ತಿ.ನರಸೀಪುರ: ‘ಇತ್ತೀಚೆಗಿನ ದಿನಗಳಲ್ಲಿ ಸರ್ಕಾರಿ ಉದ್ಯೋಗ ಮರೀಚಿಕೆಯಾಗುತ್ತಿದ್ದು, ಬದುಕು ರೂಪಿಸಿಕೊಳ್ಳಲು ಜಡತ್ವ ತೊರೆದು ಪ್ರತಿಭಾವಂತಿಕೆ ಬೆಳೆಸಿಕೊಳ್ಳಬೇಕು’ ಎಂದು ಮೈಸೂರು ವಿ.ವಿ ಕುಲಸಚಿವೆ ಎಂ.ಕೆ.ಸವಿತಾ ಹೇಳಿದರು.

ಪಟ್ಟಣದ ಹಳೇ ಸಂತೇಮಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ಸಾಂಸ್ಕೃತಿಕ, ಕ್ರೀಡೆ ಎನ್ಎಸ್ಎಸ್, ರೇಂಜರ್ಸ್ ಮತ್ತು ರೋವರ್ಸ್, ಯೂತ್ ರೆಡ್ ಕ್ರಾಸ್, ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಕ್ರೀಡಾ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಶಿಕ್ಷಣ ಎಂದರೆ ನಿರ್ದಿಷ್ಟ ಸಾಧನೆ ಜತೆಗೆ ವ್ಯಕ್ತಿತ್ವ ರೂಪಿಸಿಕೊಳ್ಳುವುದಾಗಿದೆ. ಎಲ್ಲಾ ರಂಗದಲ್ಲೂ ಭಾಗವಹಿಸಿ ಕಲಿತಾಗ ಮಾತ್ರ ಸಾಧನೆ ಸಾಧ್ಯ ಎಂದರು.

ಪದವಿ ನಂತರ ಮುಂದೇನು ಎಂಬ ಗುರಿ ಇರಬೇಕು. ತಂದೆ ಶಿಕ್ಷಣ ಕೊಡಿಸುತ್ತಾರೆ. ಉದ್ಯೋಗವನ್ನು ಅವರೇ ಕೊಡಿಸಬೇಕೆಂಬ ಭಾವನೆ ಇರಬಾರದು. ಸರ್ಕಾರಿ ಉದ್ಯೋಗ ಅವಕಾಶವಿಲ್ಲವಾದಲ್ಲಿ ಬದುಕು ಕಟ್ಟಿಕೊಳ್ಳಲು ಉದ್ಯೋಗ ಗಿಟ್ಟಿಸಿಕೊಳ್ಳಲು ಅಗತ್ಯ ಜ್ಞಾನ, ಕೌಶಲ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೇವಲ ಓದಿ ಅಂಕ ಗಳಿಸಿದರೆ ಸಾಲದು. ಮೊಬೈಲ್ನಲ್ಲಿ ರೀಲ್ ಮಾಡುತ್ತಾ, ಸಾಮಾಜಿಕ ಜಾಲತಾಣ ನೋಡಿ ಸಮಯ ವ್ಯರ್ಥ ಮಾಡುವ ಬದಲು ಬದುಕಲು ಪೂರಕ ಜ್ಞಾನ ಮತ್ತು ಕೌಶಲ, ಪರಿಶ್ರಮ ಬೆಳೆಸಿಕೊಳ್ಳಬೇಕು. ಸಾಧಕರ ಜೀವನ ನಮಗೆ ಸ್ಫೂರ್ತಿ. ಅವರ ಹಾದಿಯಲ್ಲಿ ನಾವು ಸಾಗಬೇಕು ಎಂದರು.

ಕ್ರೀಡೆ, ಸಾಂಸ್ಕೃತಿಕ, ರೇಂಜರ್ಸ್ ರೋರ್ವರ್ಸ್ ಭಾಗವಹಿಸುವಿಕೆ ಹಾಗೂ ಹೆಚ್ಚು ಗ್ರಂಥಾಲಯ ಬಳಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕಿ ಡಿ.ಎಸ್.ಪ್ರತಿಮಾ ಮಾತನಾಡಿದರು. ಪ್ರಾಂಶುಪಾಲ ಎಚ್.ವಿ .ಉದಯ್ ಕುಮಾರ್, ಪ್ರೊ.ಎಂ.ರಾಜಣ್ಣ, ಪುಟ್ಟಸ್ವಾಮಿ, ಕೆ.ಕೆ.ಮುತ್ತಮ್ಮ, ಪ್ರೊ.ಮಹೇಶ್, ಎನ್.ರಾಘವೇಂದ್ರ ಪ್ರಸಾದ್, ಪ್ರೊ.ಬಿ.ಎಂ.ರಾಮಮೂರ್ತಿ, ಆರ್.ಕೆಂಪರಾಜು, ಪ್ರೊ.ಮಹೇಶ್, ಅಮಿತ್, ರೇಷ್ಮಾ ಚಂಗಪ್ಪ, ಕಾಲೇಜು ಸಮಿತಿ ಸದಸ್ಯ ಎಸ್.ವೆಂಕಟರಮಣ ಸ್ವಾಮಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸೋಸಲೆ ರಾಜಣ್ಣ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-38-1549124645

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.