ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

Last Updated 12 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಭಾಗ– 75

1026. ಮೊಹೆಂಜೊದಾರೊದಲ್ಲಿ ಶೋಧಿಸಲ್ಪಟ್ಟ ‘ನೃತ್ಯ ಮಾಡುತ್ತಿರುವ ಹುಡುಗಿ’ ಪ್ರತಿಮೆ ಯಾವುದರಿಂದ ಮಾಡಲ್ಪಟ್ಟಿದೆ?

ಎ) ಚಿನ್ನ

ಬಿ) ತಾಮ್ರ

ಸಿ) ಬೆಳ್ಳಿ

ಡಿ) ಹಿತ್ತಾಳೆ

1027. ಫರಕ್ಕಾ ಅಣೆಕಟ್ಟೆಯನ್ನು ಯಾವ ನದಿಯ ಅಡ್ಡಕ್ಕೆ ನಿರ್ಮಿಸಲಾಗಿದೆ?

ಎ) ಗಂಗಾ

ಬಿ) ಕಾವೇರಿ

ಸಿ) ಗೋದಾವರಿ

ಡಿ) ಕೃಷ್ಣಾ

1028. ಡೊಂಕು ಡೊಂಕಾಗಿ ಹರಿಯುವ ನದಿಯೊಂದು ಮುಖ್ಯ ಧಾರೆಯಿಂದ ಬೇರ್ಪಡೆಗೊಂಡಾಗ ನಿರ್ಮಾಣಗೊಳ್ಳುವ ಸರೋವರವನ್ನು ಹೀಗೆನ್ನುತ್ತಾರೆ.

ಎ) ಆಕ್ಸ್-ಬೋ ಸರೋವರ

ಬಿ) ಗ್ಲೇಸಿಯರ್ ಸರೋವರ

ಸಿ) ಲಗೂನ್ಸ್ (ಕೃತಕ ಕೊಳಗಳು)

ಡಿ) ಮಾನವ ನಿರ್ಮಿತ ಸರೋವರಗಳು

1029. ವಿಶ್ವವಿಖ್ಯಾತ ಚೆನ್ನಕೇಶವ ದೇವಾಲಯ ಇಲ್ಲಿದೆ?

ಎ) ಬೇಲೂರು

ಬಿ) ಗದಗ

ಸಿ) ತುಮಕೂರು

ಡಿ) ಹಳೇಬೀಡು

1030. ವಿಜಯನಗರ ಸಾಮ್ರಾಜ್ಯವು-------ರಲ್ಲಿ ಸ್ಥಾಪಿಸಲ್ಪಟ್ಟಿತು.

ಎ) 1401

ಬಿ) 1298

ಸಿ) 1565

ಡಿ) 1336

1031. ದಕ್ಷಿಣ ಭಾರತದಲ್ಲಿ ಪ್ರಥಮ ಸ್ವತಂತ್ರ ಇಸ್ಲಾಮಿಕ್‌ ಸಾಮ್ರಾಜ್ಯ ಯಾವುದಾಗಿತ್ತು?

ಎ) ಬಹುಮನಿ ಸಾಮ್ರಾಜ್ಯ

ಬಿ) ಬಿಜಾಪುರ ಸುಲ್ತಾನರು

ಸಿ) ಶ್ರೀರಂಗಪಟ್ಟಣದ ಸುಲ್ತಾನರು

ಡಿ) ಸವಣೂರಿನ ನವಾಬರು

1032. ಕೆಳಗಿನವುಗಳಲ್ಲಿ ಯಾವುದು ಒಂದು ಸಂವೇದನಾ ಅಂಗವಲ್ಲ?

ಎ) ಕಣ್ಣುಗಳು

ಬಿ) ಕಿವಿಗಳು

ಸಿ) ಮೂಗು

ಡಿ) ಕರುಳುವಾಳ (ಅಪೆಂಡಿಕ್ಸ್)

1033. ಗಾಳಿಯ ವೇಗವನ್ನು ಅಳೆಯುವ ಉಪಕರಣವನ್ನು ಹೆಸರಿಸಿ.

ಎ) ಹೈಡ್ರೋಮೀಟರ್

ಬಿ) ಉಡೋಮೀಟರ್

ಸಿ) ಬ್ಯಾರೋಮೀಟರ್

ಡಿ) ಅನಿಮೋಮೀಟರ್

1034. ಯಾವ ಗ್ರಹವು ಕೆಂಪು ಗ್ರಹ ಎಂದು ಕರೆಯಲ್ಪಡುತ್ತದೆ?

ಎ) ಗುರುಗ್ರಹ

ಬಿ) ಬುಧಗ್ರಹ

ಸಿ) ಮಂಗಳಗ್ರಹ

ಡಿ) ಶುಕ್ರಗ್ರಹ

1035. ಕೆಳಗಿನ ಬಲಗಳಲ್ಲಿ ಯಾವುದು ಗಾಳಿಯು ಸಾಮಾನ್ಯ ಪಥದಿಂದ ವಿಚಲನಗೊಳ್ಳಲು ಕಾರಣವಾಗುತ್ತದೆ?

ಎ) ಸಂವರ್ಧಕ (ಕಂಪ್ರೆಶನಲ್) ಬಲ

ಬಿ) ಅನ್ವಯಿಕ ಬಲ

ಸಿ) ಕೋರಿಯೋಲಿಸ್‌ ಪರಿಣಾಮ

ಡಿ) ಗುರುತ್ವಾಕರ್ಷಣ ಬಲ

1036. ಕೆಳಗಿನ ಯಾವ ರಾಜ್ಯಗಳ ಮೂಲಕ ಕಾವೇರಿ ನದಿಯು ಹರಿಯುವುದಿಲ್ಲ?

ಎ) ಕೇರಳ

ಬಿ) ತಮಿಳುನಾಡು

ಸಿ) ಪುದುಚೇರಿ

ಡಿ) ಆಂಧ್ರಪ್ರದೇಶ

1037. ರಾಮಾನುಜಾಚಾರ್ಯರು ಈ ಕಾಲದಲ್ಲಿ ಜೀವಿಸಿದ್ದರು

ಎ) ಹೊಯ್ಸಳರ ಕಾಲ

ಬಿ) ವಿಜಯನಗರ ಕಾಲ

ಸಿ) ಮೈಸೂರು ಅರಸರ ಕಾಲ

ಡಿ) ಗಂಗರ ಕಾಲ

1038. ಲೋಕಾಯುಕ್ತ ಬಿಲ್ ಅಸೆಂಬ್ಲಿಯಲ್ಲಿ ಇವರಿಂದ ಪರಿಚಯಿಸಲ್ಪಟ್ಟಿತು.

ಎ) ಅಬ್ದುಲ್‌ ಹಕೀಂ

ಬಿ) ಎನ್.ವೆಂಕಟಾಚಲ

ಸಿ) ಸಂತೋಷ್‌ ಹೆಗ್ಡೆ

ಡಿ) ರಾಮಕೃಷ್ಣ ಹೆಗಡೆ

1039. ಚಂದ್ರಗ್ರಹಣ ಯಾವಾಗ ಸಂಭವಿಸುತ್ತದೆ?

ಎ) ಭೂಮಿಯು ಸೂರ್ಯ ಮತ್ತು ಚಂದ್ರರ ನಡುವೆ ಇರುವಾಗ

ಬಿ) ಸೂರ್ಯನು ಭೂಮಿ ಮತ್ತು ಚಂದ್ರನ ನಡುವೆ ಇರುವಾಗ

ಸಿ) ಚಂದ್ರನು ಭೂಮಿ ಮತ್ತು ಸೂರ್ಯನ ನಡುವೆಇರುವಾಗ

ಡಿ) ಭೂಮಿಯು ಸೂರ್ಯ ಮತ್ತು ಇತರ ಆಕಾಶಕಾಯಗಳ ನಡುವೆ ಇರುವಾಗ

1040. ವಿಶ್ವದ ಅತ್ಯಂತ ದೊಡ್ಡ ಸೌರಪಾರ್ಕ್ ‘ಶಕ್ತಿಸ್ಥಳ’ ಕರ್ನಾಟಕದ ಯಾವ ಜಿಲ್ಲೆಯಲ್ಲಿ ನಿರ್ಮಾಣಗೊಳ್ಳುತ್ತಿದೆ?

ಎ) ಬೆಳಗಾವಿ

ಬಿ) ಚಿತ್ರದುರ್ಗ

ಸಿ) ಕಲಬುರಗಿ

ಡಿ) ತುಮಕೂರು

ಭಾಗ 74ರ ಉತ್ತರಗಳು: 1011. ಡಿ, 1012. ಬಿ, 1013. ಸಿ, 1014. ಎ, 1015. ಸಿ, 1016. ಎ, 1017. ಬಿ, 1018. ಸಿ, 1019. ಎ, 1020. ಬಿ, 1021. ಸಿ, 1022. ಬಿ, 1023. ಡಿ, 1024. ಬಿ, 1025. ಬಿ

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT