಿನ ಸಂರಕ್ಷಣೆಗೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು?

ಎ. ಸಮುದ್ರದ ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸುವ ತಂತ್ರಜ್ಞಾನ ಅಭಿವೃದ್ಧಿ ಪಡಿಸುವುದು.

ಬಿ. ಸೌದಿ ಅರೇಬಿಯಾ, ಯುಎಇ ಮತ್ತು ಇಸ್ರೇಲ್ ದೇಶಗಳು ಬಳಸುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವುದು.

ಎ. ಹೇಳಿಕೆ ಎ ಮಾತ್ರ ಸರಿಯಾಗಿದೆ.

ಬಿ. ಹೇಳಿಕೆ ಬಿ ಮಾತ್ರ ಸರಿಯಾಗಿದೆ.

ಸಿ. ಮೇಲಿನ ಎರಡು ಹೇಳಿಕೆಗಳು ಸರಿಯಾಗಿವೆ.

ಡಿ. ಮೇಲಿನ ಎರಡು ಹೇಳಿಕೆಗಳು ತಪ್ಪಾಗಿವೆ.

ಉತ್ತರ: ಸಿ.

3. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿರಿ

ಎ. ನೀರಿನ ಕೊರತೆ ಎದುರಿಸುತ್ತಿರುವ ಶೇ 80ರಷ್ಟು ಜನರು ಏಷ್ಯಾದಲ್ಲಿ ವಾಸಿಸುತ್ತಿದ್ದಾರೆ.

ಬಿ. ನಗರ, ಕೈಗಾರಿಕಾ ಬೆಳವಣಿಗೆ ಮತ್ತು ಕೃಷಿ ಕ್ಷೇತ್ರದಲ್ಲಿ ವಿಶ್ವದ ಶೇ  70ರಷ್ಟು ನೀರು ಬಳಕೆಯಾಗುತ್ತಿದೆ.

ಎ. ಹೇಳಿಕೆ ಎ ಮಾತ್ರ ಸರಿಯಾಗಿದೆ.

ಬಿ. ಹೇಳಿಕೆ ಬಿ ಮಾತ್ರ ಸರಿಯಾಗಿದೆ.

ಸಿ. ಮೇಲಿನ ಎರಡು ಹೇಳಿಕೆಗಳು ಸರಿಯಾಗಿವೆ.

ಡಿ. ಮೇಲಿನ ಎರಡು ಹೇಳಿಕೆಗಳು ತಪ್ಪಾಗಿವೆ.

ಉತ್ತರ: ಸಿ

4. ಈ ಕೆಳಗಿ ಹೆಸರಿಸಿರುವ ಯಾವ ದೇಶ ಸಮುದ್ರದ ನೀರನ್ನು ಶುದ್ಧ ನೀರಾಗಿ ಪರಿವರ್ತಿಸಿ ರಫ್ತು ಮಾಡುತ್ತಿದೆ?

ಎ. ಸೌದಿ ಅರೇಬಿಯಾ.

ಬಿ. ಆಸ್ಟ್ರೇಲಿಯಾ.

ಸಿ. ಮಾಲ್ಡೀವ್ಸ್.

ಡಿ. ಇಸ್ರೇಲ್.

ಉತ್ತರ: ಡಿ

5. ಇತ್ತೀಚಿಗೆ ಉದ್ಘಾಟನೆಯಾದ ಮೊತ್ತಮೊದಲ ಜಾಗತಿಕ ಬೌದ್ಧ ಧರ್ಮದ ಸಮಾವೇಶಕ್ಕೆ ಸಂಬಂಧಿಸಿದ ಸರಿಯಾದ ಹೇಳಿಕೆಗಳನ್ನು ಗುರುತಿಸಿ?

1. ಈ ವರ್ಷದ ಜಾಗತಿಕ ಸಮಾವೇಶವನ್ನು ನವದೆಹಲಿಯಲ್ಲಿ ಆಯೋಜಿಸಲಾಗುತ್ತಿದೆ.

2. ಪ್ರಸ್ತುತ ವರ್ಷದ ಬೌದ್ಧ ಧರ್ಮದ ಸಮಾವೇಶವನ್ನು ಐದನೇ ಆವೃತ್ತಿ ಎಂದು ಪರಿಗಣಿಸಬಹುದು.

3. ಈ ಸಮಾವೇಶದಲ್ಲಿ ನಾಲ್ಕು ವಿವಿಧ ವಿಚಾರಗಳಿಗೆ ಸಂಬಂಧಿಸಿದ ಚರ್ಚೆಯಾಗುತ್ತದೆ.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ

ಎ. 1 ಮಾತ್ರ

ಬಿ. 1 ಮತ್ತು 3

ಸಿ. 1 ಮತ್ತು 2

ಡಿ. 1, 2 ಮತ್ತು 3.

ಉತ್ತರ : ಬಿ

6. ಈ ವರ್ಷದ ವಿಶ್ವ ಪಾರಂಪರಿಕ ದಿನಾಚರಣೆಯ ಧೇಯವಾಕ್ಯವೇನಿತ್ತು ?

