ಮೈಸೂರು: ‘ಖಾಸಗಿ ಕಂಪನಿಗಳಲ್ಲಿ ಉದ್ಯೋಗದ ಅವಕಾಶಗಳು ಸಾಕಷ್ಟಿದ್ದು, ಈಗಿನ ಯುವಜನತೆ ಅದಕ್ಕೆ ತಕ್ಕಂತೆ ಸಜ್ಜಾಗಬೇಕು’ ಎಂದು ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಸಲಹೆ ನೀಡಿದರು.

ಇಲ್ಲಿನ ಯುವರಾಜ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ 2025–26ನೇ ಸಾಲಿನ ಜ್ಞಾನವಾಹಿನಿ ಸಮಿತಿ, ಕ್ರೀಡೆ, ಎನ್ಎಸ್ಎಸ್ ಹಾಗೂ ಎನ್ಸಿಸಿ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸರ್ಕಾರಿ ನೌಕರಿ ಲಭಿಸದೇ ಇರುವುದೇ ನಿರುದ್ಯೋಗ ಎಂದು ಬಹಳಷ್ಟು ಮಂದಿ ಭಾವಿಸಿದ್ದಾರೆ. ಕೆಲಸ ಮಾಡುವ ಮನಸ್ಥಿತಿಯವರಿಗೆ ಖಾಸಗಿ ವಲಯದಲ್ಲಿ ಸಾಕಷ್ಟು ಅವಕಾಶಗಳಿವೆ. ಸರ್ಕಾರಿ ನೌಕರಿಗಾಗಿಯೇ ಕಾಯುವ ಬದಲಿಗೆ, ಸಿಗುವ ಕೆಲಸದಲ್ಲೇ ಮುಂದೆ ಬರುವುದಕ್ಕೆ ಸಿದ್ಧವಾಗಬೇಕು. ಸಮಯ ವ್ಯರ್ಥ ಮಾಡದೇ, ಮಾದಕವಸ್ತು ವ್ಯಸನಕ್ಕೆ ಬಲಿಯಾಗದೇ ಉತ್ತಮ ಬದುಕು ಕಟ್ಟಿಕೊಳ್ಳಲು ಸರಿಯಾದ ದಾರಿಯಲ್ಲಿ ಸಾಗಬೇಕು’ ಎಂದರು.

‘ಇಂದಿನ ಯುವಜನರು ಖಾಸಗಿ ಕಂಪನಿಗಳಲ್ಲಿ ಕೆಲಸಕ್ಕೆ ನಿರಾಸಕ್ತಿ ವಹಿಸುತ್ತಿರುವುದು, ಸರ್ಕಾರ ಮೊದಲಾದವುಗಳಿಂದ ಲಭ್ಯವಿರುವ ಕೌಶಲ ತರಬೇತಿ ಪಡೆಯುವುದಕ್ಕೂ ಆಸಕ್ತಿ ತೋರದಿರುವುದು ಕಂಡುಬರುತ್ತಿದೆ. ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶವೊಂದರಲ್ಲೇ ಸಹಸ್ರಾರು ಉದ್ಯೋಗ ಖಾಲಿ ಇವೆ ಎಂಬ ಮಾಹಿತಿ ಇದೆ. ಇದಕ್ಕೆ ತಕ್ಕುದಾದ ಜ್ಞಾನ ಮತ್ತು ಕೌಶಲವನ್ನು ಬೆಳೆಸಿಕೊಳ್ಳಬೇಕು. ಆಗ, ಉದ್ಯೋಗಕ್ಕೆ ಪರದಾಡುವ ಪ್ರಮೇಯ ಬರುವುದಿಲ್ಲ’ ಎಂದು ಪ್ರತಿಪಾದಿಸಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್. ಮಹದೇವಮೂರ್ತಿ, ಆಡಳಿತಾಧಿಕಾರಿ ಪ್ರೊ.ಎಚ್.ಎಸ್. ಜಯಂತ್, ಜ್ಞಾನವಾಹಿನಿ ಸಮಿತಿ ಸಂಚಾಲಕ ಸಿ.ಡಿ. ಪರಶುರಾಮ್, ಪ್ರತಿಭಾನ್ವೇಷಣೆ ಸಹಸಂಚಾಲಕಿ ರೂಬಿ ಸೆಲೆಸ್ಟಿನಾ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-39-1086281175

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.