ಸೋಮವಾರ, ಜೂನ್ 21, 2021
29 °C

ಪ್ರಶ್ನೋತ್ತರ: ಸಾಮಾನ್ಯ ಅಧ್ಯಯನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

31)→ಡಾ. ಫಜಲ್ ಅಲಿ ಆಯೋಗವನ್ನು ಕೆಳಗಿನ ಯಾವ ವರ್ಷ ರಚಿಸಲಾಯಿತು?

ಎ) 1949 →ಬಿ) 1953

ಸಿ) 1954 →ಡಿ) ಮೇಲಿನ ಯಾವುದೂ ಅಲ್ಲ

ಉತ್ತರ: (ಬಿ)

ವಿವರಣೆ: ಭಾರತ ಸರ್ಕಾರವು ಫಜಲ್ ಅಲಿಯವರ ಅಧ್ಯಕ್ಷತೆಯಲ್ಲಿ 1953ರಲ್ಲಿ ತ್ರಿಸದಸ್ಯ ಆಯೋಗವನ್ನು ನೇಮಿಸಿತು. ಆಯೋಗದ ಇತರ ಸದಸ್ಯರು ಕೆ.ಎಂ. ಫಣಿಕ್ಕರ್ ಮತ್ತು ಎಚ್.ಎನ್. ಖುಂಜ್ರು. ಈ ಆಯೋಗವು 1955ರಲ್ಲಿ ವರದಿಯನ್ನು ಸಲ್ಲಿಸಿತು.

32) ತಮಿಳುನಾಡಿನಲ್ಲಿ ಯಾರ ನೇತೃತ್ವದಲ್ಲಿ ಉಪ್ಪಿನ ಕಾನೂನನ್ನು ಮುರಿಯುವ ಪಾದಯಾತ್ರೆ ಕೈಗೊಳ್ಳಲಾಯಿತು?

ಎ) ಕೆ. ಕೇಳಪ್ಪನ್ →ಬಿ) ಅಬ್ಬಾಸ್ ತ್ಯಾಬ್ಜಿ

ಸಿ) ಸಿ. ರಾಜಗೋಪಾಲಾಚಾರಿ →ಡಿ) ಮಹದೇವ ದೇಸಾಯಿ

ಉತ್ತರ: (ಸಿ)

ವಿವರಣೆ: ದೇಶದಾದ್ಯಂತ ನಾಗರಿಕ ಅಸಹಕಾರ ಚಳವಳಿಯನ್ನು ಆರಂಭಿಸಿದ ಮಹಾತ್ಮ ಗಾಂಧೀಜಿಯವರ ದಂಡಿಯಾತ್ರೆಯಿಂದ ಪ್ರೇರಣೆ ಪಡೆದ ಸಿ. ರಾಜಗೋಪಾಲಾಚಾರಿ ನೇತೃತ್ವದ ಸುಮಾರು 100– 150 ಜನರ ಗುಂಪು ತಿರುಚಿರಪಲ್ಲಿಯಿಂದ ವೇದಾರಣ್ಯಂಗೆ ಪಾದಯಾತ್ರೆ ನಡೆಸಿತು.

33) 1946 ರಲ್ಲಿ ಈ ಕೆಳಗಿನ ಯಾರು ಹಣಕಾಸು ಖಾತೆಯೊಂದಿಗೆ ವೈಸ್‌ರಾಯ್ ಕಾರ್ಯಕಾರಿ ಮಂಡಳಿಗೆ ಸೇರಿದರು?

ಎ) ಮೊಹಮ್ಮದ್ ಆಲಿ ಜಿನ್ನಾ →ಬಿ) ಲಿಯಾಕತ್ ಆಲಿ ಖಾನ್

ಸಿ) ನವಾಬ್ ಸಲೀಮುಲ್ಲಾ →ಡಿ) ಶೌಕತ್ ಆಲಿ

ಉತ್ತರ: (ಬಿ)

ವಿವರಣೆ: ಹಣಕಾಸು ಖಾತೆಯನ್ನು 1946 ರ ಮಧ್ಯಂತರ ಸರ್ಕಾರದಲ್ಲಿ ಲಿಯಾಕತ್ ಅಲಿ ಖಾನ್ ವಹಿಸಿದ್ದರು. ಮಧ್ಯಂತರ ಸರ್ಕಾರದ ಸದಸ್ಯರು, ವೈಸ್‌ರಾಯ್ ಅವರ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿದ್ದರು.