ಎ. ಹೆರಿಟೇಜ್ ಚೇಂಜಸ್

ಬಿ. ವರ್ಲ್ಡ್ ಹೆರಿಟೇಜ್ ಪ್ರೋಟೆಕ್ಷನ್‌

ಸಿ. ವಿಶ್ವಶಾಂತಿ ಮತ್ತು ಪರಂಪರೆಯ ಸಂರಕ್ಷಣೆ

ಡಿ. ನೈಸರ್ಗಿಕ ಪಾರಂಪರಿಕ ಸ್ಥಳಗಳ ಸಂರಕ್ಷಣೆ

ಉತ್ತರ : ಎ

7. ಕರಾವಳಿ ಜೀವ ಭೌಗೋಳಿಕ ವಲಯ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿರಿ

ಎ. ಇದು ಭಾರತದ ಭೂ ವಿಸ್ತೀರ್ಣದ ಶೇ. 2.5 ರಷ್ಟಿದೆ.

ಬಿ. ಇದು ಮರಳು ಬೀಚ್‌ಗಳು ಮತ್ತು ಮ್ಯಾಂಗ್ರೋವ್‌ಗಳಿಂದ ಕೂಡಿದೆ.

ಎ. ಹೇಳಿಕೆ ಎ ಮಾತ್ರ ಸರಿಯಾಗಿದೆ.

ಬಿ. ಹೇಳಿಕೆ ಬಿ ಮಾತ್ರ ಸರಿಯಾಗಿದೆ.

ಸಿ. ಮೇಲಿನ ಎರಡೂ ಹೇಳಿಕೆಗಳು ಸರಿಯಾಗಿವೆ.

ಡಿ. ಮೇಲಿನ ಎರಡೂ ಹೇಳಿಕೆಗಳು ತಪ್ಪಾಗಿವೆ.

ಉತ್ತರ: ಸಿ.

8. ವನ್ಯಜೀವಿ ಸಂರಕ್ಷಣೆ ಕಾರ್ಯತಂತ್ರದ ಭಾಗವಾಗಿ ಸಂರಕ್ಷಿತ ಪ್ರದೇಶಗಳ ಸುತ್ತಲೂ ಹೆಚ್ಚಿನ ರಕ್ಷಣೆಗಾಗಿ ಬಫರ್ ಜೋನ್ ರಚಿಸಲು ಯಾವಾಗ ನಿರ್ಧರಿಸಲಾಯಿತು?

ಎ. 2002 

ಬಿ. 2004 

ಸಿ. 2006 

ಡಿ. 2008 

ಉತ್ತರ: ಎ 

9. ಇತ್ತೀಚಿಗೆ ಜಾರಿಗೆ ಬಂದಿರುವ ವೊಸ್ಟ್ರೊ ಖಾತೆಯನ್ನು ಕೆಳಗಿನ ಯಾವ ಸಂಸ್ಥೆಗಳು ನಿಯಂತ್ರಿಸುತ್ತವೆ?

ಎ. ಭಾರತೀಯ ಭದ್ರತಾ ವಿನಿಮಯ ಕೇಂದ್ರ

ಬಿ. ಭಾರತೀಯ ಸ್ಟೇಟ್ ಬ್ಯಾಂಕ್

ಸಿ. ಭಾರತೀಯ ರಿಸರ್ವ್ ಬ್ಯಾಂಕ್

ಡಿ. ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ

ಉತ್ತರ: ಸಿ

(ವಿವರಣೆ: ವಿದೇಶಿ ಬ್ಯಾಂಕ್‌ಗಳು ಭಾರತೀಯ ಬ್ಯಾಂಕ್‌ಗಳೊಂದಿಗೆ ಭಾರತೀಯ ಕರೆನ್ಸಿ(ರೂಪಾಯಿ)ಯಲ್ಲಿ ವಹಿವಾಟು ನಡೆಸುವಾಗ ಹಲವು ಸಮಸ್ಯೆಗಳು ಉದ್ಭವವಾಗುತ್ತಿದ್ದವು. ಈ ಸಮಸ್ಯೆ ಪರಿಹರಿಸುವ ಉದ್ದೇಶದಿಂದ ಭಾರತೀಯ ರಿಸರ್ವ್ ಬ್ಯಾಂಕ್ ರೂಪಾಯಿ ವೊಸ್ಟ್ರೊ (Vostro)ಖಾತೆ ವ್ಯವಸ್ಥೆಯನ್ನು ಜಾರಿಗೆ ತಂದಿದೆ)

10. ಇತ್ತೀಚಿಗೆ ಕೆಳಗೆ ತಿಳಿಸಿರುವ ಯಾವ ಬ್ಯಾಂಕ್ ಧ್ವನಿ ಆಧಾರಿತ ಬಯೋಮೆಟ್ರಿಕ್ ದೃಢೀಕರಣ ಅಪ್ಲಿಕೇಶನನ್ನು ಪ್ರಾರಂಭಿಸಿದೆ?

ಎ. ಭಾರತೀಯ ಸ್ಟೇಟ್ ಬ್ಯಾಂಕ್

ಬಿ. ಕೆನರಾ ಬ್ಯಾಂಕ್

ಸಿ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ

ಡಿ. ಸಿಟಿ ಯೂನಿಯನ್ ಬ್ಯಾಂಕ್ ಲಿಮಿಟೆಡ್

ಉತ್ತರ : ಡಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT