ಶನಿವಾರ, ಸೆಪ್ಟೆಂಬರ್ 25, 2021
22 °C

ಭಾಗ– 15: ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

201. ‘ಭಾರತ ಬಿಟ್ಟು ತೊಲಗಿ’ ಚಳವಳಿ ಆರಂಭವಾದಾಗ ಭಾರತದಲ್ಲಿ ಗವರ್ನರ್ ಜನರಲ್ ಆಗಿದ್ದವರು ಯಾರು?

ಎ) ಲಾರ್ಡ್ ಮೌಂಟ್ ಬ್ಯಾಟನ್

ಬಿ) ಲಾರ್ಡ್ ಲಿನ್ಲಿಥ್ಗೋ

ಸಿ) ಲಾರ್ಡ್ ಕರ್ಜನ್

ಡಿ) ಲಾರ್ಡ್ ಮೇಯೋ

202. ‘ಸೈಮನ್ ಗೋ ಬ್ಯಾಕ್‌’ ಚಳವಳಿಯಲ್ಲಿ ಪೊಲೀಸ್ ಲಾಟಿಗೆ ಬಲಿಯಾದ ವ್ಯಕ್ತಿ ಯಾರು?

ಎ) ಗೋಪಾಲಕೃಷ್ಣ ಗೋಖಲೆ

ಬಿ) ಬಾಲಾ ಗಂಗಾಧರ ತಿಲಕ್

ಸಿ) ಲಾಲಾ ಲಜಪತ್ ರಾಯ್

ಡಿ) ಬಿಪಿನ್‌ ಚಂದ್ರ ಪಾಲ್‌

203. ಮಹಾತ್ಮಾ ಗಾಂಧೀಜಿ ದಂಡಿಯಾತ್ರೆ ಪ್ರಾರಂಭಿಸಿದ ವರ್ಷ ಯಾವುದು?

ಎ) 1929

ಬಿ) 1930

ಸಿ) 1931

ಡಿ) 1932

204. ರಾಜ್ಯಪಾಲರು ಹುದ್ದೆಯಲ್ಲಿದ್ದಾಗ ಮರಣ ಹೊಂದಿದರೆ, ಅವರ ಸ್ಥಾನವನ್ನು ತಕ್ಷಣ ಯಾರು ನಿರ್ವಹಿಸುತ್ತಾರೆ?

ಎ) ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ

ಬಿ) ರಾಜ್ಯದ ಮುಖ್ಯಮಂತ್ರಿ

ಸಿ) ರಾಷ್ಟ್ರಪತಿಗಳು ನಿಯುಕ್ತಿಗೊಳಿಸುವ ವ್ಯಕ್ತಿ

ಡಿ) ಪಕ್ಕದ ರಾಜ್ಯದ ರಾಜ್ಯಪಾಲರು

205. ಲೋಕಸಭೆ ವಿಸರ್ಜನೆಗೊಂಡಾಗ, ಯಾವ ವ್ಯಕ್ತಿ, ಮುಂದಿನ ಲೋಕಸಭೆಯ ಪ್ರಥಮ ಸಭೆಗಿಂತ ಮೊದಲು ತನ್ನ ಸ್ಥಾನ ತ್ಯಜಿಸುವುದಿಲ್ಲ?

ಎ) ಪ್ರಧಾನಮಂತ್ರಿ

ಬಿ) ಹಣಕಾಸು ಮಂತ್ರಿ

ಸಿ) ರಕ್ಷಣಾ ಮಂತ್ರಿ

ಡಿ) ಲೋಕಸಭೆ ಅಧ್ಯಕ್ಷ

206. ಭಾರತದ ಸಂವಿಧಾನದಲ್ಲಿ ಉಪ-ಪ್ರಧಾನಮಂತ್ರಿ ಹುದ್ದೆಗೆ ಅವಕಾಶ ಇದೆಯೇ?

ಎ) ಹೌದು

ಬಿ) ಇಲ್ಲ

ಸಿ) ತುರ್ತು ಪರಿಸ್ಥಿತಿಯಲ್ಲಿ ಇದೆ

ಡಿ) ಹಣಕಾಸಿನ ತುರ್ತು ಪರಿಸ್ಥಿತಿಯಲ್ಲಿ ಇದೆ

207. ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಮೂರ್ತಿ ಎಷ್ಟು ವರ್ಷಗಳವರೆಗೆ ಅಧಿಕಾರದಲ್ಲಿ ಇರುತ್ತಾರೆ?

ಎ) 2 ವರ್ಷ

ಬಿ) 3 ವರ್ಷ

ಸಿ) 1 ವರ್ಷ

ಡಿ) 2.5 ವರ್ಷ

208. ಭಾರತದ ರಾಷ್ಟ್ರಪತಿಗೆ ಪ್ರತಿಜ್ಞಾ ವಿಧಿ ಬೋಧಿಸುವವರು ಯಾರು?

ಎ) ಲೋಕಸಭೆ ಅಧ್ಯಕ್ಷರು

ಬಿ) ಭಾರತದ ಪ್ರಧಾನಮಂತ್ರಿ

ಸಿ) ಭಾರತದ ಉಪ-ರಾಷ್ಟ್ರಪತಿ

ಡಿ) ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ

209. ಸಂಸತ್ತಿನ ಸದಸ್ಯನಲ್ಲದ ವ್ಯಕ್ತಿಯು, ಮಂತ್ರಿಯಾಗಿ ನೇಮಕವಾದಲ್ಲಿ, ಎಷ್ಟು ಸಮಯದ ಒಳಗೆ ಸಂಸತ್ತಿನ ಯಾವುದಾದರೂ ಸಭೆಯ ಸದಸ್ಯನಾಗಿ ಆಯ್ಕೆಯಾಗಬೇಕು?

ಎ) 2 ತಿಂಗಳು ಬಿ) 6 ತಿಂಗಳು

ಸಿ) 9 ತಿಂಗಳು ಡಿ) 1 ವರ್ಷ

210. ಭಾರತದ ಯಾವ ಪ್ರಧಾನಮಂತ್ರಿಯು ಸಂಸತ್ತನ್ನು ಯಾವತ್ತೂ ಎದುರಿಸಲಿಲ್ಲ?

ಎ) ಮೊರಾರ್ಜಿ ದೇಸಾಯಿ

ಬಿ) ಲಾಲ್ ಬಹದ್ದೂರ್ ಶಾಸ್ತ್ರಿ

ಸಿ) ಐ.ಕೆ. ಗುಜ್ರಾಲ್

ಡಿ) ಚರಣ್‌ಸಿಂಗ್

211. ಕರ್ನಾಟಕ ಹೆಸರಾಂತ ವ್ಯಕ್ತಿ ಗಿರೀಶ್ ಕಾರ್ನಾಡ್ ಈ ಕೆಳಗಿನ ಯಾವುದರಲ್ಲಿ ಪ್ರಸಿದ್ಧರು?

ಎ) ರಂಗಭೂಮಿ ಮತ್ತು ಸಾಹಿತ್ಯ

ಬಿ) ಕೈಗಾರಿಕೆ

ಸಿ) ವೈಮಾನಿಕ ವಿಜ್ಞಾನ

ಡಿ) ಆರೋಗ್ಯ ಸೇವೆ

212. ಜಾಗತಿಕ ಮಾನವ ಹಕ್ಕುಗಳ ದಿನವನ್ನು ಎಂದು ಆಚರಿಸಲಾಗುತ್ತದೆ?

ಎ) ಡಿಸೆಂಬರ್ 10

ಬಿ) ಅಕ್ಟೋಬರ್ 2

ಸಿ) ಜೂನ್ 5

ಡಿ) ಜನವರಿ 31

213. ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ, ಕ್ರಮವಾಗಿ ಕರ್ನಾಟಕದ ಸ್ಥಾನಗಳೆಷ್ಟು?

ಎ) 22 ಮತ್ತು 13

ಬಿ) 28 ಮತ್ತು 12

ಸಿ) 28 ಮತ್ತು 13

ಡಿ) 27 ಮತ್ತು 12

214. ‘ವರ್ಲ್ಡ್ ವೈಡ್ ವೆಬ್’ ಅನ್ನು ಕಂಡುಹಿಡಿದವರು ಯಾರು?

ಎ) ಟಿಮ್ ಬರ್ನರ್ ಲೀ

ಬಿ) ಅಲೆಕ್ಸಾಂಡರ್‌ ಬೆನ್

ಸಿ) ಜೆ.ಸಿ.ಆರ್. ಲಿಕ್ಲಿಡರ್

ಡಿ) ಅಲೆಕ್ಸಾಂಡರ್‌ ಗ್ರಹಾಂಬೆಲ್

215. ಸೋನಾಲಿಕಾ ಮತ್ತು ಕಲ್ಯಾಣಸೋನೆ ಇವುಗಳು ಯಾವ ಬೆಳೆಯ ತಳಿಗಳು?

ಎ) ಗೋಧಿ

ಬಿ) ಭತ್ತ

ಸಿ) ನವಣೆ

ಡಿ) ಕೋಡುಕಾಯಿ

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು