ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

Last Updated 21 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಭಾಗ– 63

856.ಸಂವಿಧಾನದ ಯಾವ ಅನುಚ್ಛೇದ ರಾಜ್ಯಗಳು ಗ್ರಾಮ ಪಂಚಾಯತ್‌ ವ್ಯವಸ್ಥೆಯನ್ನು ಸಂಘಟಿಸುವ ಬಗ್ಗೆ ವಿವರಿಸುತ್ತದೆ.

ಎ) ಅನುಚ್ಛೇದ 40

ಬಿ) ಅನುಚ್ಛೇದ 42

ಸಿ) ಅನುಚ್ಛೇದ 37

ಡಿ) ಅನುಚ್ಛೇದ 39

857. ಸಂವಿಧಾನದ ರಾಜ್ಯದ ನಿರ್ದೇಶಕ ತತ್ವಗಳಿಗೆ ಸಂಬಂಧಿಸಿದಂತೆ ತಪ್ಪಾದ ಹೇಳಿಕೆಯನ್ನು ಆಯ್ಕೆಮಾಡಿ.

ಎ) ಭಾರತದ ಸಂವಿಧಾನದ ಭಾಗ IV ರಲ್ಲಿವೆ

ಬಿ) ಐರ್ಲೆಂಡಿನ ಸಂವಿಧಾನದಿಂದ ಪ್ರೇರಣೆ ಪಡೆದಿದೆ

ಸಿ) ನ್ಯಾಯಾಂಗದ ಮೂಲಕ ಸಮರ್ಥಿಸಲಾಗದ ನಾಗರಿಕ ಹಕ್ಕುಗಳೆಂದು ತಿಳಿಯಲಾಗಿದೆ

ಡಿ) ಅವುಗಳನ್ನು ತಿದ್ದುಪಡಿ ಮಾಡಿಲ್ಲ

858. ರಾಜ್ಯಸಭೆಯ ಸದಸ್ಯರು ಇದಕ್ಕೆ ಸಂಬಂಧಿಸಿಲ್ಲ.

1. ಸಾರ್ವಜನಿಕ ಲೆಕ್ಕ ಸಮಿತಿ 2. ಅಂದಾಜು ಸಮಿತಿ

3. ಸಾರ್ವಜನಿಕ ಸ್ವಾಮ್ಯಗಳ ಮೇಲಿನ ಸಮಿತಿ

ಸರಿಯಾದ ಉತ್ತರ ಆಯ್ಕೆಮಾಡಿ

ಎ) 1 ಮತ್ತು 3

ಬಿ) 2 ಮಾತ್ರ

ಸಿ) 3 ಮಾತ್ರ

ಡಿ) 1 ಮತ್ತು 2

859. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ

1. ಲೋಕಸಭಾಧ್ಯಕ್ಷರ ಚುನಾವಣೆಗೆ ದಿನಾಂಕವನ್ನು ರಾಷ್ಟ್ರಪತಿಗಳು ನಿಗದಿಪಡಿಸುತ್ತಾರೆ

2. ಲೋಕಸಭಾಧ್ಯಕ್ಷರು ರಾಷ್ಟ್ರಪತಿಗಳಿಗೆ ರಾಜೀನಾಮೆ ಪತ್ರ ನೀಡುವುದರ ಮೂಲಕ ತಮ್ಮ ಅಧಿಕಾರ ತ್ಯಜಿಸಬಹುದು

ಸರಿಯಾದ ಉತ್ತರ ಆಯ್ಕೆಮಾಡಿ

ಎ) 1 ಮಾತ್ರ ಸರಿ

ಬಿ) 2 ಮಾತ್ರ ಸರಿ

ಸಿ) 1 ಮತ್ತು 2 ಸರಿ

ಡಿ) 1 ಮತ್ತು 2 ತಪ್ಪು

860. ರಾಜ್ಯ ಲೋಕಸೇವಾ ಆಯೋಗದ ಸದಸ್ಯರನ್ನು ಅನುಚಿತ ವರ್ತನೆ ಆಧಾರದ ಮೇಲೆ ತೆಗೆದು ಹಾಕುವುದು ಇವರಿಂದ ವಿಚಾರಣೆಯಾದ ನಂತರ

ಎ) ರಾಷ್ಟ್ರಪತಿಗಳು ನೇಮಕ ಮಾಡಿದ ಸಮಿತಿ

ಬಿ) ಭಾರತದ ಸರ್ವೋಚ್ಚ ನ್ಯಾಯಾಲಯ

ಸಿ) ಉಚ್ಚ ನ್ಯಾಯಾಲಯ

ಡಿ) ರಾಜ್ಯದ ರಾಜ್ಯಪಾಲರು ನೇಮಕ ಮಾಡಿದ ಸಮಿತಿ

861. ಸಂವಿಧಾನದ ಯಾವ ಭಾಗದಲ್ಲಿ ಗಾಂಧೀಜಿಯವರ ತತ್ವಗಳನ್ನು ಅಳವಡಿಸಲಾಗಿದೆ?

ಎ) ಮೂಲಭೂತ ಹಕ್ಕುಗಳು

ಬಿ) ಮೂಲಭೂತ ಕರ್ತವ್ಯಗಳು

ಸಿ) ಪೀಠಿಕೆ

ಡಿ) ನಿರ್ದೇಶಕ ತತ್ವಗಳು

862. ಮೂಲಭೂತ ಹಕ್ಕುಗಳು ಉಲ್ಲಂಘನೆಯಾದಾಗ ಒಬ್ಬ ನಾಗರಿಕ ಯಾವ ನ್ಯಾಯಾಲಯದ ಮೊರೆ ಹೋಗಬಹುದು?

ಎ) ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ

ಬಿ) ಜಿಲ್ಲಾ ಮ್ಯಾಜಿಸ್ಟ್ರೇಟ್‌ ಕಚೇರಿ

ಸಿ) ಸೆಷನ್ಸ್‌ ನ್ಯಾಯಾಲಯ

ಡಿ) ಉಚ್ಚ ನ್ಯಾಯಾಲಯ

863. ಈ ಕೆಳಗಿನ ಯಾವವು ಚುನಾವಣಾ ಆಯೋಗದ ಅಧಿಕಾರ ಮತ್ತು ಕಾರ್ಯಗಳಾಗಿವೆ?

1. ರಾಜಕೀಯ ಪಕ್ಷಗಳನ್ನು ನೊಂದಾಯಿಸಿಕೊಳ್ಳುವುದು

2. ರಾಜಕೀಯ ಪಕ್ಷಗಳಿಗೆ ಮಾನ್ಯತೆ ನೀಡುವುದು

3. ರಾಜಕೀಯ ಪಕ್ಷಗಳಿಗೆ ಚುನಾವಣಾ ಚಿಹ್ನೆಗಳನ್ನು ನೀಡುವುದು

4. ರಾಜಕೀಯ ಪಕ್ಷಗಳಿಗೆ ರಾಷ್ಟ್ರೀಯ ಅಥವಾ ಪ್ರಾದೇಶಿಕ ಪಕ್ಷಗಳ ಸ್ಥಾನಮಾನ ನೀಡುವುದು

ಸರಿಯಾದ ಉತ್ತರ ಆಯ್ಕೆಮಾಡಿ

ಎ) 1, 2 ಮತ್ತು 3

ಬಿ) 2, 3 ಮತ್ತು 4

ಸಿ) 1, 3 ಮತ್ತು 4

ಡಿ) 1, 2, 3 ಮತ್ತು 4

864. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ.

1. ಭಾರತದ ಅಟಾರ್ನಿ ಜನರಲ್‌ ಅವರನ್ನು ರಾಷ್ಟ್ರಪತಿ ಮಂತ್ರಿಮಂಡಲದ ಸಲಹೆಯ ಮೇರೆಗೆ ನೇಮಿಸುತ್ತಾರೆ.

2. ಇವರ ಅಧಿಕಾರ ಅವಧಿ 6 ವರ್ಷ ಅಥವಾ 65 ವರ್ಷ ಪ್ರಾಯ ಯಾವುದು ಮುಂಚಿತವೋ ಅದು.

ಸರಿಯಾದ ಹೇಳಿಕೆ ಆಯ್ಕೆಮಾಡಿ

ಎ) 1 ಮಾತ್ರ ಸರಿ

ಬಿ) 2 ಮಾತ್ರ ಸರಿ

ಸಿ) 1 ಮತ್ತು 2 ಸರಿ

ಡಿ) 1 ಮತ್ತು 2 ತಪ್ಪು

865. ರಾಷ್ಟ್ರಪತಿಯು ತನ್ನ ರಾಜೀನಾಮೆ ಪತ್ರವನ್ನು ಈ ಕೆಳಗಿನ ಯಾರಿಗೆ ನೀಡುತ್ತಾರೆ?

ಎ) ಉಪರಾಷ್ಟ್ರಪತಿಗಳು

ಬಿ) ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿಗಳಿಗೆ

ಸಿ) ಪ್ರಧಾನಮಂತ್ರಿಗಳಿಗೆ

ಡಿ) ಇದಾವುದು ಅಲ್ಲ

866. ರಾಜ್ಯಸಭಾ ಸಭಾಪತಿಯವರನ್ನು ಈ ಕೆಳಗಿನವರು ಚುನಾಯಿಸುತ್ತಾರೆ.

ಎ) ರಾಜ್ಯಸಭೆಯ ಚುನಾಯಿತ ಸದಸ್ಯರಿಂದ

ಬಿ) ರಾಜ್ಯಸಭೆಯ ಎಲ್ಲಾ ಸದಸ್ಯರಿಂದ

ಸಿ) ಸಂಸತ್ತಿನ ಚುನಾಯಿತ ಸದಸ್ಯರಿಂದ

ಡಿ) ಸಂಸತ್ತಿನ ಎಲ್ಲ ಸದಸ್ಯರಿಂದ

867. ಭಾರತದಲ್ಲಿ ‘ರಾಜಕೀಯದತ್ತ ಅಧಿಕಾರ’ದ ಮೂಲ

ಎ) ಸಂವಿಧಾನ

ಬಿ) ಸಂಸತ್ತು

ಸಿ) ಶಾಸಕಾಂಗ

ಡಿ) ಪ್ರಜೆಗಳು

868. ಭಾರತವನ್ನು ಒಂದು ಗಣರಾಜ್ಯ ಎಂದು ಕರೆಯಲಾಗುತ್ತದೆ ಏಕೆಂದರೆ

ಎ) ಮಂತ್ರಿಗಳು ರಾಷ್ಟ್ರಪತಿಯ ಇಷ್ಟದ ಮೇಲೆ ಅಧಿಕಾರ ಹೊಂದಿರುತ್ತಾರೆ

ಬಿ) ಮಂತ್ರಿಗಳು ಸಂಸತ್ತಿಗೆ ಉತ್ತರದಾಯಿಯಾಗಿರುತ್ತಾರೆ

ಸಿ) ಭಾರತದ ರಾಷ್ಟ್ರಪತಿ ಹುದ್ದೆಯು ಚುನಾಯಿತ ಹುದ್ದೆಯಾಗಿದೆ

ಡಿ) ಭಾರತದಲ್ಲಿ ಜನರು ರಾಜ್ಯಾಡಳಿತದ ಸಾರ್ವಭೌಮತ್ವವನ್ನು ಹೊಂದಿದ್ದಾರೆ

869. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ.

1. ಸಂವಿಧಾನವು ಮೂಲಭೂತ ಹಕ್ಕುಗಳ ರಕ್ಷಣೆಯ ಜವಾಬ್ದಾರಿಯನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ನೀಡಿದೆ

2. ರಾಷ್ಟ್ರಪತಿಗಳು ಮೂಲಭೂತ ಹಕ್ಕುಗಳನ್ನು ತಾತ್ಕಾಲಿಕವಾಗಿ ರದ್ದು ಮಾಡುವ ಅಧಿಕಾರ ಹೊಂದಿರುತ್ತಾರೆ

ಸರಿಯಾದ ಹೇಳಿಕೆ ಆಯ್ಕೆಮಾಡಿ

ಎ) 1 ಮಾತ್ರ ಸರಿ

ಬಿ) 2 ಮಾತ್ರ ಸರಿ

ಸಿ) 1 ಮತ್ತು 2 ಸರಿ

ಡಿ) 1 ಮತ್ತು 2 ತಪ್ಪು

870. ಸಂವಿಧಾನ ರಚನಾ ಸಭೆಯು ಈ ಕೆಳಗಿನಂತೆ ರಚನೆಯಾಗಿತ್ತು

ಎ) ಪರೋಕ್ಷವಾಗಿ ಚುನಾಯಿತಗೊಂಡ ಸದಸ್ಯರಿಂದ

ಬಿ) ನಾಮಕರಣಗೊಂಡ ಸದಸ್ಯರಿಂದ

ಸಿ) ಎ ಮತ್ತು ಬಿ ಡಿ) ಕೇವಲ

ಚುನಾಯಿತ ಸದಸ್ಯರಿಂದ

ಭಾಗ 62ರ ಉತ್ತರಗಳು: 841. ಸಿ, 842. ಬಿ, 843. ಎ, 844. ಬಿ, 845. ಡಿ, 846. ಡಿ, 847. ಬಿ, 848. ಬಿ, 849. ಎ, 840. ಎ, 851. ಎ, 852. ಬಿ, 853. ಡಿ, 854. ಡಿ, 855. ಸಿ

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT