ಗುರುವಾರ , ಸೆಪ್ಟೆಂಬರ್ 23, 2021
27 °C

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾಗ– 55

741)ಪ್ರತಿ 3 ಲೋಹದ ನಾಣ್ಯಗಳಿಗೆ 1 ಚಿನ್ನದ ನಾಣ್ಯ ಇತ್ತು. 10 ಹೊಸ ಚಿನ್ನದ ನಾಣ್ಯಗಳನ್ನು ಸೇರಿಸಿದಾಗ ಚಿನ್ನ ಹಾಗೂ ಲೋಹದ ನಾಣ್ಯಗಳು 1:0 ರಷ್ಟಾದವು. ಹಾಗಾದರೆ, ಈಗ ಅಲ್ಲಿರುವ ಒಟ್ಟು ನಾಣ್ಯಗಳ ಸಂಖ್ಯೆ.

ಎ) 90 ಬಿ) 80

ಸಿ) 60 ಡಿ) 50

742) ಒಂದು ಪರೀಕ್ಷೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಭೌತಶಾಸ್ತ್ರ ಅಥವಾ ಗಣಿತಶಾಸ್ತ್ರ ಅಥವಾ ಎರಡೂ ತೆಗೆದುಕೊಂಡಿದ್ದರು. ಭೌತಶಾಸ್ತ್ರವನ್ನು ತೆಗೆದುಕೊಂಡುವರು ಶೇ 65.8 ರಷ್ಟು ಇದ್ದರು. ಗಣಿತಶಾಸ್ತ್ರವನ್ನು ತೆಗೆದುಕೊಂಡುವರು ಶೇ 59.2 ರಷ್ಟು ಇದ್ದರು. ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ಎಷ್ಟು?

ಎ) 750 ಬಿ) 500

ಸಿ) 250 ಡಿ) 125

743) 12 ರಲ್ಲಿ ಬಿಡಿ ಸ್ಥಾನದ ಅಂಕಿ ಯಾವುದು?

ಎ) 1 ಬಿ) 3

ಸಿ) 6 ಡಿ) 9

744) ರಾಜು ತನ್ನ ಮನೆಯಿಂದ ಶಾಲೆಗೆ ಬೈಸಿಕಲ್‌ನಲ್ಲಿ ಹೋಗುವನು. ಅವನು ಮೊದಲ ನಿಮಿಷದಲ್ಲಿ 125 ಮೀ ದೂರವನ್ನು, ಎರಡನೇ ನಿಮಿಷದಲ್ಲಿ 135 ಮೀ ದೂರವನ್ನು, 3 ನೇ ನಿಮಿಷದಲ್ಲಿ 145 ಮೀ ದೂರವನ್ನು ಕ್ರಮಿಸುತ್ತಾನೆ. ಇದೇ ಕ್ರಮದಲ್ಲಿ ಚಲಿಸಿ ಅವನು 10 ನಿಮಿಷಗಳಲ್ಲಿ ಶಾಲೆ ತಲುಪಿದರೆ ಆತನ ಮನೆಗೂ ಶಾಲೆಗೂ ಇರುವ ದೂರವೆಷ್ಟು?

ಎ) 1.4 ಕಿ.ಮೀ ಬಿ) 1.5 ಕಿ.ಮೀ

ಸಿ) 1.6 ಕಿ.ಮೀ ಡಿ) 1.7 ಕಿ.ಮೀ

745) ಒಬ್ಬ ವ್ಯಕ್ತಿಯು ಇಬ್ಬರು ಸಾಲ ನೀಡುವವರಿಂದ
₹ 2500 ಪಡೆಯುತ್ತಾನೆ. ಒಂದು ಸಾಲಕ್ಕೆ ಅವನು ವಾರ್ಷಿಕ ಶೇ 8 ರ ಸರಳಬಡ್ಡಿಯನ್ನು ಮತ್ತು ಇನ್ನೊಂದಕ್ಕೆ ವಾರ್ಷಿಕ ಶೇ 6 ರ ಸರಳ ಬಡ್ಡಿಯನ್ನು ಪಾವತಿಸಿಸುತ್ತಾನೆ. ಒಂದು ವರ್ಷಕ್ಕೆ ಅವನು ಒಟ್ಟು ಬಡ್ಡಿಯಾಗಿ ₹ 180 ಅನ್ನು ಪಾವತಿಸಿದಲ್ಲಿ ಎಷ್ಟು ಮೊತ್ತವನ್ನು ಶೇ 8 ರಂತೆ ಸಾಲ ಪಡೆಯುತ್ತಾನೆ?

ಎ) 1000 ಬಿ) 1200

ಸಿ) 1300 ಡಿ) 1500

746) ಸ್ವಲ್ಪವೂ ದೋಷವಿಲ್ಲದೆ ನಡೆಯುವ ಗಡಿಯಾರ 3:00 ಗಂಟೆಯ ಸಮಯ ತೋರುತ್ತದೆ. ಗಂಟೆಯನ್ನು ತೋರುವ ಮುಳ್ಳು 135 ಡಿಗ್ರಿಯಷ್ಟು ಚಲಿಸಿದಾಗ ವೇಳೆ ಎಷ್ಟಾಗಿರುತ್ತದೆ?

ಎ) 7:30 ಬಿ) 6:30

ಸಿ) 8:00 ಡಿ) 9:30

747) ಒಬ್ಬನ ವಯಸ್ಸು ಆತನ ಇಬ್ಬರು ಮಕ್ಕಳ ವಯಸ್ಸಿನ ಮೊತ್ತದ ಮೂರು ಪಟ್ಟಿದೆ. ಐದು ವರ್ಷಗಳ ನಂತರ, ಆತನ ವಯಸ್ಸು ಅವನ ಮಕ್ಕಳ ವಯಸ್ಸಿನ ಮೊತ್ತದ ಎರಡು ಪಟ್ಟಾಗಿರುತ್ತದೆ. ಹಾಗಿದ್ದರೆ, ತಂದೆಯ ಈಗಿನ ವಯಸ್ಸು ಎಷ್ಟು?

ಎ) 35 ವರ್ಷ ಬಿ) 40 ವರ್ಷ

ಸಿ) 45 ವರ್ಷ ಡಿ) 50 ವರ್ಷ

748) ವ್ಯಕ್ತಿಯೊಬ್ಬರು ₹ 400 ಬೆಲೆಯ ಸಕ್ಕರೆ ಕೊಂಡರು. ಅದರ ¾ ಭಾಗವನ್ನು ಶೇ 10 ರಷ್ಟು ನಷ್ಟಕ್ಕೆ ಮಾರಿದರು. ಉಳಿದಿದ್ದನ್ನು ಶೇ 10 ರಷ್ಟು ಲಾಭಕ್ಕೆ ಮಾರಿದರು, ಒಟ್ಟಾರೆ ಅವರಿಗೆ ನಷ್ಟ ಆದದ್ದು?

ಎ) ಶೇ 5 ನಷ್ಟ ಬಿ) ಶೇ 4 ನಷ್ಟ

ಸಿ) ಶೇ 5 ನಷ್ಟ ಡಿ) ಶೇ ನಷ್ಟ

749) ಒಂದು ಡಬ್ಬಿಯಲ್ಲಿ ₹ 1 ಹಾಗೂ ₹ 2 ರ ಒಟ್ಟು 50 ನಾಣ್ಯಗಳಿವೆ. ಅಲ್ಲಿರುವ ಒಟ್ಟು ಮೊತ್ತ ₹ 75 ಆದರೆ ₹ 1 ಹಾಗೂ 2 ರ ನಾಣ್ಯಗಳು ಕ್ರಮವಾಗಿ ಎಷ್ಟಿವೆ?

ಎ) 15 & 35 ಬಿ) 35 & 415

ಸಿ) 25 & 25 ಡಿ) 30 & 40

750) YEX, WHT, UKP, SNL, QQH, ___?

ಎ) OTC ಬಿ) OTB

ಸಿ) TOC ಡಿ) TOB

751) ತಮಿಳುನಾಡು ಸರ್ಕಾರ ನೇಮಿಸಿದ ಐದು ಸದಸ್ಯರ ಆರ್ಥಿಕ ಸಲಹಾ ಸಮಿತಿಯಲ್ಲಿ ಕೆಳಕಂಡವರು ಸದಸ್ಯರಾಗಿಲ್ಲ

ಎ) ರಘುರಾಮ್‌ ರಾಜನ್

ಬಿ) ಡಾ. ಅರವಿಂದ ಸುಬ್ರಹ್ಮಣಂ

ಸಿ) ಏಸ್ಥಿರ ಡೂಪ್ಲೊ

ಡಿ) ಬಿಮಲ್ ಜಲನ್

752) ಜಮ್ಮುಕಾಶ್ಮೀರದ ಪೀಪಲ್‌ ಅಲಯನ್ಸ್ ಫಾರ್ ಗುಪ್ಕರ್‌ ಡಿಕ್ಲೇರಷನ್‌ನಲ್ಲಿ ಇರದ ಪಕ್ಷ ಯಾವುದು?

ಎ) ಪಿಡಿಪಿ

ಬಿ) ನ್ಯಾಶನಲ್ ಕಾನ್ಪರೆನ್ಸ್

ಸಿ) ಸಿಪಿಐ-ಎಂ

ಡಿ) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್

753) ಕನ್ನಡ ಸಾಹಿತ್ಯ ಪರಿಷತ್ತು ನೀಡುವ ‘ನಾಲ್ವಡಿ ಶ್ರೀಕೃಷ್ಣ ರಾಜ ಒಡೆಯರ ದತ್ತಿ’ ಪ್ರಶಸ್ತಿಗೆ ಈ ವರ್ಷ ಯಾರು ಆಯ್ಕೆಯಾಗಿದ್ದಾರೆ?

ಎ) ಸಿದ್ಧಲಿಂಗಯ್ಯ

ಬಿ) ಡಾ. ಜಿ.ಎಸ್. ಕಾಪಸೆ

ಸಿ) ಡಾ. ಮೋಹನಆಳ್ವ

ಡಿ) ಡಾ. ಗುರುರಾಜ ಕಾಪಸೆ

754) ಕೋವಿಡ್ 3ನೇ ಅಲೆ ನಿಯಂತ್ರಣ ಮತ್ತು ಚಿಕಿತ್ಸಾ ಸಿದ್ಧತೆಗಳ ಅಧ್ಯಯನ ಸಮಿತಿ ಅಧ್ಯಕ್ಷರು ಯಾರು?

ಎ) ಡಾ. ಕೆ. ಸುಧಾಕರ

ಬಿ) ಡಾ. ದೇವಿಪ್ರಸಾದ ಶೆಟ್ಟಿ

ಸಿ) ಡಾ. ರವಿ

ಡಿ) ಡಾ. ಸುದರ್ಶನ ಬಲ್ಲಾಳ

755) ವಿಶ್ವದ ಪ್ರಥಮ ಕುಲಾಂತರಿ ರಬ್ಬರ್‌ ಸಸಿ ಎಲ್ಲಿ ನೆಡಲಾಯಿತು?

ಎ) ಕೇರಳ

ಬಿ) ಅಸ್ಸಾಂ

ಸಿ) ಅರುಣಾಚಲ ಪ್ರದೇಶ

ಡಿ) ಸಿಕ್ಕಿಂ

ಬಾಕ್ಸ್

ಭಾಗ – 54 ರ ಉತ್ತರ: 726. ಡಿ, 727. ಬಿ, 728. ಸಿ, 729. ಸಿ, 730. ಬಿ, 731. ಬಿ, 732. ಸಿ, 733. ಸಿ, 734. ಬಿ, 735. ಸಿ, 736. ಬಿ, 737. ಸಿ, 738. ಡಿ, 739. ಸಿ, 740. ಸಿ

 

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.