34)→ನಮ್ಮ ದೇಹದಲ್ಲಿ ಗ್ಲೈಕೋಜನ್ ಈ ಕೆಳಗಿನ ಯಾವ ಭಾಗದಲ್ಲಿ ಶೇಖರಣೆಯಾಗುತ್ತದೆ?

ಎ) ಯಕೃತ್ತು →ಬಿ) ಮೇದೋಜೀರಕಾಂಗ

ಸಿ) ಜಠರ →ಡಿ) ಮೇಲಿನ ಯಾವುದೂ ಅಲ್ಲ

ಉತ್ತರ: (ಎ)

ವಿವರಣೆ: ನಮ್ಮ ದೇಹದಲ್ಲಿ ಗ್ಲೂಕೋಸ್ ಪ್ರಮಾಣ ಅಧಿಕವಾದಾಗ, ಅದರ ಸ್ವಲ್ಪ ಭಾಗವು ಗ್ಲೈಕೋಜನ್ ಆಗಿ ಪರಿವರ್ತನೆಗೊಳ್ಳುತ್ತದೆ. ಅದು ಸಾಮಾನ್ಯವಾಗಿ ಯಕೃತ್ತು ಮತ್ತು ಸ್ನಾಯುಗಳಲ್ಲಿ ವಿಶೇಷವಾಗಿ ಅಸ್ಥಿ ಸ್ನಾಯುಗಳಲ್ಲಿ ಶೇಖರಣೆಯಾಗುತ್ತದೆ.

35) ಈ ಕೆಳಗಿನ ಯಾವುದು ಎಂಡೋಪ್ಲಾಸ್ಮಿಕ್ ರೆಟಿಕ್ಯುಲಂನ ಕಾರ್ಯವಾಗಿದೆ?

ಎ) ಕೋಶ ವಿಭಜನೆಗೆ ಸಹಾಯ ಮಾಡುತ್ತದೆ.

ಬಿ)→ಕೋಶೀಯ ಚಟುವಟಿಕೆಗಳಿಗೆ ಅಗತ್ಯವಿರುವ ರಾಸಾಯನಿಕಗಳನ್ನು ಸ್ರವಿಸುತ್ತದೆ.

ಸಿ)→ಮುಪ್ಪಾದ ಜೀವಕೋಶವನ್ನು ನಾಶಪಡಿಸುತ್ತದೆ.

ಡಿ) ಮೇಲಿನ ಯಾವುದೂ ಅಲ್ಲ

ಉತ್ತರ: (ಡಿ)

ವಿವರಣೆ: ಎಂಡೋಪ್ಲಾಸ್ಮಿಕ್ ರೆಟಿಕ್ಯುಲಂ ಜೀವಕೋಶದ ಒಂದು ಭಾಗವಾಗಿದ್ದು, ಇದು ವಿವಿಧ ವಸ್ತುಗಳನ್ನು ಕೋಶದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಮತ್ತು ಒಂದು ಕೋಶದಿಂದ ಇನ್ನೊಂದು ಕೋಶಕ್ಕೆ ಸಾಗಿಸುತ್ತದೆ.

36) ಶ್ವಾನ್ ಮತ್ತು ಶ್ಲೀಡನ್ ಎಂಬ ವಿಜ್ಞಾನಿಗಳು ಪ್ರತಿಪಾದಿಸಿದ ಸಿದ್ಧಾಂತ ಯಾವುದು?

ಎ) ಉತ್ಕರ್ಷಣ ಸಿದ್ಧಾಂತ →ಬಿ) ಕೋಶ ಸಿದ್ಧಾಂತ

ಸಿ) ಪರಮಾಣು ಸಿದ್ಧಾಂತ ಡಿ) ಮೇಲಿನ ಯಾವುದೂ ಅಲ್ಲ

ಉತ್ತರ: (ಬಿ)

ವಿವರಣೆ: ಎಲ್ಲಾ ಸಸ್ಯಗಳು ಮತ್ತು ಪ್ರಾಣಿಗಳು ಜೀವಕೋಶಗಳಿಂದ ಮಾಡಲ್ಪಟ್ಟಿವೆ ಮತ್ತು ಜೀವಕೋಶವು ಜೀವದ ಮೂಲ ಘಟಕ ಎಂಬ ಕೋಶ ಸಿದ್ಧಾಂತವನ್ನು ಶ್ಲೀಡನ್ ಮತ್ತು ಶ್ವಾನ್ ಎಂಬ ಇಬ್ಬರು ಜೀವ ವಿಜ್ಞಾನಿಗಳು ಪ್ರತಿಪಾದಿಸಿದರು.

37) ಜೀವಕೋಶದಲ್ಲಿ ಯಾವುದನ್ನು ‘ಚಲಾವಣೆಯಲ್ಲಿರುವ ಶಕ್ತಿಯ ನಾಣ್ಯ’ ಎಂದು ಕರೆಯುವರು?

ಎ) ಎ.ಟಿ.ಪಿ. →ಬಿ) ಮೈಟೋಕಾಂಡ್ರಿಯ

ಸಿ) ರೈಬೋಸೋಮ್‌ಗಳು →ಡಿ) ಮೇಲಿನ ಯಾವುದೂ ಅಲ್ಲ

ಉತ್ತರ: (ಎ)

ವಿವರಣೆ: ಮೈಟೋಕಾಂಡ್ರಿಯಾ ಜೀವಕೋಶದ ಶಕ್ತಿ ಕೇಂದ್ರವೆಂದು ಹೆಸರಾಗಿದೆ. ಜೀವದ ಉಳಿಯುವಿಕೆಗೆ
ಬೇಕಾದ ಅನೇಕ ರಾಸಾಯನಿಕ ಚಟುವಟಿಕೆಗಳನ್ನು ನಿರ್ವಹಿಸಲು ಅಗತ್ಯವಾದ ಶಕ್ತಿಯನ್ನು ಮೈಟೋಕಾಂಡ್ರಿಯಾವು ಎ.ಟಿ.ಪಿ. (ಅಡಿನೋಸಿನ್‌ ಟ್ರೈ ಫಾಸ್ಪೇಟ್) ಅಣುವಿನ ರೂಪದಲ್ಲಿ ಬಿಡುಗಡೆ ಮಾಡುತ್ತದೆ.

38) ಈ ಕೆಳಗಿನ ಯಾವ ಅಂಗಾಂಶದಲ್ಲಿ ಕೊಬ್ಬು ಸಂಗ್ರಹವಾಗಿರುತ್ತದೆ?

ಎ) ಏರಿಯೋಲಾರ್ →ಬಿ) ಸ್ನಾಯು ರಜ್ಜು

ಸಿ) ಅಡಿಪೋಸ್ →ಡಿ) ತಂತು ಕಟ್ಟು

ಉತ್ತರ: (ಸಿ)

ವಿವರಣೆ: ಅಡಿಪೋಸ್ ಅಂಗಾಂಶವನ್ನು ಬೊಜ್ಜು ಅಂಗಾಂಶ ಎಂತಲೂ ಕರೆಯುವರು. ಉಪವಾಸ ಸಂದರ್ಭದಲ್ಲಿ, ಇಲ್ಲಿ ಸಂಗ್ರಹವಾಗುವ ಕೊಬ್ಬನ್ನು ದೇಹಕ್ಕೆ ಕೊಡುತ್ತದೆ ಹಾಗೂ ದೇಹದ ಶಾಖವನ್ನು ಹೊರಗೆ ಬಿಡದೆ ಉಷ್ಣ ನಿಯಂತ್ರಕವಾಗಿ ಕೆಲಸ ಮಾಡುತ್ತದೆ.

39)→ಈ ಕೆಳಗಿನ ಯಾವ ಇಂಗಾಲದ ಸಂಯುಕ್ತಗಳನ್ನು ಅಗ್ನಿ ಶಾಮಕವಾಗಿ ಬಳಸಲಾಗುತ್ತದೆ?

ಎ) ಕಾರ್ಬನ್ ಡೈಸಲ್ಫೈಡ್ →ಬಿ) ಕಾರ್ಬನ್ ಟೆಟ್ರಾಕ್ಲೋರೈಡ್

ಸಿ) ಕ್ಲೋರೊಫಾರ್ಮ್ →ಡಿ) ಮಿಥಿಲೀನ್ ಕ್ಲೋರೈಡ್

ಉತ್ತರ: (ಬಿ)

ವಿವರಣೆ: ಕಾರ್ಬನ್ ಟೆಟ್ರಾಕ್ಲೋರೈಡ್ (CCl4) ಸಣ್ಣ ಬೆಂಕಿಯನ್ನು ಎದುರಿಸಲು ಅಗ್ನಿಶಾಮಕಗಳಲ್ಲಿ ಸಾಮಾನ್ಯವಾಗಿ ಬಳಸುವ ದ್ರವವಾಗಿದೆ.

(ಪ್ರಶ್ನೋತ್ತರ ಸಂಯೋಜನೆ: www.iasjnana.com

ಸಂಪರ್ಕಕ್ಕೆ: 9916399276)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು